ಪಯಣ


ನನ್ನ ಪಯಣದಿ ಭರವಸೆಯ ಮೂಟೆಯಿತ್ತು...

ಸಿಗುವ ಪ್ರೀತಿಯ ಕೂಡಿಡುವ ಕನಸಿತ್ತು..

ಸಾಗರದಲೆಗಳಂತೆ ಖುಷಿ ಚಿಮ್ಮುತ್ತಿತ್ತು..

ಹೊಸ ಪಯಣದ ಅತ್ಯುತ್ಸಾಹವಿತ್ತು..


ಲೆಕ್ಕವಿಡದಷ್ಟು ಪ್ರೀತಿ ಸಿಗುವಂತಿತ್ತು..

ಪ್ರೀತಿ ನನ್ನ ಕೂಗುವ ಭಾಸವಾಗುತ್ತಿತ್ತು..

ಬಾಚಿ ತಬ್ಬಿದೆ, ಕೈ ತುಂಬಾ ಹಿಡಿದೆ..

ನನ್ನ ಭರವಸೆಯ ಮೂಟೆ ತುಂಬಿದೆ..


ಅಯ್ಯೋ...

ನನ್ನ ಮೂಟೆಯಲಿ ಪ್ರೀತಿ ಇರಲಿಲ್ಲ..

ಬರಿಯ ಮೋಸದ ಗಾಳಿಯಿತ್ತು..

ಪ್ರೀತಿ-ನಗುವಿನ ಮುಖವಾಡವಿತ್ತು..

ಅದರ ಹಿಂದೆ ಸುಳ್ಳಿನ ಜಾಲವಿತ್ತು..


ಇದು ನನ್ನ ಪಯಣದ ಕಥೆ..

ಸುಂದರ ರೂಪ-ಆಕರ್ಷಣೆ ಇಲ್ಲ..

ಇದು ನನ್ನ ಪಯಣದ ಕಥೆ..

ಅರಿಯಲಾರಿರಿ ನೀವು...


ಪಯಣ

ಚಿತ್ರಕೃಪೆ: ವೈಷ್ಣವಿ ಕೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..