ನಮ್ಮ ಆರ್.ಸಿ.ಬಿ ನಮ್ಮ ಹೆಮ್ಮೆ, ಓನ್ಲೀ ಲವ್ - ನೋ ಡವ್

ನಮ್ಮ ಆರ್.ಸಿ.ಬಿ ನಮ್ಮ ಹೆಮ್ಮೆ


ಆರು ಕೋಟಿ ಜನರ ಕನಸೊಂದು ಚಿಗುರುತಿದೆ.

ಹತಾಶೆಯ ಕಾರ್ಮೋಡ ಮಂಜಿನಂತೆ ಕರಗುತ್ತಿದೆ.

ಕೆಚ್ಚೆದೆಯ ಕಲಿಗಳು ಆಡುತಿರೆ ಅಂಗಳದಲ್ಲಿ.

ಉತ್ಸಾಹದ ಕಿರಣಗಳು ಹೊರಹೊಮ್ಮುತ್ತಿದೆ ಕನ್ನಡಿಗರಲ್ಲಿ.

ಏನೇ ಇರಲಿ, ಏನೇ ಬರಲಿ ಆಗುವುದೆಲ್ಲಾ ಒಳ್ಳೆಯದಕ್ಕೇ ಆಗಲಿ.

ಈ ಸಲವಾದರೂ.. ಐ. ಪಿ. ಎಲ್ ಕಪ್ಪು ನಮ್ಮದಾಗಲಿ.

ಹಾಗೆ ಭಕ್ತಿಯಿಂದ ಹೇಳಿ ಜೈ ಆರ್.ಸಿ.ಬಿ.





Only ಲವ್ , ನೋ dove


ಐ.ಲವ್.ಯು ಎಂದು ಹೇಳಿದರೂ ನೀ ತಿರುಗಿ ನೋಡಲಿಲ್ಲವೇ ಓ ನನ್ನ ನಲ್ಲೆ.

ಕೇಳಿಸಿಯೂ ನಿನಗೆ ಕೇಳಿಸಿಲ್ಲವಂತೆ ನಟಿಸುವೆ ಎಂದು ನಾನು ಬಲ್ಲೆ.

ಸಮರ್ಪಿಸುವೆ ನನ್ನೆಲ್ಲಾ ಭಾವನೆಗಳು, ಮನಸ್ಸನ್ನು ನಿನ್ನಲ್ಲೇ.

ನೀನು ಒಪ್ಪಿದರೆ ನಿನ್ನ ಪಿತನೊಡನೆ ಮಾತಾಡುವೆ ಈಗಲೇ.

ಪ್ರೀತಿಯ ನಿವೇದನೆಯನ್ನು ಉಣಬಡಿಸುವೆ ನಾನಿಂದು.

ಸವಿದು ಸಂತೃಪ್ತಳಾಗು ಓ ನನ್ನ ದೇವತೆ.

ನಿನ್ನಯ ಪ್ರತ್ಯುತ್ತರಕ್ಕೆ ಕಾಯುತಿದೆ ನನ್ನ ಹೃದಯ.

ಕನಸಿನಲ್ಲೂ ಬಂದು ನನ್ನ ಹೃದಯವನ್ನು ಬಡಿದೆಯಾ...ಬಡಿದೆಯಾ…ಬಡಿದೆಯಾ.

- ಶ್ರೀನಿಧಿ ಮಧ್ಯಸ್ಥ ಕಾರ್ಕಡ 




ಸಾಹಿತ್ಯ ಪ್ರಪಂಚಕ್ಕೆ ಪುಟ್ಟ, ಮೊದಲ ಹೆಜ್ಜೆ ಇಟ್ಟಿರುವ ನಮ್ಮ ಸಹೋದರನಿಗೆ ಅಭಿನಂದನೆಗಳನ್ನು ತಿಳಿಸುತ್ತ, ಇದೊಂದು ಅವನ ಬೆನ್ನು ತಟ್ಟುವ ಪ್ರಯತ್ನ... 








ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..