ಇದು..... ಬದುಕು.....!

 ಇದು........ ಬದುಕು.......!

 



ಬದುಕು ಕೆಲವೊಮ್ಮೆ ಮರೀಚಿಕೆಯಂತೆ! ಕಂಡೂ ಕಾಣದ ವಿಸ್ಮಯ...! ಈ ಬಿಸಿಲ್ಗುದುರೆ ಒಂದೊಮ್ಮೆ ಬದುಕಾಗಿ ಸವಾರಿ ಹೊರಟರೆ...........


ಬದುಕೆಂಬ ಬಿಸಿಲುಗುದುರೆ
ನೋವೊಳಗೆ ನಲಿವುಂಡು
ಬಿರುಮಳೆಯ ಕ್ಷಣದಲೂ
ಬೆಚ್ಚನೆ ಹೊರಗೋಡಿತು..

ಪ್ರೀತಿ ಮುಖವಾಡದೊಳಗೆ
ದ್ವೇಷದ ಜ್ವಾಲಾಗ್ನಿಯನು
ತಾತ್ಸಾರ ಭಾವವನೂ
ನೋಡಿ ನಿಬ್ಬೆರಗಾಯಿತು..

ಕಾಮಕ್ರೋಧದ ಸುಳಿಯೊಳಗೆ
ಸತ್ಯ-ಅಹಿಂಸೆಯು ಸಿಲುಕಿರಲು
ಮಾತೂ ಮರೆಯಲವಿತಿರಲು
ಮನವು ಹೇವರಗೊಂಡಿತು..

ವಿಘಾತದ ಅರಳುವಿಕೆಗೆ
ನೆಪವಾದ ಅಸ್ಥಿರತೆಯನು
ಧೈರ್ಯದಿಂದ ಓಡಿಸಲು
ವಿಖ್ಯಾತಿಗೊಂಡು ಹೆಮ್ಮೆಯಾಯ್ತು..

ಅಕ್ಕರೆಯ ಕರದೊಳಗೆ
ಪ್ರೀತಿಯ ಹಂಚುತಿರಲು
ಹೃದಯವು ಮುದಗೊಂಡು
ಬಿಸಿಲ್ಗುದುರೆ ಅದೃಶ್ಯವಾಯ್ತು..

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..