ಸಣ್ಣ ಕಥೆ-೪


 

ಯಾರೊಂದಿಗೂ ಬೆರೆಯದ, ಸದಾ ಸಿಡುಕುತ್ತಿದ್ದ ಅವಳು, ಅವನಿಂದಾಗಿ ಎಲ್ಲರೊಂದಿಗೆ ಬೆರೆತು, ಸಹನಾಮೂರ್ತಿಯಾದಳು. ಕೊನೆಕೊನೆಗೆ ಮಗುವಿನಂತಾಗಿಬಿಟ್ಟಳು. ಅವನ ನಿಸ್ವಾರ್ಥ ಮಮತೆಗೆ, ಕಲ್ಲಿನಂತಿದ್ದ ಅವಳ ಹೃದಯವೂ ಮೆತ್ತಗಾಗಿತ್ತು. ಪ್ರೀತಿಗೆ ಸೋತಿದ್ದಳು, ತಾಳ್ಮೆಗೆ ಕರಗಿದ್ದಳು. ಮೌನದಲ್ಲಿನ ಮಾತನ್ನು ಅರಿತಿದ್ದಳು. ಅವನೊಂದಿಗೆ ಕಲೆತು, ಕಲಿತಿದ್ದಳು. ಎಲ್ಲಿಂದಲೋ ಬಂತೊಂದು ಬಿರುಗಾಳಿ. ಎಲ್ಲವೂ ಬೇರ್ಪಟ್ಟವು. ಬಂಧಕಾಗಿ ಹೋರಾಡಿ, ಅಸ್ತಿತ್ವವನೇ ಕಳೆದುಕೊಂಡವು. ಆಯಸ್ಕಾಂತವೂ ಸೋತಿತ್ತು, ಆಕರ್ಷಿಸುವಲ್ಲಿ.!

ಬಂದಿದ್ದ ಆ ಬಿರುಗಾಳಿ, ಮೇಲ್ಪದರದ ಕಲ್ಮಶವನ್ನೆಲ್ಲ ಹೊತ್ತೊಯ್ದು ತಿಳಿ ಮಣ್ಣನ್ನ ಬಿಟ್ಟಿತೋ ಅಥವಾ ಕಶ್ಮಲದಂತೆ ಕಾಣಿಸುವ ರಕ್ಷಾ ಕವಚವನ್ನೇ ಹೊತ್ತೊಯ್ದಿತೋ.....

ಕಾಮೆಂಟ್‌ಗಳು

  1. ಯಾವುದದು ಭಯಂಕರ ಬಿರುಗಾಳಿ ಎಂದು ಹೇಳಿದ್ದರೆ ಚೆನ್ನಾಗಿ ಇರುತ್ತಿತ್ತು

    ಪ್ರತ್ಯುತ್ತರಅಳಿಸಿ
  2. ಬಿರಗಾಳಿಗೆ ಬೇರ್ಪಡುವದು ಪ್ರೀತಿ ಅಲ್ಲ.ಅವಳಿಗೆ ನಿಜವಾದ ಪ್ರೀತಿಯ ಅರಿವು ಇರಲಿಲ್ಲ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಅಥವಾ.... ಕೆಲವೊಮ್ಮೆ ಕೆಲವು ಸಮಯ-ಸಂದರ್ಭಗಳಿಗೆ, ವಿಧಿಗೆ ತಲೆಬಾಗಲೇಬೇಕಾಗುತ್ತದೆ..😊

      ಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..