ಭಾವಜೀವಿಯಾಗು..


ಈ ಸ್ಪರ್ಧಾತ್ಮಕ ಜಗದಲಿ
ಹಣ ಮಾಡುವ ಹಟದಲಿ
ಕಲ್ಲಾಗಿದೆಯಾ ಹೃದಯ...?

ನಿನಗೊದಗಿದ ಸೋಲಿನಲಿ
ಪರರ ಜಯದ ಈರ್ಷ್ಯೆಯಲಿ
ತುಚ್ಛವಾಗಿದೆಯಾ ಹೃದಯ..?

ಒಪ್ಪುವುದಾದರೆ......

ಸ್ಮರಿಸುತಿರು ಸಹಾಯಕರನು
ಮರೆಯದಿರು ನಿನ್ನವರನು
ಬದಲಾಯಿಸು ಭಾವನೆಗಳನು
ಭಾವಜೀವಿಯಾಗು....
ಮೊದಲು ನೀ ಭಾವಜೀವಿಯಾಗು..!


ಚಿತ್ರ: ವೈಷ್ಣವಿ ಕೆ 





ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..