ಪೋಸ್ಟ್‌ಗಳು

ನವೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಊರೆಲ್ಲಾ ದೀಪಾವಳಿ- ಆದರೆ!

ಇಮೇಜ್
  "ಓಹ್ ಭಟ್ರೇ, ದೀಪಾವಳಿ ಈ ಸಲ ಜೋರಾ?" ಗೋಪಾಲ ಭಟ್ಟರನ್ನ ಶೇಖರ ಕೂಗಿದ. "ಇಲ್ಲ ಮಾರಾಯ" ಎಂದು ಅವರು ಮುನ್ನಡೆದರು. ಅಲ್ಲೇ ಇದ್ದ ಶೇಖರನ ಅಪ್ಪ ರಾಮ "ನಿಂಗೇನು ಮಂಡೆಪೆಟ್ಟನಾ, ಅವ್ರ ಮನೇಲಿ ಇನ್ನೆಲ್ಲಿ ದೀಪಾವಳಿ! ಹೋದ ವರ್ಷ ಆಗಿದ್ದೆಲ್ಲಾ ನೆನಪಿದೆ ಅಲ್ವಾ" ಎಂದರು. "ಅಯ್ಯೋ, ಹೌದಲ್ಲ ಅಪ್ಪ. ಅವರಿಗೆ ಸುಮ್ಮನೆ ನೋವು‌ ಮಾಡಿದ ಹಾಗಾಯ್ತು ನೆನಪಿಸಿ" ಎಂದ. ಸಂಜೆಯ ಹೊತ್ತಿಗೆ ರಾಮ ಗೋಪಾಲಯ್ಯರ ಮನೆಗೆ ಹೋದ. "ಹೋ! ಬಾ ರಾಮ. ಒಟ್ಟಿಗೆ ಚಹಾ ಕುಡಿಯುವ" ಎಂದರು ಗೋಪಾಲಯ್ಯ. " ಬೇಡ ಅಂದ್ರೆ ನೀವು ಬಿಡಬೇಕಲ್ಲ" ಎಂದ ರಾಮ. ಇಬ್ಬರೂ ಚಹಾ ಕುಡಿಯುತ್ತಾ ಲೋಕಾರೂಢಿಯ ಎಲ್ಲಾ ಮಾತುಗಳನ್ನೂ ಮುಗಿಸಿ ಕೊನೆಗೆ ಭಟ್ಟರು, "ಅವನಿದ್ದಿದ್ದರೆ ನಮಗೂ ದೀಪಾವಳಿ ಇರುತ್ತಿತ್ತು. ಈಗೆಲ್ಲಿಯ ದೀಪಾವಳಿ ಅವನೇ ಹೋದ ಮೇಲೆ. ಹಣೇಲಿ ಬರೆದಿರಬೇಕು ಪಡೆದದ್ದನ್ನು ಉಳಿಸಿಕೊಳ್ಳಲು" ಎಂದರು. "ಏನು ಮಾಡುವುದು. ದೇವ್ರಿಗೆ ರಂಗಯ್ಯ ಎಂದರೆ ಬಹಳ ಪ್ರೀತಿ ಇರಬೇಕು, ಈಗ ಮತ್ತೇಕೆ ಮನಸಿಗೆ ನೋವು ಮಾಡಿಕೊಳ್ತೀರ ಬಿಡಿ" ಎಂದ ರಾಮ.  ಹಿಂದಿನ ವರ್ಷ, ಗೋಪಾಲ ಭಟ್ಟರ ಮನೆಯಲ್ಲಿ ದೀಪಾವಳಿ ಆಚರಿಸಲು ಸಿದ್ಧತೆ ಭರದಿಂದಲೇ ಸಾಗಿತ್ತು. ಅವರ ಒಬ್ಬನೇ ಮಗ ರಂಗನಾಥ ಪೌರೋಹಿತ್ಯ ವೃತ್ತಿಯಲ್ಲಿ ಇದ್ದರು. ಮದುವೆಯ ವಯಸ್ಸಿನ ಸುಂದರ ಯುವಕ. ದೀಪಾವಳಿಯ ದಿನವೂ ಬೆಳಿಗ್ಗೆ ರಂಗನಾಥ ಭಟ್ಟರು ಒಂದು ಮನೆಗೆ

ಏಕಾಂಗಿ ನಾನು....

ಇಮೇಜ್
  ಏಕಾಂಗಿ..... ನಾನು ಏಕಾಂಗಿ.... ತೆರೆಯ ಮೊರೆತಕೆ ತೀರವು ಸಂಗಾತಿಯಾದಾಗ ಜಲದ ರಭಸಕೆ ತಡೆಯು ಸಂಗಾತಿಯಾದಾಗ ದಡದಿ ಕುಳಿತಿಹ ನಾನು ಏಕಾಂಗಿ..... ಕತ್ತಲಿನ ನಿಶ್ಶಬ್ದಕೆ ತಂಗಾಳಿಯು ಸಂಗಾತಿಯಾದಾಗ ಚಂದ್ರನ ಬೆಳಕಿಗೆ ತಾರೆಗಳು ಸಂಗಾತಿಯಾದಾಗ ಸೊಬಗ ಸವಿಯುತಿಹ ನಾನು ಏಕಾಂಗಿ..... ಸಾಗುವ ದೋಣಿಗೆ ಗಾಳಿಯು ಸಂಗಾತಿಯಾದಾಗ ದೋಣಿಯ ಹುಟ್ಟಿಗೆ ಅಲೆಯು ಸಂಗಾತಿಯಾದಾಗ ನಾವೆಯ ಪಯಣಿಗ ನಾನು ಏಕಾಂಗಿ..... ಮಾತಿನ ವ್ಯಕ್ತಿತ್ವಕೆ ಮೌನವು ಸಂಗಾತಿಯಾದಾಗ ಅಳುವಿನ ಮೊಗಕೆ ನಗುವು ಸಂಗಾತಿಯಾದಾಗ ಭಾವನೆಯ ಅಭಿವ್ಯಕ್ತಿಗೊಳಿಸುವ ನಾನು ಏಕಾಂಗಿ..... ಚಿತ್ರ: ಅರುಂಧತಿ 

ಇದು..... ಬದುಕು.....!

ಇಮೇಜ್
  ಇದು........ ಬದುಕು.......! ಚಿತ್ರ: ವೈಷ್ಣವಿ ಕೆ  ಬದುಕು ಕೆಲವೊಮ್ಮೆ ಮರೀಚಿಕೆಯಂತೆ! ಕಂಡೂ ಕಾಣದ ವಿಸ್ಮಯ...! ಈ ಬಿಸಿಲ್ಗುದುರೆ ಒಂದೊಮ್ಮೆ ಬದುಕಾಗಿ ಸವಾರಿ ಹೊರಟರೆ........... ಬದುಕೆಂಬ ಬಿಸಿಲುಗುದುರೆ ನೋವೊಳಗೆ ನಲಿವುಂಡು ಬಿರುಮಳೆಯ ಕ್ಷಣದಲೂ ಬೆಚ್ಚನೆ ಹೊರಗೋಡಿತು.. ಪ್ರೀತಿ ಮುಖವಾಡದೊಳಗೆ ದ್ವೇಷದ ಜ್ವಾಲಾಗ್ನಿಯನು ತಾತ್ಸಾರ ಭಾವವನೂ ನೋಡಿ ನಿಬ್ಬೆರಗಾಯಿತು.. ಕಾಮಕ್ರೋಧದ ಸುಳಿಯೊಳಗೆ ಸತ್ಯ-ಅಹಿಂಸೆಯು ಸಿಲುಕಿರಲು ಮಾತೂ ಮರೆಯಲವಿತಿರಲು ಮನವು ಹೇವರಗೊಂಡಿತು.. ವಿಘಾತದ ಅರಳುವಿಕೆಗೆ ನೆಪವಾದ ಅಸ್ಥಿರತೆಯನು ಧೈರ್ಯದಿಂದ ಓಡಿಸಲು ವಿಖ್ಯಾತಿಗೊಂಡು ಹೆಮ್ಮೆಯಾಯ್ತು.. ಅಕ್ಕರೆಯ ಕರದೊಳಗೆ ಪ್ರೀತಿಯ ಹಂಚುತಿರಲು ಹೃದಯವು ಮುದಗೊಂಡು ಬಿಸಿಲ್ಗುದುರೆ ಅದೃಶ್ಯವಾಯ್ತು..

ಜೇನುಗೂಡಿನೊಳಹೊಕ್ಕು.....!

ಇಮೇಜ್
ಸಂಘಜೀವಿ ಎಂದೊಡನೆ ನೆನಪಾಗೋದು ಮನುಷ್ಯ. ಮಾನವನ ಹಾಗೆ ಕೆಲವು ಪ್ರಾಣಿ, ಪಕ್ಷಿ, ಕೀಟಗಳಲ್ಲೂ ಸಂಘಜೀವನವನ್ನು ನೋಡಬಹುದು. ನಾನೀಗ ಹೇಳ್ಬೇಕು ಅನ್ಕೊಂಡಿರೋದು ಜೇನುಹುಳಗಳ ಬಗ್ಗೆ!.. ನೀವು ನೋಡಿರೋ ಹಾಗೆ, ಜೇನುಹುಳುಗಳು ಗುಂಪಿನಲ್ಲಿ ವಾಸ ಮಾಡುತ್ತವೆ. ಅವುಗಳಲ್ಲಿ ಹಲವು ತಳಿಗಳು, ಜೀವಿವರ್ಗಗಳಿವೆ. ಒಂದು ಗೂಡಿನಲ್ಲಿ ೧೦೦೦-೬೦೦೦೦ ಜೇನುಹುಳುಗಳು ಇರಬಹುದು. ಅವುಗಳಲ್ಲಿ ೩ ರೀತಿಯ ಜಾತಿಗಳಿವೆ. ಅಯ್ಯೋ, ಇದೇನಪ್ಪಾ ಜೇನುಹುಳಗಳಲ್ಲೂ ಜಾತಿ ವ್ಯವಸ್ಥೆ ಅಂದುಕೊಂಡ್ರಾ?! ಹಹ್ಹ .. ಅವುಗಳ ಕೆಲಸದ ಆಧಾರದ ಮೇಲಿರುವ ವರ್ಣ ವ್ಯವಸ್ಥೆ ಅದು. ಅವುಗಳು ಯಾವುವೆಂದರೆ, ರಾಣಿ(ಕ್ವೀನ್), ಗಂಡುಜೇನು(ಡ್ರೋನ್ಸ್) ಮತ್ತು ಕೆಲಸಗಾರರು(ವರ್ಕರ್ಸ್). ಇವು ಪ್ರತಿ ಗೂಡಿನಲ್ಲೂ ಕಂಡುಬರುತ್ತವೆ. ಅಪಾರ ಅಂಡಾಶಯಗಳನ್ನೊಳಗೊಂಡ ಒಂದು ರಾಣಿಜೇನು ಸಾಮಾನ್ಯವಾಗಿ ಒಂದು ಗೂಡಿನಲ್ಲಿರುತ್ತೆ. ಇದನ್ನು "ಜೇನು ವಸಾಹತಿನ ತಾಯಿ" ಎಂದೂ ಹೇಳುತ್ತಾರೆ. ಉತ್ತಮ ಫಲಪಾಕವನ್ನು ಸೇವಿಸುವ ಇದರ ಮುಖ್ಯ ಕೆಲಸ ಜೀವನಪೂರ್ತಿ ಮೊಟ್ಟೆಗಳನ್ನಿಡೋದು (ದಿನಕ್ಕೆ ಸುಮಾರು ೧೦೦೦-೨೦೦೦ ಮೊಟ್ಟೆಗಳು)! ಸಾಮಾನ್ಯವಾಗಿ ರಾಣಿಜೇನು ೧೫-೨೦ಮಿಮೀ ಉದ್ದವಾಗಿ, ಚಿಕ್ಕ ಕಾಲುಗಳನ್ನು, ರೆಕ್ಕೆಗಳನ್ನು ಹೊಂದಿರುತ್ತದೆ. ಕುಟುಕಲು ಇರುವ ಅಂಗ ಮೊಟ್ಟೆಯಿಡುವ ಅಂಗವಾಗಿ ಮಾರ್ಪಾಡಾಗಿರುತ್ತದೆ. ಮಧ್ಯದಲ್ಲಿ ಉಬ್ಬಿದ್ದು, ಕಿರಿದಾಗುತ್ತಾ ಹೋಗಿ, ಕೊನೆಯಲ್ಲಿ ಚೂಪಾದ ಹೊಟ್ಟೆಯನ್ನು ಹೊಂದಿರುವುದು ಇದರ ವಿ