ಓ ಮನವೇ..

ನಿರೀಕ್ಷಾಪಥದಲಿ

ಸೋತು ಸುಣ್ಣಾಗಿ

ವೈರಾಗ್ಯದಿಂದ ಜೀಕುತಿರಲು..

ಮಿನುಗುವ ತಾರೆಗಳತ್ತ 

ನೋಟ ಹರಿಯಿತು...

ನನ್ನ ನೋಟ ತೆರಳಿತು...

ಸುತ್ತಮುತ್ತ ಕಡುಗಪ್ಪು; ಇದ್ದಾಗಲೇ

ತಾರೆ ಹೊಳಪು ಇನ್ನಷ್ಟು..!

ನನ್ನ ದುಃಖಗಳೆಲ್ಲವೂ 

ನಾ ಮಿನುಗಲು

ನೆಪವಾಗಬಲ್ಲದೇ?

ಪ್ರಶ್ನೆಯೇಕೆ ಓ ಮನವೇ....

ನಿನ್ನ ಮಿತಿ ಆಗಸವೇ !

ಉತ್ಥಾನಗೊಳ್ಳುತಿರು..

ಉತ್ತುಂಗವೇರುತಿರು...

ಶೋಭಿಸುವೆ ನೀನು; ಆ

ತಾರೆಗಳು ನಿಲುಕದಿಹುದೇ..?!

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..