ಪೋಸ್ಟ್‌ಗಳು

ತಂಗಾಳಿಯೇ ನಿನ್ನ ಜೊತೆಜೊತೆಗೆ...

ಇಮೇಜ್
ತಂಗಾಳಿಯೇ ನಿನ್ನ ಜೊತೆಜೊತೆಗೆ  ಕನಸಿದು ಕಾಡಿದೆ ಮನಸೊಳಗೆ.. ಸೇರಲೇ ಆ ಭಾವನೆಗಳ ಸುಳಿಗೆ ಮರೆತು ಅಡಗಲೇ ನಿನ್ನೊಳಗೆ.. ನಾ ನಡೆಯುವ ಮುಳ್ಳಿನ ಹಾದಿಯಲಿ ನೆನೆಯುವೆ ನಿನ್ನ ಸನಿಹವನು.. ಕಾಡುವ ಕನಸಿನ ಗುಹೆಯೊಳಗೆ ಬಯಸಿಹೆ ನಿನ್ನ ಸ್ಪರ್ಶವನು... ಮುನಿಸು ತೋರದಿರು ನೀನು ಸರಿದು ಹೋಗದಿರು ಎಂದೂ.. ಮಗುವಾಗಲೇ ಮತ್ತೆ ನಾನು ಹೇಳು ಗೆಳೆಯ ನೀನು... ತಂಗಾಳಿಯೇ ಬರುವೆ ನಿನ್ನೊಡನೆ ಕನಸಲಿ ಕಾಡುವ ಜಗದೆಡೆಗೆ.. ಸೇರುವೆ ಆ ಭಾವನೆಗಳ ಸುಳಿಗೆ  ಮರೆತು ಅಡಗುವೆ ನಿನ್ನೊಳಗೆ... ವೈಷ್ಣವಿ ಕೆ.

ಬದುಕು- ಎಂತಹದು!

ಇಮೇಜ್
 ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗರು ಮದುವೆಗೋ ಮಸಣಕೋ ಹೋಗೆಂದಕಡೆಗೋಡು ಪದಕುಸಿಯೆ ನೆಲವಿಹುದು ಮಂಕುತಿಮ್ಮ|| ಈ ಬದುಕು‌ ಮೂರೇ ಮೂರು‌ ದಿನ, ಅವ ನಡೆಸಿದಂಗೆ ನಾವು ನಡೆವವರು. ಆದರೂ ನಮ್ಮ ಬದುಕಿನ ಗುರಿ‌ ಏನು, ದಾರಿ‌ ಯಾವುದು, ಬದುಕಿಗೊಂದು‌ ಅರ್ಥ ಬೇಕಲ್ಲವೇ, ಅದು ಏನು ಎನ್ನುವ ಗೊಂದಲಗಳು ನಮ್ಮಲ್ಲಿ ಇದ್ದೇ ಇರುತ್ತದೆ, ಸಾಯುವ ತನಕ. ಹಣ, ಪ್ರತಿಷ್ಠೆ, ಹೆಸರು, ಅಧಿಕಾರ ಇದಕ್ಕಾಗಿ ಜೀವಮಾನವಿಡೀ ಓಡುತ್ತಲೇ ಇರುತ್ತೇವೆ, ಈ ಕ್ಷಣದ ಖುಷಿಯನ್ನು ಮರೆತು.  ಇತ್ತೀಚೆಗೆ ನನಗೆ ಆತ್ಮೀಯರಾದವರನ್ನು ವರುಷಗಳ ನಂತರ ಭೇಟಿ ಆಗಿದ್ದೆ. ಅವರ ಕಾರ್ಯಕ್ಷೇತ್ರದಲ್ಲಿ ತುಂಬಾ ಹೆಸರು ಮಾಡಿದವರು. ಎಷ್ಟೋ ಸಂಘ-ಸಂಸ್ಥೆಗಳು ಅವರನ್ನು ಗುರುತಿಸಿ ಸನ್ಮಾನಿಸಿದ್ದವು. ನಾನು‌ ಅವರಿಗೆ ಸಿಕ್ಕ ಹೆಸರು, ಮನ್ನಣೆ ನೋಡಿ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇದ್ದಾರೆ ಅಂದುಕೊಂಡಿದ್ದೆ. ಆದರೆ ಅವರ ಬಳಿ ತುಂಬಾ ಹೊತ್ತು‌ ಮಾತನಾಡಿದಾಗಲೇ‌ ತಿಳಿದದ್ದು, ನನ್ನ ಊಹೆ ತಪ್ಪೆಂದು. ಮೂರು ಜನ ಹೆಣ್ಣುಮಕ್ಕಳು, ಅವರನ್ನು ಸಾಕಿ, ಬೆಳೆಸಿ ಮದುವೆ ಮಾಡುವಾಗಲೇ ಸುಮಾರು ಸಾಲ ಮಾಡಿಯಾಗಿತ್ತು. ಅದರಲ್ಲಿ ಒಬ್ಬಳು‌ ಮಗಳು ಆರೂವರೆ‌ ತಿಂಗಳಿಗೆ ಹೆತ್ತಳಂತೆ. ಒಂಭತ್ತು‌ ತಿಂಗಳಾಗುವವರೆಗೆ ಮಗು ಎನ್.ಐ.ಸಿ.ಯು ನಲ್ಲೇ ಇರಬೇಕು. ಅಳಿಯಂದಿರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದ ಕಾರಣ, ಇವರೇ ಆಸ್ಪತ್ರೆಯ ಖರ್ಚು-ವೆಚ್ಚ ನೋಡಿಕೊಂಡರಂತೆ. "೧೨-...

ಮನಸ್ಸುಗಳು..

ಇಮೇಜ್
  ನಾನು ನೀನೆಂಬ ಎರಡು ಮನಗಳಲ್ಲಿ ನನ್ನಳುವು ನನ್ನಲ್ಲಿ , ನನ್ನ ನಗುವು ನಿನ್ನಲ್ಲಿ ಲೀನವಾಯ್ತು ನಿನ್ನ ಕ್ರಿಯೆಗಳಿಲ್ಲಿ.. ತುಂಟತನದಿ ಛೇಡಿಸುವ ನೆಪದಲಿ ಹಸಿಮುನಿಸಿನ ತುಸುಜಂಬದಲಿ ವೈಮನಸಿನ ಕದನದೊಳ್ ಬಂಧಿಯಾದೆನಿಲ್ಲಿ.. ಮನೋಗತಿಯಂತೆ, ಆತ್ಮರತಿಯಂತೆ ಮನೋನುರಾಗದಲ್ಲಿದೆ ಮನಸುಗಳು..

ನನ್ನ ಮುದ್ದಿನ ಅಣ್ಣ

ಇಮೇಜ್
ಅಪಾರ ಪ್ರೀತಿಯ ಕೊಡುವನು ಅಗಾಧ ಲಕ್ಷ್ಯವನ್ನಿಡುವನು ಕೇಳಿದ್ದನ್ನು ಕೊಡಿಸುವನು ಇವನೇ ನನ್ನ ಮುದ್ದಿನ ಅಣ್ಣ.. ಕಷ್ಟದಲ್ಲಿರುವಾಗ ಕಾಪಾಡುವನು ಸಂತೋಷದಲ್ಲಿರುವಾಗ ಹರಸುವನು ಭಯದಿಂದಿದ್ದರೆ ಧೈರ್ಯ ತುಂಬುವನು ಇವನೇ ನನ್ನ ಮುದ್ದಿನ ಅಣ್ಣ.. ತಪ್ಪು ಮಾಡಿದರೆ ಬುದ್ಧಿ ಹೇಳುವನು ಕೋಪದಲ್ಲಿದ್ದರೆ ಸಮಾಧಾನ ಮಾಡುವನು ಕೋಪ ಬಂದರೆ ಕ್ಷಣದಲ್ಲಿ ಮರೆಯುವನು ಇವನೇ ನನ್ನ ಮುದ್ದಿನ ಅಣ್ಣ.. ಅನೇಕ ಕೆಲಸ ಮಾಡುವನು ಅಪ್ಪಟ ಪ್ರಾಮಾಣಿಕನಿವನು ವರ್ಣಿಸಲಸಾಧ್ಯವು ಇವನ ಹಿರಿಮೆಯನು ಇವನೇ ನನ್ನ ಮುದ್ದಿನ ಅಣ್ಣ.. ಚಿತ್ರ: ವೈಷ್ಣವಿ ಕೆ 

ದಿಟ್ಟ ಹೆಜ್ಜೆ...!

ಇಮೇಜ್
  ಚಿತ್ರ: ವೈಷ್ಣವಿ ಕೆ  "ಜಯ್, ನಿನಗೆ ಇಟ್ಟ ಹೆಸರಿಗೆ ತಕ್ಕಂತೆ ಜೀವನದಲ್ಲಿ ಜಯಶಾಲಿಯಾಗು ಮಗನೇ.. " ಎಂದು ಹುಟ್ಟಿದ ಹಬ್ಬದಂದು ನಮಸ್ಕರಿಸಲು ಬಂದ ಮಗನಿಗೆ ಆಶೀರ್ವದಿಸಿದರು ಆಕಾಶ್ ಮತ್ತು ಆಶಾ ದಂಪತಿಗಳು. "ನನ್ನ ಹೆಸರಿಗೆ, ನನ್ನ ಜಯಕ್ಕೆ ಕಾರಣ ನೀವಿಬ್ಬರೇ ಅಲ್ಲವೇ? ನೀವು ಅಂದು ಇಟ್ಟ ದಿಟ್ಟ ಹೆಜ್ಜೆಯಿಂದಲೇ ಇಂದು ಹೀಗಿದ್ದೇನೆ ನಾನು" ಎಂದ ಜಯ್. ಆಗ, ಆಕಾಶ್ ಮತ್ತು ಆಶಾ ಹಿಂದೆ ನಡೆದ ಘಟನೆಯನ್ನು ನೆನಪಿಸಿಕೊಂಡರು. ಜಯ್ ತರಗತಿಯಲ್ಲಿ ಅತಿ ಬುದ್ಧಿವಂತನಲ್ಲದಿದ್ದರೂ ಹೆಡ್ಡರ ಸಾಲಿನಲ್ಲಿರಲಿಲ್ಲ. ಓದುವುದು ಅವನಿಗೆ ಇಷ್ಟದ ಕೆಲಸವಾದರೂ ಪಠ್ಯ ವಿಷಯ ಓದುವುದು ಆಗದ ಕೆಲಸವೇ. ಹಾಡುವುದು, ತನಗನಿಸಿದ್ದನ್ನು ಬರೆಯುವುದು ಅವನ ಹವ್ಯಾಸವಾಗಿತ್ತು. ಆದರೆ ಅದು ಅವನ ಹೆತ್ತವರಿಗೆ ಇಷ್ಟವಿರಲಿಲ್ಲ. ಹೆಚ್ಚು ಅಂಕಗಳಿಸಬೇಕು, ಅದಕ್ಕಾಗಿ ಸದಾ ಪಠ್ಯ ಪುಸ್ತಕಗಳನ್ನು ಓದಬೇಕು ಎನ್ನುವ ಒತ್ತಡ ಹೇರುತ್ತಿದ್ದರು. ಪಿಯುಸಿಯಲ್ಲಿ ಪೋಷಕರ ಬಲವಂತದ ಮೇರೆಗೆ ವಿಜ್ಞಾನ ವಿಭಾಗ ಆಯ್ಕೆ ಮಾಡಿದ್ದ. ಪಕ್ಕದ ಮನೆಯವರ ಮಕ್ಕಳೊಡನೆ, ಸಂಬಂಧಿಕರ ಮಕ್ಕಳೊಡನೆ ತನ್ನನ್ನು ಹೋಲಿಕೆ ಮಾಡಿ ತನ್ನ ಅಮ್ಮ ಮಾತನಾಡುವುದನ್ನು ಮಾತ್ರ ಜಯ್ ಸಹಿಸುತ್ತಿರಲಿಲ್ಲ. ಪಿಯುಸಿ ಮುಗಿದ ನಂತರ ಡೋನೇಶನ್ ಕೊಟ್ಟು ಇಂಜಿನಿಯರಿಂಗ್ ಸೇರಿಸಿದರು. ಅವನಿಗೆ ಅದರಲ್ಲಿ ಆಸಕ್ತಿಯೇ ಇರಲಿಲ್ಲ. ಪರೀಕ್ಷೆಗಳಲ್ಲಿ ಅನುತ್ತೀರ್ಣನಾಗುತ್ತಿದ್ದ. ಇಂಜಿನಿಯರಿಂಗ್ ಮುಗಿಸುವುದೇ ಕಷ್ಟವಾಗಿ ...

ಇಳಿವಯಸಿನಲಿ ತಾಯಿ

ಇಮೇಜ್
                    ನೀನರಿಯದ ವ್ಯಥೆ ನೂರಾರಿದೆ ಬತ್ತಿದ ಕಣ್ಣೀರು ಕಥೆ ಹೇಳಿದೆ ಇಳಿವಯಸಿನ ಏಕಾಂತಕೆ ಮನ ಬೆಂದಿದೆ ವಿಧಿಯಾಟಕೆ ನಗುವಲ್ಲದ ನಗು ಮೂಡಿದೆ ಬಸಿರಲ್ಲಿ ನಿನ್ನ ಕಾಪಾಡಿದೆ ಮಡಿಲಲ್ಲಿ ಸಲಹುತ್ತ ಹೆಣಗಾಡಿದೆ ಮಮತೆಯ ತೊಟ್ಟಿಲಲ್ಲಿ ತೂಗಾಡಿದೆ ಪ್ರೀತಿಯ ನಿನಗೆ ಮುಡಿಪಾಗಿಸಿದೆ.. ನಿನ್ನ ನಗುವಿಗಾಗಿ ನೆತ್ತರು ಬಸಿದೆ ನೀ ಅತ್ತಾಗ ಸಾವನ್ನು ನಾ ಬಯಸಿದೆ ನಿನ್ನಾಸೆಗಳ ನಿದ್ರಿಸದೆ ಪೂರೈಸಿದೆ ನಿನ್ನ ಬದುಕಿಗಾಗಿ ನನ್ನನ್ನೇ ಅಡವಿಟ್ಟಿಹೆ.. ಕರುಳಬಳ್ಳಿ ಕಡಿದು ದೂರಾದೆ ಈ ಸಂಬಂಧ ಮುರಿದು ಹೋದೆ ನನ್ನಾಂತರ್ಯವನ್ನೇ ಬಲಿ ನೀಡಿದೆ ಏಕೆ ಜೀವಂತ ಶವವಾಗಿಸಿದೆ.. ತುತ್ತನ್ನ ನೀಡಿದಾಕೆ ಕಸವಾದಳೇ.. ತಾಯಿ ಮಡಿಲೀಗ ಜೋಪಡಿಯೇ.. ಈ ಜಗವ ನೀನು ಅರಿತಾಯಿತೇ.. ಅಂತಸ್ತಿನ ಕಲ್ಲರಮನೆ ಹೆಚ್ಚಾಯಿತೇ.. ಈ ಮುಪ್ಪಲ್ಲು ನಿನ್ನ ಉಪಚರಿಸುವೆ ನಿನ್ನರಮನೆಯ ಮೂಲೆಯಲಿ ನಿದ್ರಿಸುವೆ.. ವೃದ್ಧಾಶ್ರಮವಾಸ ಬೇಡ ಕೂಸೆ.. ಬೇಗನೆ ಮಣ್ಣಲ್ಲಿ ಮಣ್ಣಾಗುವೆ..

ಭಾವಜೀವಿಯಾಗು..

ಇಮೇಜ್
ಈ ಸ್ಪರ್ಧಾತ್ಮಕ ಜಗದಲಿ ಹಣ ಮಾಡುವ ಹಟದಲಿ ಕಲ್ಲಾಗಿದೆಯಾ ಹೃದಯ...? ನಿನಗೊದಗಿದ ಸೋಲಿನಲಿ ಪರರ ಜಯದ ಈರ್ಷ್ಯೆಯಲಿ ತುಚ್ಛವಾಗಿದೆಯಾ ಹೃದಯ..? ಒಪ್ಪುವುದಾದರೆ...... ಸ್ಮರಿಸುತಿರು ಸಹಾಯಕರನು ಮರೆಯದಿರು ನಿನ್ನವರನು ಬದಲಾಯಿಸು ಭಾವನೆಗಳನು ಭಾವಜೀವಿಯಾಗು.... ಮೊದಲು ನೀ ಭಾವಜೀವಿಯಾಗು..! ಚಿತ್ರ: ವೈಷ್ಣವಿ ಕೆ 

ಸಮಯದ ಗೊಂಬೆ, ವ್ಯಸನದ ಬಂಧಿ

ಇಮೇಜ್
 ಆಶೆ ಬಲೆಯನು ಬೀಸಿ, ನಿನ್ನ ತನ್ನಡೆಗೆಳೆದು| ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ|| ಮೈಸವರಿ ಕಾಲನೆಡವಿಸಿ, ಗುಟ್ಟಿನಲಿ ನಗುವ| ಮೋಸದಾಟವೊ ದೈವ - ಮಂಕುತಿಮ್ಮ|| ಈ ಕಗ್ಗವನು ಅಂದೆಂದೋ ಓದುವಾಗ ಅರ್ಥವಾಗಲೇ ಇಲ್ಲ, ಈಗ ಅರ್ಥವಾಗುತ್ತಿದೆ, ಅದಕ್ಕೆ ನಿನ್ನ ಜೀವನವೇ ಉದಾಹರಣೆಯಾಗಬೇಕಿತ್ತೇ ಸುನೈನಾ ಎಂದು ನಾನು ಗೊಣಗುತ್ತ ತಯಾರಾಗುತ್ತಿರುವುದ ನೋಡಿ ನನ್ನ ಅಮ್ಮ, "ತಮ್ಮ ಪಯಣ ಎತ್ತ ಕಡೆಗೋ" ಎಂದರು. ಇದು, ಸಾವಿರದೊಂದನೇ ಬಾರಿ, ನಾನು ಹೇಳಿದ್ದು, ನೀನು ಕೇಳಿದ್ದು. ನೀನೆಷ್ಟು ಹೇಳಿದರೂ ಅಷ್ಟೇ ಅಮ್ಮ. ಸುನೈನಾಳನ್ನು ಒಮ್ಮೆ ನೋಡಿ, ಮಾತನಾಡಿ ಬರುತ್ತೇನೆ. ಮಾತನಾಡಿದ ಕೂಡಲೇ ಕೆಟ್ಟುಹೋಗುವುದಿಲ್ಲ ಎಂದೆ. "ನಿನ್ನ ಬಾಯಿಗೆ ಬಾಯಿ ಕೊಡಲಾದೀತೇ! ಏನಾದರೂ ಮಾಡಿಕೋ! ಹುಷಾರು" ಎಂದರು. ಧನ್ಯವಾದಗಳು ಎಂದು ಕೈಮುಗಿದು ನಕ್ಕು, ನನ್ನ ಸ್ಕೂಟಿಯೊಂದಿಗೆ ಹೊರಟೆ. ಆರು ತಿಂಗಳಿನಿಂದ ಸುನೈನಾಳದ್ದೇ ಚಿಂತೆ ನನಗೆ. ಯಾರೂ ಊಹಿಸಿಯೇ ಇರಲಿಲ್ಲ. ಅಂತಹ ಘಟನೆ ನಡೆದು ಹೋಗಿತ್ತು.  ಓಹ್! ನನ್ನ ಪರಿಚಯ ಆಗಿಲ್ಲ ಅಲ್ವಾ ನಿಮಗೆ! ನಾನು ಕ್ಷಮಾ. ವೃತ್ತಿಯಲ್ಲಿ ವಕೀಲೆ. ಸುನೈನಾ ನನ್ನ ಸ್ನೇಹಿತೆ, ನನಗಿಂತ ಎರಡು ವರ್ಷ ಚಿಕ್ಕವಳು ಮತ್ತು ನನ್ನ ಗುರುಗಳ ಮಗಳು. ಅಂದರೆ, ನಾನು ವಕೀಲೆಯಾಗಿ ಕೆಲಸ ಆರಂಭಿಸಿದ್ದೇ ಅವಳ ತಂದೆಯ ಮಾರ್ಗದರ್ಶನದಲ್ಲಿ. ಅವಳ ತಂದೆ ಡಾ|ಸತೀಶ್, ಪ್ರಸಿದ್ಧ ಕ್ರಿಮಿನಲ್ ವಕೀಲರು. ನಾನೀಗ ಹೋಗುತ್ತಿರುವುದು ಅವರ ಮನೆಗೇ. ನನ್ನ ...

ಮೊಬೈಲ್ ತಂದಿಟ್ಟ ಫಜೀತಿ

ಇಮೇಜ್
    ನಮ್ಮ ದೈನಂದಿನ ಜೀವನದಲ್ಲಿ ಆಗುವ ಅದೆಷ್ಟೋ ಘಟನೆಗಳು ಅಥವಾ ಸಂದರ್ಭಗಳು ಕೆಲವೊಮ್ಮೆ ಚಿಕ್ಕದೆನಿಸಿದರೂ ಅದರ ಪರಿಣಾಮ ಮಾತ್ರ ದೊಡ್ಡದಾಗಿರತ್ತೆ. ಇತ್ತೀಚೆಗೆ ಮೊಬೈಲ್ ನಮ್ಮ ಜೀವನದ ಅವಿಭಾಜ್ಯ ಅಂಗ ಆಗಿದೆ. ಈ ಲಾಕ್ಡೌನ್ ನಂತರವಂತೂ ಆಟ, ಪಾಠ, ಹೀಗೆ ಎಲ್ಲಾ ಕಾರ್ಯಕ್ಕೂ ಮೊಬೈಲ್ ಬೇಕು. ಮೊಬೈಲ್ ಎಂದ ತಕ್ಷಣ ನೆನಪಾಯ್ತು.  ಬಿಟ್ಟೆನೆಂದರೂ ಬಿಡದೀ ಮಾಯೆ  ಲೋಕದಲ್ಲಿದೆ ಈ ಮೊಬೈಲ್ನ ಮಾಯೆ ಇದರಿಂದ ಬರುವವು ಕ್ಯಾನ್ಸರ್ನಂತಹ ರೋಗಗಳು ಆದರೂ ಏಕೆ ಮೊಬೈಲ್ನ ಅತಿಯಾದ ಬಯಕೆ? ಸಂದೇಶ ಕಳಿಸಲು ಸಮಯವೊಂದಿಷ್ಟು ಅದರೊಂದಿಗೆ ಹಾಳು ನಮ್ಮ ಆರೋಗ್ಯವಿಷ್ಟು ಅದಕ್ಕೆ ಖರ್ಚು ಹಣವೊಂದಿಷ್ಟು  ಆದರೂ ಬೇಸರವಿಲ್ಲ ಇಷ್ಟಿಷ್ಟು..! ಮೊಬೈಲ್ ಬೇಕು ಅನೇಕ ಲಾಭಗಳಿಗೆ  ತಲೆಬಾಗಬೇಡಿ ಅದರ ಕೆಡುಕುಗಳಿಗೆ ಮಿತಿಯೆಂಬುದಿರಲಿ ಉಪಯೋಗಕ್ಕೆ ಮಿತಿ ಇರದಿರೆ ಜೀವಕ್ಕೆ ಕುತ್ತೇ!! ಮೊಬೈಲ್ ಬಳಕೆಯ ತರಂಗಗಳಿಗೆ  ಪ್ರಾಣವನಿತ್ತವು ಅನೇಕ ಜೀವಿಗಳು ಮೊಬೈಲನ್ನು ನಿಯಂತ್ರಿಸಿ, ಜೀವಿಗಳನ್ನುಳಿಸಿ ಇದೇ ನನ್ನ ಘೋಷಣೆ, ಪ್ರಾರ್ಥನೆ..! ಇದನ್ನು ನಾನೇ ೬-೭ ವರ್ಷಗಳ ಹಿಂದೆ ಬರೆದಿದ್ದು. ಇತ್ತೀಚೆಗೆ ಇದನ್ನ ಓದಿದಾಗೆಲ್ಲಾ ನಮಗಾಗಿಯೇ ಬರೆದಿಟ್ಟಿರುವೆನೇನೋ ಅನ್ನಿಸುತ್ತೆ. ಅಷ್ಟರ ಮಟ್ಟಿಗೆ ಮೊಬೈಲನ್ನು ನಾವು ಅವಲಂಬಿಸಿದ್ದೇವೆ. ಘಟನೆ, ಸಂದರ್ಭ ಅಂತೆಲ್ಲಾ ಹೇಳಿ, ಈಗ ಮೊಬೈಲ್ ಬಗ್ಗೆ ಹೇಳ್ತಿದಾರಲ್ಲಾ, ಅಂತ ಅಂದ್ಕೊಳ್ಬೇಡಿ. ಇದೆಲ್ಲಾ ಯಾಕೆ ಹ...

ಭಾವನೆಗಳ ಬೆನ್ನೇರಿ....

ಇಮೇಜ್
  ಭಾವನೆಗಳ ಬೆನ್ನೇರಿ..... .. ಬದಲಾಗೋ ಭಾವನೆಗಳ ಬೆನ್ನೇರಿ ಮರೆತ್ಹೋದೆ ಕ್ರಮಿಸಿದೆ ದಾರಿ.. ಸರಿತಪ್ಪಿನ ಗೊಂದಲಗಳ ಮೀರಿ ಭರವಸೆಯ ಸ್ವಪ್ನಕೆ ನಾ ಆಭಾರಿ.. ಕಾರ್ಮುಗಿಲ ಕತ್ತಲು ಜಾರಿ ಮನದೊಳಗೆ ಬೆಳಕೊಂದು ಬೀರಿ ಹಳೆನೆನಪುಗಳ ಮರೆವಿಗೆ ತೂರಿ ಸೆಳೆಯುತಿದೆ ತನ್ನೆಡೆ ಕವಲುದಾರಿ... ಮತ್ತದೇ ಪ್ರಶ್ನೆಗಳ ಹಾಜರಿ.. ಭಾವುಕಳೇ ನಾನು ಈ ಪರಿ..! ಮನವಾಗಿದೆ ತಿರುಗೋ ಬುಗುರಿ ನಾ ಹೊರಟೆ ಭಾವನೆಗಳ ಬೆನ್ನೇರಿ....