ಭಾವನೆಗಳ ಬೆನ್ನೇರಿ....

 ಭಾವನೆಗಳ ಬೆನ್ನೇರಿ.....




..

ಬದಲಾಗೋ ಭಾವನೆಗಳ ಬೆನ್ನೇರಿ
ಮರೆತ್ಹೋದೆ ಕ್ರಮಿಸಿದೆ ದಾರಿ..
ಸರಿತಪ್ಪಿನ ಗೊಂದಲಗಳ ಮೀರಿ
ಭರವಸೆಯ ಸ್ವಪ್ನಕೆ ನಾ ಆಭಾರಿ..

ಕಾರ್ಮುಗಿಲ ಕತ್ತಲು ಜಾರಿ
ಮನದೊಳಗೆ ಬೆಳಕೊಂದು ಬೀರಿ
ಹಳೆನೆನಪುಗಳ ಮರೆವಿಗೆ ತೂರಿ
ಸೆಳೆಯುತಿದೆ ತನ್ನೆಡೆ ಕವಲುದಾರಿ...

ಮತ್ತದೇ ಪ್ರಶ್ನೆಗಳ ಹಾಜರಿ..
ಭಾವುಕಳೇ ನಾನು ಈ ಪರಿ..!
ಮನವಾಗಿದೆ ತಿರುಗೋ ಬುಗುರಿ
ನಾ ಹೊರಟೆ ಭಾವನೆಗಳ ಬೆನ್ನೇರಿ....


ಕಾಮೆಂಟ್‌ಗಳು

  1. ಮನವಾಗಿದೆ ತಿರುಗೊ ಬುಗುರಿ... ಸೊಗಸಾಗಿದೆ ಭಾವಯಾನ

    ಪ್ರತ್ಯುತ್ತರಅಳಿಸಿ
  2. ಪ್ರತ್ಯುತ್ತರಗಳು
    1. ವಾಸ್ತವ ಚಿತ್ರಣವನ್ನು ಸೂಕ್ಷ್ಮ ವಾಗಿ ನಿಮ್ಮ ಮನದಾಳದ ಭಾವನ ಲಹರಿಯಿಂದ ಕವನ ರಸದೌತಣವನ್ನು ನೀಡಿದ್ದೀರಿ ಧನ್ಯವಾದಗಳು ವಂದನೆಗಳು 🙏 ಒಳ್ಳೆಯದಾಗಲಿ

      ಅಳಿಸಿ
  3. ತುಂಬಾ ಚೆನ್ನಾಗಿದೆ ನಿಮ್ಮ ಕವನ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..