ಕಂಬ್ಳಿಹುಳದ ಪುರಾಣ
ಕಾಲ್ಪನಿಕ ಅಲ್ಲ.. 'ಅನುಭವ ಕಥನ'..
ಕಂಬ್ಳಿಹುಳದ್ಬಗ್ಗೆ ಗೊತ್ತಿರೋರ್ಗೆ ಮಾತ್ರ...!
ನಾನು ಕುಂದಾಪುರದಿಂದ ಹೊರ್ಟು, ಕೋಟದಲ್ಲಿ ಬಸ್ ಇಂದ ಇಳ್ದೆ. ನಾನು, ಅಮ್ಮ, ಚಿಕ್ಕಮ್ಮ, ಅತ್ತೆ ಎಲ್ಲ ಒಟ್ಟಾಗಿ ಫಂಕ್ಷನ್ಗೆ ಹೋಗ್ಬೇಕಾಗಿರೋದ್ರಿಂದ ನಾನು ಕೋಟ ಬಸ್ ಸ್ಟ್ಯಾಂಡ್ ಅಲ್ಲಿ ಕಾಯ್ಬೇಕಾಯ್ತು. ತುಂಬಾ ಬಿಸ್ಲು ಇರೋದ್ರಿಂದ ಬಸ್ ಸ್ಟ್ಯಾಂಡ್ ಅಲ್ಲಿರೋ ಬೆಂಚ್ ಮೇಲೆ ಕೂತ್ಕೊಂಡೆ. ಕೂತ್ಕೊಂಡ್ ಕೂಡ್ಲೇ ಅಲ್ಲೇ ನಿಂತಿರೋ ಒಬ್ರು "ಪುಟ್ಟಿ, ಅಲ್ಲಿ ಕೂತ್ಕೋಬೇಡ, ಕಂಬ್ಳಿ ಹುಳ ಇದೆ" ಅಂತ ಹೇಳಿ ಹೋದ್ರು. 'ಓಹ್! ಹೌದಾ' ಅಂತ ಹೇಳಿ, ಇಲ್ಲೇ ಎಲ್ಲೋ ಇದ್ಯೇನೋ ಅನ್ಕೊಂಡು, ನೋಡ್ಲಿಕ್ಕೂ ಹೋಗ್ದೆ, ಅಲ್ಲಿಂದ ಎದ್ದು ಬಂದು ನಿತ್ಕೊಂಡೆ. ಅಷ್ಟ್ರಲ್ಲೇ ಅಲ್ಲೇ ಇರೋ ಗೂಡಾ ಅಂಗ್ಡಿಯೋರು, "ಪುಟ್ಟ, ಪ್ಯಾಂಟ್ ಮೇಲೆ ಕಂಬ್ಳಿ ಹುಳ ಇದೆ ನೋಡು" ಅಂದ್ರು. ಅವ್ರು ಹೇಳಿದ್ದೇ ತಡ, ಎದ್ನೋ ಬಿದ್ನೋ ಅಂತ ಪ್ಯಾಂಟ್ ಕೊಡ್ಕೋಕೆ ಸ್ಟಾರ್ಟ್ ಮಾಡಿದೆ. ಅಂತೂ ಕಂಬ್ಳಿಹುಳ ಕೆಳಗ್ ಬಿತ್ತು. ಈ ರಗ್ಳೆ ಬೇಡ ಅಂತ ಅಲ್ಲಿಂದಾಚೆ ಬಂದು ಬಿಸ್ಲಲ್ಲಿ ನಿಂತ್ಕೊಂಡೆ. ಬಸ್ ಸ್ಟ್ಯಾಂಡ್ ನೋಡ್ತೀನಿ, ಪುಟ್ ಪುಟ್ಟ ಕಂಬ್ಳಿಹುಳಗಳು. 1-2 ಅಲ್ಲಾ ರೀ.. ಬಸ್ ಸ್ಟ್ಯಾಂಡ್ ತುಂಬಾ! ಚಿಕ್ದಾಗಿ, ಬಿಳಿಯಾಗಿ ಇರೋದ್ರಿಂದ ಕೂಡ್ಲೇ ಕಣ್ಣಿಗೆ ಕಾಣ್ಸೋದು ಇಲ್ಲ! (ಬ್ಲ್ಯಾಕ್ ಕಲರ್ ಪ್ಯಾಂಟ್ ಹಾಕೊಂಡ್ ಬಂದಿದ್ದು ಸಾರ್ಥಕ ಆಯ್ತು ಅನ್ಸಿದ್ದು ಮಾತ್ರ ಸುಳ್ಳಲ್ಲ). ಅಲ್ರೀ, ನಂಗೆ ಕನ್ಸಾ ಬಿದ್ದಿರತ್ತೆ?! ಈ ರೇಂಜ್ ಗೆ ಇಲ್ಲಿ ಕಂಬ್ಳಿಹುಳಗಳಿರ್ತಾವಂತ!!! ಈ ಕಿರಿಕಿರಿಯೊಳ್ಗೆ ಅಮ್ಮಂಗೆ 2-3 ಸಲ ಕರೆ ಮಾಡಿ,"ನೀನ್ ಬೇಗ ಬರ್ತೀಯ ಅಥ್ವಾ ನಾನೇ ಮನೆಗ್ ಬರ್ಲಾ" ಅಂತ ಬೈಯ್ದಿದ್ದೂ ಆಯ್ತು. ಅಂತೂ ಕೊನೆಗೆ 3 ಜನಾನೂ ಬಂದ್ರು. ಅಲ್ಲೇ ಇರೋ ರಿಕ್ಷಾ ಹತ್ತಿ ಕೂತ್ಕೊಂಡ್ ಕೂಡ್ಲೇ ನಮ್ಮನೆಯವ್ರು ಒಬ್ರೊಬ್ರೆ ಡ್ರೈವರ್ನ ಕೇಳೋಕ್ ಶುರು ಮಾಡಿದ್ರು. "ಸಿಕ್ಕಾಪಟ್ಟೆ ಕಂಬ್ಳಿಹುಳ ಅಂತೆ", "ಹೌದಮ್ಮ, ಹಿಂದೆ ಅರಳಿಮರ ಅರ್ಧಂಬರ್ಧ ಕಡ್ದಿರೋದ್ರಿಂದ ಅಲ್ಲಿದಾವೆ. ಅವು ಶೀಟ್ ಮೇಲೆ ಬೀಳ್ತವೆ. ಈಗ ಬಿಸ್ಲು ಜಾಸ್ತಿ ಆಗಿರೋದ್ರಿಂದ ಶೀಟ್ ಇಂದ ಕೆಳಗೆ ಬೀಳ್ತಿವೆ", "ಅದ್ಕೇನು ಹಾಕಿಲ್ವ?", "2-3ಸಲ ನಾವೆಲ್ಲ ಕ್ಲೀನ್ ಮಾಡಿದ್ವಿ, ಆದ್ರೆ ಏನು ಉಪಯೋಗ ಆಗಿಲ್ಲ. 'ನವಯುಗ'ದವ್ರ್ಗೆ ದೂರು ನೀಡಿದ್ದೀವಿ. ಏನ್ಮಾಡ್ತಾರೆ ನೋಡ್ಬೇಕು", "ಇಲ್ಬಂದು ಕೂತ್ಕೊಂಡೋರ್ದೆಲ್ಲಾ ಇದೇ ಕಥೆ ಅಲ್ವಾ?", "ಹೌದು, ನಾವ್ ಆದಷ್ಟು ಹೇಳ್ತೀವಿ. ಇವ್ರ್ಗೇನು ಆಗಿಲ್ಲ, ಹೇಳಿದ್ಕೂಡ್ಲೇ ಎದ್ರು. ಆದ್ರೆ ನಿನ್ನೆ ಸಂಜೆ ಒಂದ್ ಗಮ್ಮತ್ ಆಗಿತ್ತು", "ಹೌದಾ? ಏನು?", "ಒಂದ್ ಹುಡ್ಗಿ ನಿನ್ನೆ ಇಲ್ಬಂದು ಕೂತ್ಲು. ಅಂಗ್ಡಿಯೋರು, ರಿಕ್ಷಾದೋರು ಕರ್ದ್ರು. ಅವ್ಳು ಇಯರ್ಫೋನ್ ಹಾಕೊಂಡಿರೋದ್ರಿಂದ ಕೇಳಿಸ್ಲೇ ಇಲ್ಲ. ಕೂಡ್ಲೇ ಹೊರ್ಟ್ಳು. ಆವಾಗ್ಲೂ ಕರ್ದ್ವಿ, ಕೈಸನ್ನೆ ಮಾಡಿದ್ವಿ. 10-12 ಹುಳಗಳು ಇದ್ದಿದ್ವು ಅವ್ಳ ಅಂಗಿ ಮೇಲೆ. ಆದ್ರೆ ಅವ್ಳು ಈ ಲೋಕ್ದಲ್ಲೇ ಇರ್ಲಿಲ್ಲ, ತಿರ್ಗಿನೂ ನೋಡ್ದೆ ಹೋದ್ಲು. ನಾವೂ ಎಷ್ಟು ಅಂತ ಕರ್ಯೋದು, ಸುಮ್ನಾದ್ವಿ. ಮನೆಗ್ ಹೋಗಿ ನೋಡ್ವಾಗ ಅವ್ಳವಸ್ಥೆ ಏನಾಗಿತ್ತೋ".
ನಾವ್ ಹೋಗ್ಬೇಕಾಗಿದ್ ಮನೆ ಬಂತು, ಇಳ್ದ್ವಿ. ಊಟದ್ಮನೇಲಿ ನನ್ ವಿಷ್ಯ ಹೇಳಿ ನಮ್ಮನೆಯವ್ರು ನಕ್ಕಿದ್ದೂ ಆಯ್ತು. ಒಂದ್ ಹುಳ ನನ್ ಪ್ಯಾಂಟ್ ಹತ್ತಿದ್ರಿಂದ ಸ್ವಲ್ಪ ದದ್ದುಗಳು(ರಾಶಸ್) ಆದ್ರೂ ಕೂಡ್ಲೇ ಹೋಯ್ತು. ಇದಾಗಿ 4-5 ತಿಂಗ್ಳಾಯ್ತು. ಅಲ್ಲಿ ನಂತ್ರ ಏನ್ಮಾಡಿದ್ರು ಅಂತ ಗೊತ್ತಿಲ್ಲ. ಇವಾಗ್ಲೂ ನಂಗೆ 'ಕೋಟ' ಅಂದ್ಕೂಡ್ಲೇ ನೆನ್ಪಾಗೋದೆ 'ಕಂಬ್ಳಿಹುಳ'. ಮಧ್ಯ ರೋಡ್ ಅಲ್ಲಿ ಬೇಕಾದ್ರೆ ನಿಲ್ತೀನ್ರೀ, ಬಸ್ ಸ್ಟ್ಯಾಂಡ್ಗೆ ಅಂತೂ ಹೋಗಲ್ಲ. ನಂಗೇನು ಆಗ್ದೆನೇ ಹೀಗ್ ಹೇಳ್ತಿದೀನಿ. ಅವ್ಳ್ ಕಥೆ..?!
.
ಇಲ್ಲಿಗೆ ಕಂಬ್ಳಿಹುಳದ ಪುರಾಣ ಮುಗೀತು.
ಸೂಪರ್ ಕಂಬಳಿ ಹೊಳದಚರಿತೆ
ಪ್ರತ್ಯುತ್ತರಅಳಿಸಿ🙏😊
ಅಳಿಸಿಕಂಬಳಿಹುಳದ ಅನುಭವ ಕಥನ ಚೆನ್ನಾಗಿದೆ. ಕೆಲವಷ್ಟು ಜಾತಿಯ ಕಂಬಳಿಹುಳುಗಳು ವಿಷಕಾರಿಯೂ ಆಗಿರುತ್ತವೆ.
ಪ್ರತ್ಯುತ್ತರಅಳಿಸಿಧನ್ಯವಾದಗಳು.., ನಿಮ್ಮ ಅಭಿಪ್ರಾಯಕ್ಕೆ, ಮಾಹಿತಿಗೆ..🙏
ಅಳಿಸಿಸರಳವಾದ ಅನುಭವ ಸುಂದರವಾಗಿ ಮೂಡಿ ಬಂದಿದೆ. ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿಧನ್ಯವಾದ 😊😇
ಅಳಿಸಿಕವಯಿತ್ರಿ
ಪ್ರತ್ಯುತ್ತರಅಳಿಸಿ🙏
ಅಳಿಸಿ