ಮರೆಯಾದೆಯಾ ಪುಟ್ಟ ಮರಿ....?!

 





ಹೆದರಿ ಕೋಣೆಯೊಳಗಿರುತ್ತಿದ್ದ ಪುಟ್ಟ ಮರಿ ನೀನಾಗ
ಅದ ನೋಡಿ ಹೊರತಂದು ನಾ ಆಟವಾಡಿಸಿದಾಗ
ಕೀಟಲೆ ಮಾಡಿ ಸಂತಸಗೊಳಿಸಿದ ನೀ
ಇಂದು ಮರೆಯಾದೆಯಾ..?

ಎಲ್ಲರೂ ನಿನ್ನ ಅಂದಕ್ಕೆ ಮಾರುಹೋದಾಗ
ಎತ್ತಿ ಆಟವಾಡಿಸಲು ಆರಂಭಿಸಿದರಾಗ
ಅಷ್ಟು ಚಂದದಿಂದಿದ್ದ ನೀ
ಇಂದು ಕಾಣದಾದೆಯಾ..?

ನಾ ಬೇಸರದಲ್ಲಿ ಕುಳಿತಿರುವಾಗ
ಸಮಾಧಾನಪಡಿಸುವಂತೆ ನೀ ಬಂದಾಗ
ಮುದ್ದು ಮಾಡಿ ಬೇಸರ ಮರೆಸಿದ ನೀ
ಇಂದು ನನ್ನ ಅಗಲಿದೆಯಾ..?

ಕೀಟಲೆ ಮಾಡಿ ಸಂತಸಗೊಳಿಸುವವರಾರೀಗ?
ಒಂಟಿಯಾದಾಗ ಮುದ್ದು ಮಾಡುವವರಾರೀಗ?
ಸದಾ ಅಮ್ಮನೊಂದಿಗಿರುತ್ತಿದ್ದ ಮುದ್ದಾದ ಬೆಕ್ಕು ನೀ
ನಿನ್ನ ಮೂಕವೇದನೆಯ ಅರಿಯದೆ ಹೋದೆನಾ..?...




ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..