ಪೋಸ್ಟ್‌ಗಳು

ಸೆಪ್ಟೆಂಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಣ್ಣ ಕಥೆ -೫

          ಕಾಲದ ಮಹಿಮೆ ಪ್ರಸಾದ್ ಗೆ ಒಳ್ಳೆಯ ಕಂಪೆನಿಯಲ್ಲಿ ಕೆಲಸ ದೊರೆತಿದ್ದರಿಂದ ತಂದೆ ತಾಯಿಯೊಂದಿಗೆ ಸಂತಸದಿಂದಿದ್ದ. ಪದ್ಮಳನ್ನು ಪ್ರೀತಿಸುತ್ತಿದ್ದ ಪ್ರಸಾದ್ ಮನೆಯವರ ಒಪ್ಪಿಗೆಯಂತೆ ಮದುವೆಯೂ ಆದ, ಮಕ್ಕಳೂ ಆದರು. ಮದುವೆಯಾಗಿ 2-3 ವರ್ಷ ಎಲ್ಲರೂ ಜೊತೆಯಾಗಿದ್ದರೂ, ಪದ್ಮಳಿಗೆ ವಯಸ್ಸಾಗುತ್ತಿದ್ದ ಅತ್ತೆ-ಮಾವ ಮನೆಗೆ ಭಾರವೆನಿಸಿದರು. ಮಾತು ಮಾತಿಗೂ ಗಂಡನೆದರು ಬೈಯತೊಡಗಿದಳು. ಮೊದಮೊದಲು ಪ್ರಸಾದ್ ಪದ್ಮಳನ್ನು ಸಮಾಧಾನಪಡಿಸುತ್ತಿದ್ದರೂ, ನಂತರ ಆಕೆ ಹೇಳುವ ಮಾತೇ ಸರಿಯೆನ್ನಿಸತೊಡಗಿತು. ಇಬ್ಬರನ್ನೂ ವೃದ್ಧಾಶ್ರಮಕ್ಕೆ ಸೇರಿಸಬೇಕೆಂದು ಪ್ರಸಾದ್ ಪದ್ಮ ನಿರ್ಣಯಿಸಿದರು. ಆತನ ತಂದೆ-ತಾಯಿ ಎಷ್ಟೇ ಗೋಗರೆದರೂ, ಅಂಗಲಾಚಿದರೂ ಕೇಳದೆ ಒಂದಿಷ್ಟು ಹಣ ನೀಡಿ ವೃದ್ಧಾಶ್ರಮಕ್ಕೆ ಸೇರಿಸಿಯೇ ಬಿಟ್ಟನು.           ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟವರನ್ನೇ ಮರೆತಿದ್ದ ಪ್ರಸಾದ್ ಗೆ ಈಗ ತನ್ನ ಮಕ್ಕಳು ವೃದ್ಧಾಶ್ರಮಕ್ಕೆ ಸೇರಿಸುವಾಗ, "ನಮಗೆ ಬೇಕಾಗಿರುವುದು ನಿನ್ನ ಶ್ರೀಮಂತಿಕೆಯಾಗಲೀ,‌ ಹಣವಾಗಲೀ ಅಲ್ಲ. ನಿನ್ನ ಪ್ರೀತಿ,‌ ಸಮಯವಷ್ಟೇ" ಎಂದು ಹಿಂದೆ ತಾನು ವೃದ್ಧಾಶ್ರಮಕ್ಕೆ ಸೇರಿಸುವಾಗ ತನ್ನ ತಂದೆ-ತಾಯಿ ಹೇಳಿದ್ದ ಈ ಮಾತುಗಳು ನೆನಪಾಗಿ ಕಣ್ಣ ಹನಿ ಕೆಳಗೆ ಜಾರಿತ್ತು.           ಇದೆಲ್ಲವನ್ನೂ ನೋಡಿ ಕಾಲವು ಕೇಕೆ ಹಾಕುತಿತ್ತು.!!