ತಂಗಾಳಿಯೇ ನಿನ್ನ ಜೊತೆಜೊತೆಗೆ...

ತಂಗಾಳಿಯೇ ನಿನ್ನ ಜೊತೆಜೊತೆಗೆ 

ಕನಸಿದು ಕಾಡಿದೆ ಮನಸೊಳಗೆ..

ಸೇರಲೇ ಆ ಭಾವನೆಗಳ ಸುಳಿಗೆ

ಮರೆತು ಅಡಗಲೇ ನಿನ್ನೊಳಗೆ..


ನಾ ನಡೆಯುವ ಮುಳ್ಳಿನ ಹಾದಿಯಲಿ

ನೆನೆಯುವೆ ನಿನ್ನ ಸನಿಹವನು..

ಕಾಡುವ ಕನಸಿನ ಗುಹೆಯೊಳಗೆ

ಬಯಸಿಹೆ ನಿನ್ನ ಸ್ಪರ್ಶವನು...


ಮುನಿಸು ತೋರದಿರು ನೀನು

ಸರಿದು ಹೋಗದಿರು ಎಂದೂ..

ಮಗುವಾಗಲೇ ಮತ್ತೆ ನಾನು

ಹೇಳು ಗೆಳೆಯ ನೀನು...


ತಂಗಾಳಿಯೇ ಬರುವೆ ನಿನ್ನೊಡನೆ

ಕನಸಲಿ ಕಾಡುವ ಜಗದೆಡೆಗೆ..

ಸೇರುವೆ ಆ ಭಾವನೆಗಳ ಸುಳಿಗೆ 

ಮರೆತು ಅಡಗುವೆ ನಿನ್ನೊಳಗೆ...


ವೈಷ್ಣವಿ ಕೆ.


ಕಾಮೆಂಟ್‌ಗಳು

  1. ಕಷ್ಟ ಸುಖಗಳನ್ನು ಸಮಭಾವದಿ ಸ್ವೀಕರಿಸುವ ಶಕ್ತಿಯನ್ನು ಎನಗೆ ನೀಡೆಂದು ಅನುದಿನ ಕೋರುವೆನು
    ಚಿರಪ್ರೇಮವೆನಗೆ ಸಾಕು ಇನಿಯಾ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..