ಏಕಾಂಗಿ ನಾನು....
ಏಕಾಂಗಿ..... ನಾನು ಏಕಾಂಗಿ....
ತೆರೆಯ ಮೊರೆತಕೆ
ತೀರವು ಸಂಗಾತಿಯಾದಾಗ
ಜಲದ ರಭಸಕೆ
ತಡೆಯು ಸಂಗಾತಿಯಾದಾಗ
ದಡದಿ ಕುಳಿತಿಹ
ನಾನು ಏಕಾಂಗಿ.....
ಕತ್ತಲಿನ ನಿಶ್ಶಬ್ದಕೆ
ತಂಗಾಳಿಯು ಸಂಗಾತಿಯಾದಾಗ
ಚಂದ್ರನ ಬೆಳಕಿಗೆ
ತಾರೆಗಳು ಸಂಗಾತಿಯಾದಾಗ
ಸೊಬಗ ಸವಿಯುತಿಹ
ನಾನು ಏಕಾಂಗಿ.....
ಸಾಗುವ ದೋಣಿಗೆ
ಗಾಳಿಯು ಸಂಗಾತಿಯಾದಾಗ
ದೋಣಿಯ ಹುಟ್ಟಿಗೆ
ಅಲೆಯು ಸಂಗಾತಿಯಾದಾಗ
ನಾವೆಯ ಪಯಣಿಗ
ನಾನು ಏಕಾಂಗಿ.....
ಮಾತಿನ ವ್ಯಕ್ತಿತ್ವಕೆ
ಮೌನವು ಸಂಗಾತಿಯಾದಾಗ
ಅಳುವಿನ ಮೊಗಕೆ
ನಗುವು ಸಂಗಾತಿಯಾದಾಗ
ಭಾವನೆಯ ಅಭಿವ್ಯಕ್ತಿಗೊಳಿಸುವ
ನಾನು ಏಕಾಂಗಿ.....
ನಿಮ್ಮ ಕವಿತೆಯ ಸೊಬಗನ್ನು ಸವಿಯುತ ಮೈಮರೆಯುತ್ತಿರುವ ನಾನೂ ಏಕಾಂಗಿ
ಪ್ರತ್ಯುತ್ತರಅಳಿಸಿಧನ್ಯವಾದ 😇
ಅಳಿಸಿಚೆನ್ನಾಗಿದೆ..ಶುಭಾಶಯಗಳು
ಪ್ರತ್ಯುತ್ತರಅಳಿಸಿಧನ್ಯವಾದ 😊
ಅಳಿಸಿಚೆಂದ ಕವಿತೆ
ಪ್ರತ್ಯುತ್ತರಅಳಿಸಿಧನ್ಯವಾದ 🙏
ಅಳಿಸಿಚಂದದ ಕಾವ್ಯ...
ಪ್ರತ್ಯುತ್ತರಅಳಿಸಿಧನ್ಯವಾದ 🙏
ಅಳಿಸಿಭಾವಪೂರ್ಣ ಭಾಮಿನಿಯ ಗೊಂದಲ.ಇಲ್ಲಿ ಎಲ್ಲವೂ ಏಕಾಂಗಿಯೇ ನಾವಾಗಿ ಜೊತೆಗೂಡುವ ಮೊದಲು
ಪ್ರತ್ಯುತ್ತರಅಳಿಸಿಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ 🙏😊
ಅಳಿಸಿ