ಪೋಸ್ಟ್‌ಗಳು

ಜುಲೈ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವರ್ಕ್ ಫ್ರಮ್ ಹೋಮ್

ಇಮೇಜ್
      'ಹೋ! ನಿಂಗೀಗ ವರ್ಕ್ ಫ್ರಮ್ ಹೋಮ್, ಅಲ್ವಾ! ಹೇಗಾಗುತ್ತೆ' ಕೋರೋನಾ ಶುರುವಾದ ನಂತರದ ಸಾಮಾನ್ಯ ಪ್ರಶ್ನೆ. ನಾನಂತು 'ನಂಗಂತು ಫುಲ್ ಖುಷಿ' ಅನ್ನೋಳು. ಇನ್ನೊಂದು ಸಾಮಾನ್ಯವಾಗಿ ಕೇಳೋ ಮಾತು, 'ಅಯ್ಯೋ, ಈ ವರ್ಕ್ ಫ್ರಮ್ ಹೋಮ್ ಯಾವಾಗ ಮುಗ್ಯುತ್ತೋ' ಅಂತ. ನಾನಂತು ಈ ಕ್ಯಾಟೆಗರಿ ಅಲ್ಲಪ್ಪ. ಯಾಕಲ್ಲ ಅನ್ನೋದಿಕ್ಕೆ ಕಾರಣ ಇದೆ. ಒಂದ್ ಚಿಕ್ಕ ಫ್ಲಾಷ್ಬ್ಯಾಕ್ ಬಿ.ಸಿ ಟೈಮಿಗೆ, ಅಂದ್ರೆ ಬಿಫೋರ್ ಕೊರೋನಾ ಟೈಮಿಗೆ.     ಕರ್ನಾಟಕ ಕರಾವಳಿಯ ಒಂದು ಭಾಗ, ಉಡುಪಿಯ ಸಾಲಿಗ್ರಾಮ ನಮ್ಮೂರು. ಮಲೆನಾಡಿನ ತಪ್ಪಲು ಪ್ರದೇಶ ಸಿದ್ಧಾಪುರದ ಆಜ್ರಿಯಲ್ಲಿ ಅಜ್ಜನಮನೆ. ಹಾಗಾಗಿ ಪ್ರಕೃತಿಯ ಮಡಿಲಿನಲ್ಲಿ ಬೆಳೆದವಳು. ಬೇಸಿಗೆಯ ರಜೆಯಲ್ಲಿ ಬೆಂಗಳೂರಿನ ನೆಂಟರಿಷ್ಟರ ಮನೆಗೆ ಹೋಗಿಬರ್ತಾ ಇದ್ರೂ, ಆಗೆಲ್ಲಾ ಪ್ರವಾಸದ ಖುಷಿ ಬಿಟ್ಟರೆ ಮತ್ತೇನು ತಲೆಕೆಡಿಸುವ ವಿಚಾರಗಳು ಇರಲಿಲ್ಲ. ಓದಿನ ಉದ್ದೇಶವಾಗಿಯೂ ಊರು ಬಿಡುವ ಪ್ರಸಂಗವೂ ಬಂದಿರಲಿಲ್ಲ.         ಬಿ.ಎಸ್ಸಿಯಲ್ಲಿ ವಿಪ್ರೋಗೆ ಕ್ಯಾಂಪಸ್ ಸೆಲೆಕ್ಷನ್ ಆಗಿತ್ತು. ಯಾವುದೋ ಒಂದು ನಿರ್ಧಾರ, ಹುರುಪಿನಲ್ಲಿ ಸೇರಲು ಬಯಸಿದ್ದೆ. ಹಾಗೇ ಕರೆ ಬಂದಾಗ ನಾನು, ಅಪ್ಪ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ವಿ. ನೆಂಟರಿಷ್ಟರ ಮನೆಯಲ್ಲಿ ಉಳಿದು, ಮರುದಿನ ರಿಪೋರ್ಟ್ ಮಾಡಿಕೊಳ್ಳಲು ಎಲಿಕ್ಟ್ರಾನಿಕ್ ಸಿಟಿಗೆ ಕ್ಯಾಬಿನಲ್ಲಿ ಹೊರಟೆವು‌, ಅದೇ ನಮ್ಮಿಬ್ಬರ ಮೊದಲ ಕ್ಯಾಬ್ ಪಯಣ. ಅಲ್ಲಿ ಎಲ್ಲೆಲ್ಲಿಂದಲೋ ಬಂದ ನ