ಪೋಸ್ಟ್‌ಗಳು

ನಿನ್ನನೇ ಸ್ಮರಿಸುತ....

ಇಮೇಜ್
ಹೊಸತಾದ ಮೋಹ ನವಿರಾದ ಭಾವ, ಸೋತಿದೆ ಹೃದಯ ನೋಡುತ ನಿನ್ನ... ಕಾರಣ ಏನೋ, ಕಾತುರವೇಕೋ, ಬಯಸಿದೆ ಸನಿಹ ಮನವು ಇದೇಕೋ... ನಿನ್ನೆಗಳ ನೆನಪಿಲ್ಲ ನಾಳೆಗಳ ಭಯವಿಲ್ಲ, ನೀನಿರಲು ಎದುರಲ್ಲಿ ನಗುವಿಗೆ ನೆಪವಿಲ್ಲ... ಕೇಳೋದು ಯಾರೋ ಹೇಳೋದು ಏನೋ, ನಿಂತಲ್ಲೇ ನಿಂತಿದೆ ಮನವು ಇದೇಕೋ.... ದಿನಗಳು ಹೀಗೇಕೆ, ಗುನುಗುವ ಹಾಡಂತೆ, ನಿನ್ನನೇ ಸ್ಮರಿಸುತ, ಕಾಯುತ ಕೂತಂತೆ... ನೀನು ಯಾರೋ ಈ ಭಾವನೆ ಏಕೋ, ಹುಚ್ಚು ಹಿಡಿಸಿದೆ ಮನವು ಇದೇಕೋ...

ವರ್ಕ್ ಫ್ರಮ್ ಹೋಮ್

ಇಮೇಜ್
      'ಹೋ! ನಿಂಗೀಗ ವರ್ಕ್ ಫ್ರಮ್ ಹೋಮ್, ಅಲ್ವಾ! ಹೇಗಾಗುತ್ತೆ' ಕೋರೋನಾ ಶುರುವಾದ ನಂತರದ ಸಾಮಾನ್ಯ ಪ್ರಶ್ನೆ. ನಾನಂತು 'ನಂಗಂತು ಫುಲ್ ಖುಷಿ' ಅನ್ನೋಳು. ಇನ್ನೊಂದು ಸಾಮಾನ್ಯವಾಗಿ ಕೇಳೋ ಮಾತು, 'ಅಯ್ಯೋ, ಈ ವರ್ಕ್ ಫ್ರಮ್ ಹೋಮ್ ಯಾವಾಗ ಮುಗ್ಯುತ್ತೋ' ಅಂತ. ನಾನಂತು ಈ ಕ್ಯಾಟೆಗರಿ ಅಲ್ಲಪ್ಪ. ಯಾಕಲ್ಲ ಅನ್ನೋದಿಕ್ಕೆ ಕಾರಣ ಇದೆ. ಒಂದ್ ಚಿಕ್ಕ ಫ್ಲಾಷ್ಬ್ಯಾಕ್ ಬಿ.ಸಿ ಟೈಮಿಗೆ, ಅಂದ್ರೆ ಬಿಫೋರ್ ಕೊರೋನಾ ಟೈಮಿಗೆ.     ಕರ್ನಾಟಕ ಕರಾವಳಿಯ ಒಂದು ಭಾಗ, ಉಡುಪಿಯ ಸಾಲಿಗ್ರಾಮ ನಮ್ಮೂರು. ಮಲೆನಾಡಿನ ತಪ್ಪಲು ಪ್ರದೇಶ ಸಿದ್ಧಾಪುರದ ಆಜ್ರಿಯಲ್ಲಿ ಅಜ್ಜನಮನೆ. ಹಾಗಾಗಿ ಪ್ರಕೃತಿಯ ಮಡಿಲಿನಲ್ಲಿ ಬೆಳೆದವಳು. ಬೇಸಿಗೆಯ ರಜೆಯಲ್ಲಿ ಬೆಂಗಳೂರಿನ ನೆಂಟರಿಷ್ಟರ ಮನೆಗೆ ಹೋಗಿಬರ್ತಾ ಇದ್ರೂ, ಆಗೆಲ್ಲಾ ಪ್ರವಾಸದ ಖುಷಿ ಬಿಟ್ಟರೆ ಮತ್ತೇನು ತಲೆಕೆಡಿಸುವ ವಿಚಾರಗಳು ಇರಲಿಲ್ಲ. ಓದಿನ ಉದ್ದೇಶವಾಗಿಯೂ ಊರು ಬಿಡುವ ಪ್ರಸಂಗವೂ ಬಂದಿರಲಿಲ್ಲ.         ಬಿ.ಎಸ್ಸಿಯಲ್ಲಿ ವಿಪ್ರೋಗೆ ಕ್ಯಾಂಪಸ್ ಸೆಲೆಕ್ಷನ್ ಆಗಿತ್ತು. ಯಾವುದೋ ಒಂದು ನಿರ್ಧಾರ, ಹುರುಪಿನಲ್ಲಿ ಸೇರಲು ಬಯಸಿದ್ದೆ. ಹಾಗೇ ಕರೆ ಬಂದಾಗ ನಾನು, ಅಪ್ಪ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ವಿ. ನೆಂಟರಿಷ್ಟರ ಮನೆಯಲ್ಲಿ ಉಳಿದು, ಮರುದಿನ ರಿಪೋರ್ಟ್ ಮಾಡಿಕೊಳ್ಳಲು ಎಲಿಕ್ಟ್ರಾನಿಕ್ ಸಿಟಿಗೆ ಕ್ಯಾಬಿನಲ್ಲಿ ಹೊರಟೆವು‌, ಅದೇ ನಮ್ಮಿಬ್ಬರ ಮೊದಲ ಕ್ಯಾಬ್ ಪಯಣ. ...

ಸಣ್ಣ ಕಥೆ-೪

ಇಮೇಜ್
  ಯಾರೊಂದಿಗೂ ಬೆರೆಯದ, ಸದಾ ಸಿಡುಕುತ್ತಿದ್ದ ಅವಳು, ಅವನಿಂದಾಗಿ ಎಲ್ಲರೊಂದಿಗೆ ಬೆರೆತು, ಸಹನಾಮೂರ್ತಿಯಾದಳು. ಕೊನೆಕೊನೆಗೆ ಮಗುವಿನಂತಾಗಿಬಿಟ್ಟಳು. ಅವನ ನಿಸ್ವಾರ್ಥ ಮಮತೆಗೆ, ಕಲ್ಲಿನಂತಿದ್ದ ಅವಳ ಹೃದಯವೂ ಮೆತ್ತಗಾಗಿತ್ತು. ಪ್ರೀತಿಗೆ ಸೋತಿದ್ದಳು, ತಾಳ್ಮೆಗೆ ಕರಗಿದ್ದಳು. ಮೌನದಲ್ಲಿನ ಮಾತನ್ನು ಅರಿತಿದ್ದಳು. ಅವನೊಂದಿಗೆ ಕಲೆತು, ಕಲಿತಿದ್ದಳು. ಎಲ್ಲಿಂದಲೋ ಬಂತೊಂದು ಬಿರುಗಾಳಿ. ಎಲ್ಲವೂ ಬೇರ್ಪಟ್ಟವು. ಬಂಧಕಾಗಿ ಹೋರಾಡಿ, ಅಸ್ತಿತ್ವವನೇ ಕಳೆದುಕೊಂಡವು. ಆಯಸ್ಕಾಂತವೂ ಸೋತಿತ್ತು, ಆಕರ್ಷಿಸುವಲ್ಲಿ.! ಬಂದಿದ್ದ ಆ ಬಿರುಗಾಳಿ, ಮೇಲ್ಪದರದ ಕಲ್ಮಶವನ್ನೆಲ್ಲ ಹೊತ್ತೊಯ್ದು ತಿಳಿ ಮಣ್ಣನ್ನ ಬಿಟ್ಟಿತೋ ಅಥವಾ ಕಶ್ಮಲದಂತೆ ಕಾಣಿಸುವ ರಕ್ಷಾ ಕವಚವನ್ನೇ ಹೊತ್ತೊಯ್ದಿತೋ.....

ಓ ಮನವೇ..

ಇಮೇಜ್
ನಿರೀಕ್ಷಾಪಥದಲಿ ಸೋತು ಸುಣ್ಣಾಗಿ ವೈರಾಗ್ಯದಿಂದ ಜೀಕುತಿರಲು.. ಮಿನುಗುವ ತಾರೆಗಳತ್ತ  ನೋಟ ಹರಿಯಿತು... ನನ್ನ ನೋಟ ತೆರಳಿತು... ಸುತ್ತಮುತ್ತ ಕಡುಗಪ್ಪು; ಇದ್ದಾಗಲೇ ತಾರೆ ಹೊಳಪು ಇನ್ನಷ್ಟು..! ನನ್ನ ದುಃಖಗಳೆಲ್ಲವೂ  ನಾ ಮಿನುಗಲು ನೆಪವಾಗಬಲ್ಲದೇ? ಪ್ರಶ್ನೆಯೇಕೆ ಓ ಮನವೇ.... ನಿನ್ನ ಮಿತಿ ಆಗಸವೇ ! ಉತ್ಥಾನಗೊಳ್ಳುತಿರು.. ಉತ್ತುಂಗವೇರುತಿರು... ಶೋಭಿಸುವೆ ನೀನು; ಆ ತಾರೆಗಳು ನಿಲುಕದಿಹುದೇ..?!

ಪಯಣ

ಇಮೇಜ್
ನನ್ನ ಪಯಣದಿ ಭರವಸೆಯ ಮೂಟೆಯಿತ್ತು... ಸಿಗುವ ಪ್ರೀತಿಯ ಕೂಡಿಡುವ ಕನಸಿತ್ತು.. ಸಾಗರದಲೆಗಳಂತೆ ಖುಷಿ ಚಿಮ್ಮುತ್ತಿತ್ತು.. ಹೊಸ ಪಯಣದ ಅತ್ಯುತ್ಸಾಹವಿತ್ತು.. ಲೆಕ್ಕವಿಡದಷ್ಟು ಪ್ರೀತಿ ಸಿಗುವಂತಿತ್ತು.. ಪ್ರೀತಿ ನನ್ನ ಕೂಗುವ ಭಾಸವಾಗುತ್ತಿತ್ತು.. ಬಾಚಿ ತಬ್ಬಿದೆ, ಕೈ ತುಂಬಾ ಹಿಡಿದೆ.. ನನ್ನ ಭರವಸೆಯ ಮೂಟೆ ತುಂಬಿದೆ.. ಅಯ್ಯೋ... ನನ್ನ ಮೂಟೆಯಲಿ ಪ್ರೀತಿ ಇರಲಿಲ್ಲ.. ಬರಿಯ ಮೋಸದ ಗಾಳಿಯಿತ್ತು.. ಪ್ರೀತಿ-ನಗುವಿನ ಮುಖವಾಡವಿತ್ತು.. ಅದರ ಹಿಂದೆ ಸುಳ್ಳಿನ ಜಾಲವಿತ್ತು.. ಇದು ನನ್ನ ಪಯಣದ ಕಥೆ.. ಸುಂದರ ರೂಪ-ಆಕರ್ಷಣೆ ಇಲ್ಲ.. ಇದು ನನ್ನ ಪಯಣದ ಕಥೆ.. ಅರಿಯಲಾರಿರಿ ನೀವು... ಚಿತ್ರಕೃಪೆ: ವೈಷ್ಣವಿ ಕೆ.

ಕಂಬ್ಳಿಹುಳದ ಪುರಾಣ

  ಕಾಲ್ಪನಿಕ ಅಲ್ಲ.. ' ಅನುಭವ ಕಥನ '.. ಕಂಬ್ಳಿಹುಳದ್ಬಗ್ಗೆ ಗೊತ್ತಿರೋರ್ಗೆ ಮಾತ್ರ...! ನಾನು ಕುಂದಾಪುರದಿಂದ ಹೊರ್ಟು, ಕೋಟದಲ್ಲಿ ಬಸ್ ಇಂದ ಇಳ್ದೆ. ನಾನು, ಅಮ್ಮ, ಚಿಕ್ಕಮ್ಮ, ಅತ್ತೆ ಎಲ್ಲ ಒಟ್ಟಾಗಿ ಫಂಕ್ಷನ್ಗೆ ಹೋಗ್ಬೇಕಾಗಿರೋದ್ರಿಂದ ನಾನು ಕೋಟ ಬಸ್ ಸ್ಟ್ಯಾಂಡ್ ಅಲ್ಲಿ ಕಾಯ್ಬೇಕಾಯ್ತು. ತುಂಬಾ ಬಿಸ್ಲು ಇರೋದ್ರಿಂದ ಬ‌ಸ್ ಸ್ಟ್ಯಾಂಡ್ ಅಲ್ಲಿರೋ ಬೆಂಚ್ ಮೇಲೆ ಕೂತ್ಕೊಂಡೆ. ಕೂತ್ಕೊಂಡ್ ಕೂಡ್ಲೇ ಅಲ್ಲೇ ನಿಂತಿರೋ ಒಬ್ರು "ಪುಟ್ಟಿ, ಅಲ್ಲಿ ಕೂತ್ಕೋಬೇಡ, ಕಂಬ್ಳಿ ಹುಳ ಇದೆ" ಅಂತ ಹೇಳಿ ಹೋದ್ರು. 'ಓಹ್! ಹೌದಾ' ಅಂತ‌ ಹೇಳಿ, ಇಲ್ಲೇ ಎಲ್ಲೋ ಇದ್ಯೇನೋ ಅನ್ಕೊಂಡು, ನೋಡ್ಲಿಕ್ಕೂ ಹೋಗ್ದೆ, ಅಲ್ಲಿಂದ ಎದ್ದು ಬಂದು ನಿತ್ಕೊಂಡೆ. ಅಷ್ಟ್ರಲ್ಲೇ ಅಲ್ಲೇ ಇರೋ ಗೂಡಾ ಅಂಗ್ಡಿಯೋರು, "ಪುಟ್ಟ, ಪ್ಯಾಂಟ್ ಮೇಲೆ ಕಂಬ್ಳಿ ಹುಳ ಇದೆ ನೋಡು" ಅಂದ್ರು. ಅವ್ರು ಹೇಳಿದ್ದೇ ತಡ, ಎದ್ನೋ ಬಿದ್ನೋ ಅಂತ ಪ್ಯಾಂಟ್ ಕೊಡ್ಕೋಕೆ ಸ್ಟಾರ್ಟ್ ಮಾಡಿದೆ. ಅಂತೂ ಕಂಬ್ಳಿಹುಳ ಕೆಳಗ್ ಬಿತ್ತು. ಈ ರಗ್ಳೆ ಬೇಡ ಅಂತ ಅಲ್ಲಿಂದಾಚೆ ಬಂದು ಬಿಸ್ಲಲ್ಲಿ ನಿಂತ್ಕೊಂಡೆ. ಬಸ್ ಸ್ಟ್ಯಾಂಡ್ ನೋಡ್ತೀನಿ, ಪುಟ್ ಪುಟ್ಟ ಕಂಬ್ಳಿಹುಳಗಳು. 1-2 ಅಲ್ಲಾ ರೀ.. ಬಸ್ ಸ್ಟ್ಯಾಂಡ್ ತುಂಬಾ! ಚಿಕ್ದಾಗಿ, ಬಿಳಿಯಾಗಿ ಇರೋದ್ರಿಂದ ಕೂಡ್ಲೇ ಕಣ್ಣಿಗೆ ಕಾಣ್ಸೋದು ಇಲ್ಲ! (ಬ್ಲ್ಯಾಕ್ ಕಲರ್ ಪ್ಯಾಂಟ್ ಹಾಕೊಂಡ್ ಬಂದಿದ್ದು ಸಾರ್ಥಕ ಆಯ್ತು ಅನ್ಸಿದ್ದು ಮಾತ್ರ ಸುಳ್ಳ...

ಮರೆಯಾದೆಯಾ ಪುಟ್ಟ ಮರಿ....?!

ಇಮೇಜ್
  ಹೆದರಿ ಕೋಣೆಯೊಳಗಿರುತ್ತಿದ್ದ ಪುಟ್ಟ ಮರಿ ನೀನಾಗ ಅದ ನೋಡಿ ಹೊರತಂದು ನಾ ಆಟವಾಡಿಸಿದಾಗ ಕೀಟಲೆ ಮಾಡಿ ಸಂತಸಗೊಳಿಸಿದ ನೀ ಇಂದು ಮರೆಯಾದೆಯಾ..? ಎಲ್ಲರೂ ನಿನ್ನ ಅಂದಕ್ಕೆ ಮಾರುಹೋದಾಗ ಎತ್ತಿ ಆಟವಾಡಿಸಲು ಆರಂಭಿಸಿದರಾಗ ಅಷ್ಟು ಚಂದದಿಂದಿದ್ದ ನೀ ಇಂದು ಕಾಣದಾದೆಯಾ..? ನಾ ಬೇಸರದಲ್ಲಿ ಕುಳಿತಿರುವಾಗ ಸಮಾಧಾನಪಡಿಸುವಂತೆ ನೀ ಬಂದಾಗ ಮುದ್ದು ಮಾಡಿ ಬೇಸರ ಮರೆಸಿದ ನೀ ಇಂದು ನನ್ನ ಅಗಲಿದೆಯಾ..? ಕೀಟಲೆ ಮಾಡಿ ಸಂತಸಗೊಳಿಸುವವರಾರೀಗ? ಒಂಟಿಯಾದಾಗ ಮುದ್ದು ಮಾಡುವವರಾರೀಗ? ಸದಾ ಅಮ್ಮನೊಂದಿಗಿರುತ್ತಿದ್ದ ಮುದ್ದಾದ ಬೆಕ್ಕು ನೀ ನಿನ್ನ ಮೂಕವೇದನೆಯ ಅರಿಯದೆ ಹೋದೆನಾ..?...

ನಮ್ಮ ಆರ್.ಸಿ.ಬಿ ನಮ್ಮ ಹೆಮ್ಮೆ, ಓನ್ಲೀ ಲವ್ - ನೋ ಡವ್

ನಮ್ಮ ಆರ್.ಸಿ.ಬಿ ನಮ್ಮ ಹೆಮ್ಮೆ ಆರು ಕೋಟಿ ಜನರ ಕನಸೊಂದು ಚಿಗುರುತಿದೆ. ಹತಾಶೆಯ ಕಾರ್ಮೋಡ ಮಂಜಿನಂತೆ ಕರಗುತ್ತಿದೆ. ಕೆಚ್ಚೆದೆಯ ಕಲಿಗಳು ಆಡುತಿರೆ ಅಂಗಳದಲ್ಲಿ. ಉತ್ಸಾಹದ ಕಿರಣಗಳು ಹೊರಹೊಮ್ಮುತ್ತಿದೆ ಕನ್ನಡಿಗರಲ್ಲಿ. ಏನೇ ಇರಲಿ, ಏನೇ ಬರಲಿ ಆಗುವುದೆಲ್ಲಾ ಒಳ್ಳೆಯದಕ್ಕೇ ಆಗಲಿ. ಈ ಸಲವಾದರೂ.. ಐ. ಪಿ. ಎಲ್ ಕಪ್ಪು ನಮ್ಮದಾಗಲಿ. ಹಾಗೆ ಭಕ್ತಿಯಿಂದ ಹೇಳಿ ಜೈ ಆರ್.ಸಿ.ಬಿ. Only ಲವ್ , ನೋ dove ಐ.ಲವ್.ಯು ಎಂದು ಹೇಳಿದರೂ ನೀ ತಿರುಗಿ ನೋಡಲಿಲ್ಲವೇ ಓ ನನ್ನ ನಲ್ಲೆ. ಕೇಳಿಸಿಯೂ ನಿನಗೆ ಕೇಳಿಸಿಲ್ಲವಂತೆ ನಟಿಸುವೆ ಎಂದು ನಾನು ಬಲ್ಲೆ. ಸಮರ್ಪಿಸುವೆ ನನ್ನೆಲ್ಲಾ ಭಾವನೆಗಳು, ಮನಸ್ಸನ್ನು ನಿನ್ನಲ್ಲೇ. ನೀನು ಒಪ್ಪಿದರೆ ನಿನ್ನ ಪಿತನೊಡನೆ ಮಾತಾಡುವೆ ಈಗಲೇ. ಪ್ರೀತಿಯ ನಿವೇದನೆಯನ್ನು ಉಣಬಡಿಸುವೆ ನಾನಿಂದು. ಸವಿದು ಸಂತೃಪ್ತಳಾಗು ಓ ನನ್ನ ದೇವತೆ. ನಿನ್ನಯ ಪ್ರತ್ಯುತ್ತರಕ್ಕೆ ಕಾಯುತಿದೆ ನನ್ನ ಹೃದಯ. ಕನಸಿನಲ್ಲೂ ಬಂದು ನನ್ನ ಹೃದಯವನ್ನು ಬಡಿದೆಯಾ...ಬಡಿದೆಯಾ…ಬಡಿದೆಯಾ. - ಶ್ರೀನಿಧಿ ಮಧ್ಯಸ್ಥ ಕಾರ್ಕಡ  ಸಾಹಿತ್ಯ ಪ್ರಪಂಚಕ್ಕೆ ಪುಟ್ಟ, ಮೊದಲ ಹೆಜ್ಜೆ ಇಟ್ಟಿರುವ ನಮ್ಮ ಸಹೋದರನಿಗೆ ಅಭಿನಂದನೆಗಳನ್ನು ತಿಳಿಸುತ್ತ, ಇದೊಂದು ಅವನ ಬೆನ್ನು ತಟ್ಟುವ ಪ್ರಯತ್ನ... 

ನಿನ್ನ ನೆನಪಿನಲಿ...

ಇಮೇಜ್
  ಮಿಟುಕುವ ಕಣ್ರೆಪ್ಪೆಗಳಲಿ ಅದರುವ ಅಧರಗಳಲಿ ನಿಮಿರುವ ಕರ್ಣಗಳಲಿ ಅಕ್ಕರೆಯ ನುಡಿಗಳಲಿ ಸ್ಪರ್ಶದ ಹಿತಭಾವದಲಿ ಬೆಚ್ಚನೆಯ ಅಪ್ಪುಗೆಯಲಿ ಮನದ ಉಲ್ಲಾಸದಲಿ ಮಮತೆಯ ಮಡುವಿನಲಿ ನಿನ್ನ ನೆನಪಿನಲಿ ನನ್ನನ್ನೇ ಮರೆತಿರುವೆನಿಲ್ಲಿ...

ತಂಗಾಳಿಯೇ ನಿನ್ನ ಜೊತೆಜೊತೆಗೆ...

ಇಮೇಜ್
ತಂಗಾಳಿಯೇ ನಿನ್ನ ಜೊತೆಜೊತೆಗೆ  ಕನಸಿದು ಕಾಡಿದೆ ಮನಸೊಳಗೆ.. ಸೇರಲೇ ಆ ಭಾವನೆಗಳ ಸುಳಿಗೆ ಮರೆತು ಅಡಗಲೇ ನಿನ್ನೊಳಗೆ.. ನಾ ನಡೆಯುವ ಮುಳ್ಳಿನ ಹಾದಿಯಲಿ ನೆನೆಯುವೆ ನಿನ್ನ ಸನಿಹವನು.. ಕಾಡುವ ಕನಸಿನ ಗುಹೆಯೊಳಗೆ ಬಯಸಿಹೆ ನಿನ್ನ ಸ್ಪರ್ಶವನು... ಮುನಿಸು ತೋರದಿರು ನೀನು ಸರಿದು ಹೋಗದಿರು ಎಂದೂ.. ಮಗುವಾಗಲೇ ಮತ್ತೆ ನಾನು ಹೇಳು ಗೆಳೆಯ ನೀನು... ತಂಗಾಳಿಯೇ ಬರುವೆ ನಿನ್ನೊಡನೆ ಕನಸಲಿ ಕಾಡುವ ಜಗದೆಡೆಗೆ.. ಸೇರುವೆ ಆ ಭಾವನೆಗಳ ಸುಳಿಗೆ  ಮರೆತು ಅಡಗುವೆ ನಿನ್ನೊಳಗೆ... ವೈಷ್ಣವಿ ಕೆ.