ನಿನ್ನನೇ ಸ್ಮರಿಸುತ....
ಹೊಸತಾದ ಮೋಹ ನವಿರಾದ ಭಾವ,
ಸೋತಿದೆ ಹೃದಯ ನೋಡುತ ನಿನ್ನ...
ಕಾರಣ ಏನೋ, ಕಾತುರವೇಕೋ,
ಬಯಸಿದೆ ಸನಿಹ ಮನವು ಇದೇಕೋ...
ನಿನ್ನೆಗಳ ನೆನಪಿಲ್ಲ ನಾಳೆಗಳ ಭಯವಿಲ್ಲ,
ನೀನಿರಲು ಎದುರಲ್ಲಿ ನಗುವಿಗೆ ನೆಪವಿಲ್ಲ...
ಕೇಳೋದು ಯಾರೋ ಹೇಳೋದು ಏನೋ,
ನಿಂತಲ್ಲೇ ನಿಂತಿದೆ ಮನವು ಇದೇಕೋ....
ದಿನಗಳು ಹೀಗೇಕೆ, ಗುನುಗುವ ಹಾಡಂತೆ,
ನಿನ್ನನೇ ಸ್ಮರಿಸುತ, ಕಾಯುತ ಕೂತಂತೆ...
ನೀನು ಯಾರೋ ಈ ಭಾವನೆ ಏಕೋ,
ಹುಚ್ಚು ಹಿಡಿಸಿದೆ ಮನವು ಇದೇಕೋ...
Nice
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿVery Nice 👌
ಅಳಿಸಿGod Bless You.
Keep on Writing.
All d Best 👍👍👍
ಧನ್ಯವಾದಗಳು
ಅಳಿಸಿನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲಿ.
ಅಳಿಸಿಧನ್ಯವಾದ
ಅಳಿಸಿ😊
ಅಳಿಸಿಸೂಪರ್
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿ