ನಿನ್ನ ನೆನಪಿನಲಿ...

 



ಮಿಟುಕುವ ಕಣ್ರೆಪ್ಪೆಗಳಲಿ

ಅದರುವ ಅಧರಗಳಲಿ

ನಿಮಿರುವ ಕರ್ಣಗಳಲಿ

ಅಕ್ಕರೆಯ ನುಡಿಗಳಲಿ

ಸ್ಪರ್ಶದ ಹಿತಭಾವದಲಿ

ಬೆಚ್ಚನೆಯ ಅಪ್ಪುಗೆಯಲಿ

ಮನದ ಉಲ್ಲಾಸದಲಿ

ಮಮತೆಯ ಮಡುವಿನಲಿ

ನಿನ್ನ ನೆನಪಿನಲಿ

ನನ್ನನ್ನೇ ಮರೆತಿರುವೆನಿಲ್ಲಿ...

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..