ಪೋಸ್ಟ್‌ಗಳು

ಈಗೊಂದು ಸೋನೆ ಮಳೆ

ತಲ್ಲಣ ಒಂದೆಡೆ, ಜ್ವಾಲಾಗ್ನಿ ಒಂದೆಡೆ, ಹೊತ್ತಿ ಉರಿಯುತಿತ್ತು ಹೃದಯ... ಹೊರಗೊಂದು ನಗು, ಒಳಗೆ ಖಾಲಿ ಚಿಂತೆ ಉತ್ತರವಿರದ ಪ್ರಶ್ನೆಗಳು, ಬೆವರಿಳಿಸುವ ಕಲ್ಪನೆ ಮಾತು ಮಾತಿಗೂ ಮೌನ ಮೌನದೊಳಗೆ ಆಕ್ರಂದನ ಮತ್ತೆ ಕಣ್ಣೀರು.. ಆದರೆ ಈಗೊಂದು, ಸೋನೆ ಮಳೆ, ಹೃದಯದಲಿ ಬಯಸಿದ್ದೂ ಅಲ್ಲ, ಎಣಿಸಿದ್ದೂ ಇಲ್ಲ, ಅದೆಲ್ಲಿಂದ ಬಂತೋ, ತಂಪು ತಂತು ಕಾದ ಹೃದಯಕೆ,  ಕಾಯದೇ... ಕರೆಯದೇ...

ಶ್ರೀರಾಮ

ಇಮೇಜ್
ಶ್ರೀರಾಮ ರಾಮ ನಾನು ಕಾಯುತಿಹೆನು ನಿನ್ನ ರೂಪು ನೋಡಲು  ನೋಡಿ ಮನದುಂಬಿಕೊಂಡು  ಬದುಕ ಸಫಲಗೊಳಿಸಲು ಚಂಚಲತೆಯ ಮನಕೆ ನೀನು  ಸ್ಥಿರತೆಯನ್ನು ನೀಡೆಯಾ ಸೋತು ಹೋದ‌ಜೀವಕೆ ಸಹಾನುಭೂತಿ ತೋರೆಯಾ ನಿನ್ನ ಧ್ಯಾನ-ಭಕ್ತಿಯಲ್ಲಿ ನನ್ನ ಮನವು ತುಂಬಲಿ ಪ್ರತಿ ನಾಡಿ ಮಿಡಿತದಲ್ಲಿ ನಿನ್ನ ನಾಮವೊಂದೇ ಕೇಳಲಿ ದುರ್ವಿಚಾರ ದೂರವಾಗಿ ಮನವು ಹಿಗ್ಗಿ ಕುಣಿಯಲಿ ನಿನ್ನ ಮಮತೆಯೊಂದೇ ಎನ್ನ ಪೊರೆವ ಶಕ್ತಿಯಾಗಲಿ ತಾಯಿ ಆಸೆಯಿಂದ ಕಾಯ್ವ ಮಗುವಿನಂತೆ ಕಾಯುವೆ ನಿನ್ನ ನಾಮ ಸ್ಮರಣೆಯಲ್ಲೇ ಎನ್ನ ಬದುಕ ಸವೆಸುವೆ ರಾಮ ನಾನು ಕಾಯುತಿಹೆನು....

ಹಗ್ಗದ ಮೇಲಿನ ನಡಿಗೆ

ಇಮೇಜ್
ಆಕೆಯದು, ಹೊಟ್ಟೆಪಾಡಿಗಾಗಿ ಹಗ್ಗದ ಮೇಲಿನ ನಡಿಗೆ ಹಗ್ಗದ ಮೇಲವಳ ಗಮನವೋ, ಕೋಲಿನ ಮೇಲೋ.. ಉಹೂಂ, ಎರಡರ ಮೇಲೂ ಇದ್ದಂತಿಲ್ಲ.. ಅವಳು ಕಲಿತ ವಿದ್ಯೆಯದು, ಅಭ್ಯಾಸವಾಗಿಬಿಟ್ಟಿದೆ.. ಬಿದ್ದೆನೆಂಬ ಭಯವಿಲ್ಲ,  ವಿಶ್ವಾಸವುಂಟು, ಅವಳ ಮೇಲವಳಿಗೇ...  ನಾಳೆ ಇನ್ನೆಲ್ಲೋ, ಹೊಟ್ಟೆಪಾಡೆಂತೋ ಯಾವ ಚಿಂತೆಯಿಲ್ಲ,  ಏನರಿಯದ ಮೊಗದಲ್ಲಿ  ಮುಗ್ಧತೆಯಷ್ಟೇ...  ನನ್ನದು,, ನನ್ನದೂ ಕಾಣದ ಹಗ್ಗದ ಮೇಲಿನ ನಡಿಗೆಯೇ...  ಗಮನ ಹೆಜ್ಜೆಯ ಮೇಲೋ, ದಾರಿಯ ಕಡೆಗೋ.. ಬದುಕು ಬಂದಂತೆಲ್ಲಾ ನಡೆದುಬಿಡಬೇಕು, ಅಪ್ಪಿಯೋ ಒಪ್ಪಿಯೋ  ಸಾಗಿಬಿಡಬೇಕು ಬಿದ್ದೆನೆಂಬ ಭಯವಿಲ್ಲ, ನಂಬಿಕೆಯುಂಟು, ದೇವನೊಬ್ಬನ ಮೇಲೆ...  ನಾಳೆಯೆಂತೋ, ನನ್ನ ಒಯ್ಯುವುದೆಲ್ಲಿಗೋ.. ಚಿಂತೆಯೇತಕೆ, ಹುಟ್ಟಿಸಿದವ ಹುಲ್ಲುಮೇಯಿಸದಿರಲು, ನಗುಮೊಗವಷ್ಟೇ..

#ನೀನು

ಇಮೇಜ್
  ದೂರದಲಿದ್ದು ನಿನ್ನಂದ ನೋಡಿದ ಆ ಜನುಮ ಸಾಕಾಯ್ತು ಎನಗೆ.. ಸನಿಹದ ಸುಖವನನುಭವಿಸಲೆಂದೇ ನಿನ್ನೊಡನೆಯೇ ಹುಟ್ಟಿ ಬಂದಿರುವೆ! !  

ಕನ್ನಡ

ಇಮೇಜ್
  ಕನ್ನಡ   ಅಮ್ಮಾ ಎನ್ನುವುದು ಹುಟ್ಟಿದಾ ಕಂದ ಅದನ್ನು ಕೇಳಲೆಷ್ಟು ಚೆಂದ ಕನ್ನಡ ನಾಡೇ ಬಲು ಅಂದ ಕನ್ನಡ ನುಡಿಯು ಬಹು ಚೆಂದ ಆಂಗ್ಲಭಾಷೆ ಕಲಿಯಬೇಕು ಮಾತೃಭಾಷೆ ಬೆಳೆಯಬೇಕು ಕನ್ನಡ ಮಾಧ್ಯಮವ ಉಳಿಸಬೇಕು ಕನ್ನಡ ಸಂಸ್ಕೃತಿಯ ರೂಢಿಸಬೇಕು ಕನ್ನಡಾಂಬೆಯ ಮಕ್ಕಳು ನಾವು ನಮ್ಮಿಂದಾಗುತಿದೆ ಅವಳಿಗೆ ನೋವು ಕನ್ನಡ ಉಳಿಸಿ, ಅವಳನು ರಕ್ಷಿಸಿ ಬದುಕನು ಸಾರ್ಥಕವಾಗಿಸಿ..

ನಾನೊಂದು ಚಿಟ್ಟೆಯಾಗಿದ್ದರೆ.....

ಇಮೇಜ್
ನಾನೊಂದು ಚಿಟ್ಟೆಯಾಗಿದ್ದರೆ..... ಬಾನಂಗಳದಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದೆ ಹೂವಿಂದ ಹೂವಿಗೆ ಪುಟಿಯುತ್ತಿದ್ದೆ ಪುಷ್ಪರಸವ ಹೀರಿ ಸವಿಯುತ್ತಿದ್ದೆ ಸರ್ವರ ಕಣ್ಮಣಿಯಾಗಿರುತ್ತಿದ್ದೆ ಕ್ಷಣಕ್ಷಣಕ್ಕೂ ನೋಡುಗರಿಂದ ಮರೆಯಾಗುತ್ತಿದ್ದೆ ಅರಸುವ ಕಣ್ಗಳಿಗೆ ಆಟವಾಗುತ್ತಿದ್ದೆ ಎಲ್ಲರ ಮನಸ್ಸನ್ನು ಸೆರೆ ಹಿಡಿಯುತ್ತಿದ್ದೆ  ನಾನೊಂದು ಚಿಟ್ಟೆಯಾಗಿದ್ದರೆ.....

ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ‌

ಇಮೇಜ್
  ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ‌ ಮಣಿಪಾಲದಲ್ಲಿರೋ ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ‌ ಬಗ್ಗೆ ತುಂಬಾ ಕೇಳಿರೋದ್ರಿಂದ, ಒಮ್ಮೆ ಭೇಟಿ ನೀಡಬೇಕು ಎಂಬ ಇಂಗಿತವಿತ್ತು. ಸ್ಥಳದ ಕುರಿತು ಸ್ವಲ್ಪ ವಿಷಯ ತಿಳಿದುಕೊಂಡೇ ಹೋಗಿದ್ರೂ, ಕೊಂಕಣ‌ ಸುತ್ತಿ ಮೈಲಾರಕ್ಕೆ ಬಂದ‌ ಹಾಗಾಗಿತ್ತು ನಮ್ಮ ಸ್ಥಿತಿ.‌ ಉಡುಪಿಯಿಂದ ಐದಾರು ಕಿಲೋಮೀಟರ್ ದೂರದಲ್ಲಿರೋ ಈ ಸ್ಥಳವನ್ನು ೧೦-೧೫ ಕಿಲೋಮೀಟರ್ ಮಾಡಿಕೊಂಡು ಅಂತೂ ಆ ಜಾಗವನ್ನು ತಲುಪಿದೆವು. ಪ್ರವೇಶ ದ್ವಾರದಲ್ಲೇ ಇರೋ ಕೌಂಟರ್ ಅಲ್ಲಿ ಇರೋ ವ್ಯಕ್ತಿಗೆ ಹಣವನ್ನು ನೀಡಿ, ಟಿಕೆಟ್ ತೆಗೆದುಕೊಳ್ಳಬೇಕು. ಸ್ಥಳದ ಕುರಿತು ಸ್ವಲ್ಪ ಮಾಹಿತಿ ನೀಡುವ ಅವರು, ಅಲ್ಲೇ ಇರೋ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ಹೇಳುತ್ತಾರೆ. ಸ್ಕ್ಯಾನ್ ಮಾಡಿದರೆ ಆ ಸ್ಥಳದಲ್ಲಿರೋ ೨೪ ಕಟ್ಟಡಗಳ ಸಂಪೂರ್ಣ ಮಾಹಿತಿ, ಅದರ‌ ವಿಶೇಷತೆಗಳಿರುವ ಕೈಪಿಡಿ ಲಭ್ಯವಾಗುತ್ತದೆ. ೧೯೯೭ ರಲ್ಲಿ ಆರಂಭವಾದ ಈ ಮ್ಯೂಸಿಯಂನ ರೂವಾರಿ ದಿ| ವಿಜಯನಾಥ ಶೆಣೈ. ಹಸ್ತಶಿಲ್ಪ ಹೆರಿಟೇಜ್ ಹೌಸ್‌ ನಿರ್ಮಿಸಲು ಹೋಗಿ ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ‌ ಆಗಿದ್ದು ಈಗ ಇತಿಹಾಸ. ಹಳೆಯ, ಸಾಂಪ್ರದಾಯಿಕ, ಐತಿಹಾಸಿಕ ಕಟ್ಟಡಗಳು, ಅವಶೇಷಗಳು, ಕರಕುಶಲ ವಸ್ತುಗಳು, ವಿವಿಧ ಶೈಲಿಯ ಉಪಕರಣಗಳನ್ನು ಸಂಗ್ರಹಿಸಿ, ಮುಂದಿನ ತಲೆಮಾರಿಗೆ ಪರಿಚಯಿಸುವ, ಪ್ರೇರೇಪಿಸುವ ದೃಷ್ಟಿಯಿಂದ ಎಲ್ಲಾ ವಸ್ತುಗಳನ್ನು ಜತನವಾಗಿರಿಸಿದ್ದಾರೆ. ಕರ್ನಾಟಕವಷ್ಟೇ ಅಲ್ಲದೆ ವಿವಿಧ ರ

ಕೃಷ್ಣ ಕೃಷ್ಣ

ಇಮೇಜ್
ನನ್ನೊಳಗೆ ನೀನು, ನನ್ನೆಲ್ಲವೂ ನೀನು, ಈ ಜನುಮದ ಸಾರ, ಸಾಕಾರ ನೀನು ಗುರಿತೋರು ಗುರುವಾಗು ನಿನ್ನೆಡೆಗೆ ಸೆಳೆದು, ಬೇರೇನ ಬೇಡೆನು, ನಿನ್ನ ಪ್ರೇಮದ ಹೊರತು! ಮನಸೊಳಗೆ ಸಿಕ್ಕು ಸುಕ್ಕಾಗಿ ಕೂತಿಹುದು ಇಹಪರದ ಕೊನೆಯಿರದ ಬೇಗುದಿಗಳು ನಿನ್ನ ಚರಣಗಳಲಿ ನನ್ನ ಮುಡಿಯಿಟ್ಟು ಲೀನವಾಗುವವರೆಗೆ ನಿನ್ನೆಡೆ ದಾರಿತೋರು! ಹೇ ಕೃಷ್ಣಾ...!

ಯುನೈಟೆಡ್ ಬ್ರೂವರೀಸ್ ಅಲ್ಲಿ- ಹೀಗೊಂದು ದಿನ...

  ಯುನೈಟೆಡ್ ಬ್ರೂವರೀಸ್ ಅಲ್ಲಿ- ಹೀಗೊಂದು ದಿನ.. ನಮ್ಮ ವಿಭಾಗದಿಂದ ಆಯೋಜಿಸಿದ್ದ, ಕೈಗಾರಿಕಾ ಭೇಟಿಯ ಭಾಗವಾಗಿ ನಾವು ಮೊದಲು ತೆರಳಿದ್ದು, ಬೈಕಂಪಾಡಿ ಹತ್ತಿರ ಇರೋ ಯುನೈಟೆಡ್ ಬ್ರೂವರೀಸ್(United Breweries)ಗೆ. ಕರ್ನಾಟಕದಲ್ಲಿರೋ ಅವರ ಮೂರು ಶಾಖೆಗಳಲ್ಲಿ ಇದೂ ಒಂದು. ಇದು ಮದ್ಯ ಉತ್ಪಾದಿಸೋ  ಕೈಗಾರಿಕೆ (Brewing/beer producing industry). ಯು.ಬಿ.ಯ ಬಿಯರ್ ಉತ್ಪನ್ನಗಳಲ್ಲಿ ಕಿಂಗ್ ಫಿಶರ್ ಮುಖ್ಯವಾದುದು. ಅದ್ರಲ್ಲೂ ಸ್ಟ್ರಾಂಗ್, ಬ್ಲೂ, ಡ್ರಾಟ್ ನಂತಹ ವಿವಿಧ ಫ್ಲೇವರ್ ಗಳುಂಟು. ಯುಬಿಯು ಹೈನೆಕೆನ್ ಕಂಪೆನಿಯ ಭಾಗವಾದ ನಂತರ, ಹೈನೆಕೆನ್ ಇತ್ತೀಚೆಗೆ ತಯಾರಿಸಲ್ಪಡುತ್ತಿರುವ ಉತ್ಪನ್ನ. ಅವರ ಕೈಗಾರಿಕೆಗೆ ಪ್ರವೇಶಿಸಲು ಅವರಿಂದ ವಿಶೇಷ ಅನುಮತಿ ಪಡೆದುಕೊಳ್ಳೋದು ಕಡ್ಡಾಯ. ಹಾಗೆಯೇ ಅವರದೇ ಆದ ವಿಶೇಷ ನಿಯಮಗಳೂ ಉಂಟು.  ಅನುಮತಿ ಪತ್ರ ತೋರಿಸಿದ ನಂತರ‌, ಎಲ್ಲರ ಹೆಸರನ್ನು ಬರೆದುಕೊಂಡು, ಅವರ ಕೆಲವು ನಿಯಮಗಳನ್ನು ಹೇಳಿ ಒಳಗೆ ಬಿಟ್ಟರು. ಅಲ್ಲಿಯ ಎಚ್.ಆರ್. ಅವರ ಉದ್ಯಮದ ಬಗ್ಗೆ, ವಿವಿಧ ಉತ್ಪನ್ನಗಳ ಬಗ್ಗೆ ತಿಳಿಸಿದರೆ, ಇನ್ನೊಬ್ಬರು ನಿಯಮಗಳನ್ನು, ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸಿದರು. ಸ್ವಲ್ಪ ಮಳೆ ಹನಿಯ ನಡುವೆಯೇ, ಉತ್ಪಾದನಾ ಸ್ಥಳಕ್ಕೆ ಹೋದೆವು. ಅಲ್ಲಿಯ ಗುಣಮಟ್ಟ ನಿಯಂತ್ರಣಾಧಿಕಾರಿ, ಮದ್ಯ ಉತ್ಪಾದನೆಗೆ ಉಪಯೋಗಿಸುವ ಕಚ್ಚಾ ಮತ್ತು ರಾಸಾಯನಿಕ ವಸ್ತುಗಳ ಬಗ್ಗೆ ತಿಳಿಸಿ, ಅವುಗಳ ಗುಣಮಟ್ಟ ಪರೀಕ್ಷೆ & ನಿಯಂತ್ರಣಾ ಸ್ಥಳ,

ಮಳೆ

ಇಮೇಜ್
  ಮಳೆ   ಬಸವಳಿದಿಹ ಇಳೆಯೂ ಸತ್ತಂತಿಹ ಮೊಳೆಯೂ ಕಾಯುತಿಹರು ಮಳೆಗಾಗಿ ಮಳೆಯ ಸಂಗಕಾಗಿ.. ಮೋಡಗಳ ಮಿಲನವಾಗಿ ಗುಡುಗು ಮಿಂಚಿನೊಡಗೂಡಿ ಆಗಮಿಸಿದ ಮಳೆರಾಯ ಭುವಿಯ ಭೇಟಿಗಾಗಿ! ಧರೆ ಮಿಂದು ತಂಪಾಗಲು ಮೊಗ್ಗರಳಿ ಹಿರಿದಾಗಲು ಹಸಿರು ಸೀರೆಯುಟ್ಟಳು ನೀರೆ ಪ್ರಕೃತಿ ಮಾತೆಯು.. ವನಧಿ ತುಂಬಿ ತುಳುಕಲು ವದನದಿ ನಗು ಮೂಡಿತು. ಜೀವಿಗಳ ಜೀವ ತುಂಬೋ ಇಳೆ ಮಳೆಯ ಮಿಲನವಾಯ್ತು..