ಪೋಸ್ಟ್‌ಗಳು

ಏಪ್ರಿಲ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ತಂಗಾಳಿಯೇ ನಿನ್ನ ಜೊತೆಜೊತೆಗೆ...

ಇಮೇಜ್
ತಂಗಾಳಿಯೇ ನಿನ್ನ ಜೊತೆಜೊತೆಗೆ  ಕನಸಿದು ಕಾಡಿದೆ ಮನಸೊಳಗೆ.. ಸೇರಲೇ ಆ ಭಾವನೆಗಳ ಸುಳಿಗೆ ಮರೆತು ಅಡಗಲೇ ನಿನ್ನೊಳಗೆ.. ನಾ ನಡೆಯುವ ಮುಳ್ಳಿನ ಹಾದಿಯಲಿ ನೆನೆಯುವೆ ನಿನ್ನ ಸನಿಹವನು.. ಕಾಡುವ ಕನಸಿನ ಗುಹೆಯೊಳಗೆ ಬಯಸಿಹೆ ನಿನ್ನ ಸ್ಪರ್ಶವನು... ಮುನಿಸು ತೋರದಿರು ನೀನು ಸರಿದು ಹೋಗದಿರು ಎಂದೂ.. ಮಗುವಾಗಲೇ ಮತ್ತೆ ನಾನು ಹೇಳು ಗೆಳೆಯ ನೀನು... ತಂಗಾಳಿಯೇ ಬರುವೆ ನಿನ್ನೊಡನೆ ಕನಸಲಿ ಕಾಡುವ ಜಗದೆಡೆಗೆ.. ಸೇರುವೆ ಆ ಭಾವನೆಗಳ ಸುಳಿಗೆ  ಮರೆತು ಅಡಗುವೆ ನಿನ್ನೊಳಗೆ... ವೈಷ್ಣವಿ ಕೆ.

ಬದುಕು- ಎಂತಹದು!

ಇಮೇಜ್
 ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗರು ಮದುವೆಗೋ ಮಸಣಕೋ ಹೋಗೆಂದಕಡೆಗೋಡು ಪದಕುಸಿಯೆ ನೆಲವಿಹುದು ಮಂಕುತಿಮ್ಮ|| ಈ ಬದುಕು‌ ಮೂರೇ ಮೂರು‌ ದಿನ, ಅವ ನಡೆಸಿದಂಗೆ ನಾವು ನಡೆವವರು. ಆದರೂ ನಮ್ಮ ಬದುಕಿನ ಗುರಿ‌ ಏನು, ದಾರಿ‌ ಯಾವುದು, ಬದುಕಿಗೊಂದು‌ ಅರ್ಥ ಬೇಕಲ್ಲವೇ, ಅದು ಏನು ಎನ್ನುವ ಗೊಂದಲಗಳು ನಮ್ಮಲ್ಲಿ ಇದ್ದೇ ಇರುತ್ತದೆ, ಸಾಯುವ ತನಕ. ಹಣ, ಪ್ರತಿಷ್ಠೆ, ಹೆಸರು, ಅಧಿಕಾರ ಇದಕ್ಕಾಗಿ ಜೀವಮಾನವಿಡೀ ಓಡುತ್ತಲೇ ಇರುತ್ತೇವೆ, ಈ ಕ್ಷಣದ ಖುಷಿಯನ್ನು ಮರೆತು.  ಇತ್ತೀಚೆಗೆ ನನಗೆ ಆತ್ಮೀಯರಾದವರನ್ನು ವರುಷಗಳ ನಂತರ ಭೇಟಿ ಆಗಿದ್ದೆ. ಅವರ ಕಾರ್ಯಕ್ಷೇತ್ರದಲ್ಲಿ ತುಂಬಾ ಹೆಸರು ಮಾಡಿದವರು. ಎಷ್ಟೋ ಸಂಘ-ಸಂಸ್ಥೆಗಳು ಅವರನ್ನು ಗುರುತಿಸಿ ಸನ್ಮಾನಿಸಿದ್ದವು. ನಾನು‌ ಅವರಿಗೆ ಸಿಕ್ಕ ಹೆಸರು, ಮನ್ನಣೆ ನೋಡಿ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇದ್ದಾರೆ ಅಂದುಕೊಂಡಿದ್ದೆ. ಆದರೆ ಅವರ ಬಳಿ ತುಂಬಾ ಹೊತ್ತು‌ ಮಾತನಾಡಿದಾಗಲೇ‌ ತಿಳಿದದ್ದು, ನನ್ನ ಊಹೆ ತಪ್ಪೆಂದು. ಮೂರು ಜನ ಹೆಣ್ಣುಮಕ್ಕಳು, ಅವರನ್ನು ಸಾಕಿ, ಬೆಳೆಸಿ ಮದುವೆ ಮಾಡುವಾಗಲೇ ಸುಮಾರು ಸಾಲ ಮಾಡಿಯಾಗಿತ್ತು. ಅದರಲ್ಲಿ ಒಬ್ಬಳು‌ ಮಗಳು ಆರೂವರೆ‌ ತಿಂಗಳಿಗೆ ಹೆತ್ತಳಂತೆ. ಒಂಭತ್ತು‌ ತಿಂಗಳಾಗುವವರೆಗೆ ಮಗು ಎನ್.ಐ.ಸಿ.ಯು ನಲ್ಲೇ ಇರಬೇಕು. ಅಳಿಯಂದಿರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದ ಕಾರಣ, ಇವರೇ ಆಸ್ಪತ್ರೆಯ ಖರ್ಚು-ವೆಚ್ಚ ನೋಡಿಕೊಂಡರಂತೆ. "೧೨-೧೫ ಲ