ಹಾಗೇ ಸುಮ್ಮನೆ - ೨ (ಕಿರುಚಿತ್ರ)

ತಿಳಿನೀಲಿ ಆಗಸದ

ಕಿರುಚಿತ್ರವಿದೆಯಂತೆ,

ನಲುನಗೆಯ ಬೀರುತ,

ಇಕೋ ಬಂದು ನೋಡು!

ಮರೆಯಾದ ಚಂದಿರನ

ವಿರಹಗೀತೆಯು ಇರಲು,

ವರನಂತೆ ಸಿಂಗರಿಪ ರವಿಯ

ಯುಗಳಗೀತೆಯು ಇರಲು,

ಬೇಸರವ ಬದಿಗಿರಿಸಿ,

ಇಕೋ ಬಂದು ನೋಡು!

ಪುಷ್ಪಗಳಲಿ ಮುಡಿಕಟ್ಟಿ,

ಕಡುಹಸಿರ ಸೀರೆ ಹೊದ್ದು,

ವಧುವಂತೆ ಸಿಂಗರಿಪ

ನಾಜೂಕು ನಡುವಿನ,

ಝರಿಯಾದ ಭುವಿಯ

ಇಕೋ ಬಂದು ನೋಡು!



ಕಾಮೆಂಟ್‌ಗಳು