ಪೋಸ್ಟ್‌ಗಳು

ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ‌

ಇಮೇಜ್
  ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ‌ ಮಣಿಪಾಲದಲ್ಲಿರೋ ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ‌ ಬಗ್ಗೆ ತುಂಬಾ ಕೇಳಿರೋದ್ರಿಂದ, ಒಮ್ಮೆ ಭೇಟಿ ನೀಡಬೇಕು ಎಂಬ ಇಂಗಿತವಿತ್ತು. ಸ್ಥಳದ ಕುರಿತು ಸ್ವಲ್ಪ ವಿಷಯ ತಿಳಿದುಕೊಂಡೇ ಹೋಗಿದ್ರೂ, ಕೊಂಕಣ‌ ಸುತ್ತಿ ಮೈಲಾರಕ್ಕೆ ಬಂದ‌ ಹಾಗಾಗಿತ್ತು ನಮ್ಮ ಸ್ಥಿತಿ.‌ ಉಡುಪಿಯಿಂದ ಐದಾರು ಕಿಲೋಮೀಟರ್ ದೂರದಲ್ಲಿರೋ ಈ ಸ್ಥಳವನ್ನು ೧೦-೧೫ ಕಿಲೋಮೀಟರ್ ಮಾಡಿಕೊಂಡು ಅಂತೂ ಆ ಜಾಗವನ್ನು ತಲುಪಿದೆವು. ಪ್ರವೇಶ ದ್ವಾರದಲ್ಲೇ ಇರೋ ಕೌಂಟರ್ ಅಲ್ಲಿ ಇರೋ ವ್ಯಕ್ತಿಗೆ ಹಣವನ್ನು ನೀಡಿ, ಟಿಕೆಟ್ ತೆಗೆದುಕೊಳ್ಳಬೇಕು. ಸ್ಥಳದ ಕುರಿತು ಸ್ವಲ್ಪ ಮಾಹಿತಿ ನೀಡುವ ಅವರು, ಅಲ್ಲೇ ಇರೋ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ಹೇಳುತ್ತಾರೆ. ಸ್ಕ್ಯಾನ್ ಮಾಡಿದರೆ ಆ ಸ್ಥಳದಲ್ಲಿರೋ ೨೪ ಕಟ್ಟಡಗಳ ಸಂಪೂರ್ಣ ಮಾಹಿತಿ, ಅದರ‌ ವಿಶೇಷತೆಗಳಿರುವ ಕೈಪಿಡಿ ಲಭ್ಯವಾಗುತ್ತದೆ. ೧೯೯೭ ರಲ್ಲಿ ಆರಂಭವಾದ ಈ ಮ್ಯೂಸಿಯಂನ ರೂವಾರಿ ದಿ| ವಿಜಯನಾಥ ಶೆಣೈ. ಹಸ್ತಶಿಲ್ಪ ಹೆರಿಟೇಜ್ ಹೌಸ್‌ ನಿರ್ಮಿಸಲು ಹೋಗಿ ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ‌ ಆಗಿದ್ದು ಈಗ ಇತಿಹಾಸ. ಹಳೆಯ, ಸಾಂಪ್ರದಾಯಿಕ, ಐತಿಹಾಸಿಕ ಕಟ್ಟಡಗಳು, ಅವಶೇಷಗಳು, ಕರಕುಶಲ ವಸ್ತುಗಳು, ವಿವಿಧ ಶೈಲಿಯ ಉಪಕರಣಗಳನ್ನು ಸಂಗ್ರಹಿಸಿ, ಮುಂದಿನ ತಲೆಮಾರಿಗೆ ಪರಿಚಯಿಸುವ, ಪ್ರೇರೇಪಿಸುವ ದೃಷ್ಟಿಯಿಂದ ಎಲ್ಲಾ ವಸ್ತುಗಳನ್ನು ಜತನವಾಗಿರಿಸಿದ್ದಾರೆ. ಕರ್ನಾಟಕವಷ್ಟೇ ಅಲ್ಲದೆ ವಿವ...

ಕೃಷ್ಣ ಕೃಷ್ಣ - ೧

ಇಮೇಜ್
ನನ್ನೊಳಗೆ ನೀನು, ನನ್ನೆಲ್ಲವೂ ನೀನು, ಈ ಜನುಮದ ಸಾರ, ಸಾಕಾರ ನೀನು ಗುರಿತೋರು ಗುರುವಾಗು ನಿನ್ನೆಡೆಗೆ ಸೆಳೆದು, ಬೇರೇನ ಬೇಡೆನು, ನಿನ್ನ ಪ್ರೇಮದ ಹೊರತು! ಮನಸೊಳಗೆ ಸಿಕ್ಕು ಸುಕ್ಕಾಗಿ ಕೂತಿಹುದು ಇಹಪರದ ಕೊನೆಯಿರದ ಬೇಗುದಿಗಳು ನಿನ್ನ ಚರಣಗಳಲಿ ನನ್ನ ಮುಡಿಯಿಟ್ಟು ಲೀನವಾಗುವವರೆಗೆ ನಿನ್ನೆಡೆ ದಾರಿತೋರು! ಹೇ ಕೃಷ್ಣಾ...!

ಯುನೈಟೆಡ್ ಬ್ರೂವರೀಸ್ ಅಲ್ಲಿ- ಹೀಗೊಂದು ದಿನ...

  ಯುನೈಟೆಡ್ ಬ್ರೂವರೀಸ್ ಅಲ್ಲಿ- ಹೀಗೊಂದು ದಿನ.. ನಮ್ಮ ವಿಭಾಗದಿಂದ ಆಯೋಜಿಸಿದ್ದ, ಕೈಗಾರಿಕಾ ಭೇಟಿಯ ಭಾಗವಾಗಿ ನಾವು ಮೊದಲು ತೆರಳಿದ್ದು, ಬೈಕಂಪಾಡಿ ಹತ್ತಿರ ಇರೋ ಯುನೈಟೆಡ್ ಬ್ರೂವರೀಸ್(United Breweries)ಗೆ. ಕರ್ನಾಟಕದಲ್ಲಿರೋ ಅವರ ಮೂರು ಶಾಖೆಗಳಲ್ಲಿ ಇದೂ ಒಂದು. ಇದು ಮದ್ಯ ಉತ್ಪಾದಿಸೋ  ಕೈಗಾರಿಕೆ (Brewing/beer producing industry). ಯು.ಬಿ.ಯ ಬಿಯರ್ ಉತ್ಪನ್ನಗಳಲ್ಲಿ ಕಿಂಗ್ ಫಿಶರ್ ಮುಖ್ಯವಾದುದು. ಅದ್ರಲ್ಲೂ ಸ್ಟ್ರಾಂಗ್, ಬ್ಲೂ, ಡ್ರಾಟ್ ನಂತಹ ವಿವಿಧ ಫ್ಲೇವರ್ ಗಳುಂಟು. ಯುಬಿಯು ಹೈನೆಕೆನ್ ಕಂಪೆನಿಯ ಭಾಗವಾದ ನಂತರ, ಹೈನೆಕೆನ್ ಇತ್ತೀಚೆಗೆ ತಯಾರಿಸಲ್ಪಡುತ್ತಿರುವ ಉತ್ಪನ್ನ. ಅವರ ಕೈಗಾರಿಕೆಗೆ ಪ್ರವೇಶಿಸಲು ಅವರಿಂದ ವಿಶೇಷ ಅನುಮತಿ ಪಡೆದುಕೊಳ್ಳೋದು ಕಡ್ಡಾಯ. ಹಾಗೆಯೇ ಅವರದೇ ಆದ ವಿಶೇಷ ನಿಯಮಗಳೂ ಉಂಟು.  ಅನುಮತಿ ಪತ್ರ ತೋರಿಸಿದ ನಂತರ‌, ಎಲ್ಲರ ಹೆಸರನ್ನು ಬರೆದುಕೊಂಡು, ಅವರ ಕೆಲವು ನಿಯಮಗಳನ್ನು ಹೇಳಿ ಒಳಗೆ ಬಿಟ್ಟರು. ಅಲ್ಲಿಯ ಎಚ್.ಆರ್. ಅವರ ಉದ್ಯಮದ ಬಗ್ಗೆ, ವಿವಿಧ ಉತ್ಪನ್ನಗಳ ಬಗ್ಗೆ ತಿಳಿಸಿದರೆ, ಇನ್ನೊಬ್ಬರು ನಿಯಮಗಳನ್ನು, ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸಿದರು. ಸ್ವಲ್ಪ ಮಳೆ ಹನಿಯ ನಡುವೆಯೇ, ಉತ್ಪಾದನಾ ಸ್ಥಳಕ್ಕೆ ಹೋದೆವು. ಅಲ್ಲಿಯ ಗುಣಮಟ್ಟ ನಿಯಂತ್ರಣಾಧಿಕಾರಿ, ಮದ್ಯ ಉತ್ಪಾದನೆಗೆ ಉಪಯೋಗಿಸುವ ಕಚ್ಚಾ ಮತ್ತು ರಾಸಾಯನಿಕ ವಸ್ತುಗಳ ಬಗ್ಗೆ ತಿಳಿಸಿ, ಅವುಗಳ ಗುಣಮಟ್ಟ ಪರೀಕ್ಷೆ & ನ...

ಮಳೆ

ಇಮೇಜ್
  ಮಳೆ   ಬಸವಳಿದಿಹ ಇಳೆಯೂ ಸತ್ತಂತಿಹ ಮೊಳೆಯೂ ಕಾಯುತಿಹರು ಮಳೆಗಾಗಿ ಮಳೆಯ ಸಂಗಕಾಗಿ.. ಮೋಡಗಳ ಮಿಲನವಾಗಿ ಗುಡುಗು ಮಿಂಚಿನೊಡಗೂಡಿ ಆಗಮಿಸಿದ ಮಳೆರಾಯ ಭುವಿಯ ಭೇಟಿಗಾಗಿ! ಧರೆ ಮಿಂದು ತಂಪಾಗಲು ಮೊಗ್ಗರಳಿ ಹಿರಿದಾಗಲು ಹಸಿರು ಸೀರೆಯುಟ್ಟಳು ನೀರೆ ಪ್ರಕೃತಿ ಮಾತೆಯು.. ವನಧಿ ತುಂಬಿ ತುಳುಕಲು ವದನದಿ ನಗು ಮೂಡಿತು. ಜೀವಿಗಳ ಜೀವ ತುಂಬೋ ಇಳೆ ಮಳೆಯ ಮಿಲನವಾಯ್ತು..

ನೆನಪು

ಇಮೇಜ್
  ಬಸ್ಸಿನಲ್ಲಿ ಕುಳಿತು ಕಿಟಕಿಯಾಚೆ ಮಳೆಯ ಬರುವಿಕೆಯನ್ನೇ ನೋಡುತ್ತಿದ್ದ ನನಗೆ ನನ್ನ-ನಿನ್ನ ನೆನಪುಗಳೆಲ್ಲವೂ ಒಂದೊಂದಾಗಿ ಮನದಲ್ಲಿ ಪುಟಿಯುತ್ತಿದ್ದವು.. ಒಂದೊಂದೇ ಮಳೆ ಹನಿ ಕಿಟಕಿಗಾಜಿಗೆ ಬಂದು ಪುಟಿದಂತೆ;

ಮನದಾಳದ ಮಾತು - ೪

 ಮನದಾಳದ ಇಂಗಿತವ, ಅದೆಂತಹ ಶಬ್ದಗಳ ದಾರದಿಂದ ಅದ್ಯಾವ ಭಾವನೆಗಳ ಮಣಿಗಳಿಂದ ಚೊಕ್ಕವಾಗಿ ಪೋಣಿಸಿ,  ಮಾಲೆಯಾಗಿರಿಸಿದರೂ ಅದೊಂದು ಮಾಮೂಲಿ ಹಾರವಷ್ಟೇ ಮನವರಿಯಲು, ಮನಸಿಲ್ಲದವರಿಗೆ... ಮೌನವೇ ಲೇಸು, ಹೃದಯವ ಬಿಚ್ಚಿಡುವುದಕ್ಕಿಂತ...  ಮೌನವೇ ಸೊಗಸು,  ಮಾತಲ್ಲಿ ಸೋತು, ನೋವುಣ್ಣುವುದಕ್ಕಿಂತ.. 

ಏನೋ ಒಂಥರಾ ಕಚಗುಳಿ..

ಇಮೇಜ್
  ಏನೋ ಒಂಥರಾ ಕಚಗುಳಿ... ಎಂದಿನಂತೆ ಬಸ್ ಇಂದ ಇಳಿದು,‌ ಕಾಲೇಜ್ ಕ್ಯಾಂಪಸ್ಗೆ ಕಾಲಿಟ್ಟಳು ಕಣ್ಮಣಿ. ತಾನಾಯ್ತು, ತನ್ನ ಪಾಡಾಯ್ತು ಎನ್ನುವಂತಿದ್ದ ಆಕೆ, ಯಾರೊಂದಿಗೂ ಅನಗತ್ಯ ಮಾತಿಗಿಳಿದವಳಲ್ಲ. ಒಂಥರಾ ಇಂಟ್ರೋವರ್ಟ್ ಆದರೂ ಒಮ್ಮೆ ಆಪ್ತರಾದರೆ ಕಪ್ಪೆಯಂತೆ ವಟಗುಟ್ಟುತ್ತಿದ್ದಳು. ಅದರಲ್ಲೂ ಹುಡುಗರೆಂದರೆ ಸ್ವಲ್ಪ ಡಿಸ್ಟೆನ್ಸ್ ಇದ್ದೇ ಇತ್ತು. ಅಂತಹ ಕಣ್ಮಣಿಗೆ ಅವಳ ಫ್ರೆಂಡ್ಸ್ 'ಒನ್ ಮ್ಯಾನ್ ಆರ್ಮಿ' ಎಂದು ಯಾವಾಗಲೂ ಟೀಕಿಸುತ್ತಿದ್ದರು. ಏನನ್ನೋ ಯೋಚಿಸುತ್ತಾ ನಡೆಯುತ್ತಿದ್ದ ಕಣ್ಮಣಿ ಎದುರಿನಿಂದ ಒಬ್ಬ ನಡೆದು ಬರುತ್ತಿದ್ದ. ಎಂದೂ, ಯಾರನ್ನೂ ನೋಡಿದಾಗ ಆಗದ ವಿಚಿತ್ರ ಭಾವ ಅವನನ್ನು ನೋಡಿದಾಗ ಅವಳಿಗಾಯಿತು. ಮೊದಲ ಸಲ..ಸುತ್ತಲಿನ ಹಸಿರಿನ ರಮ್ಯತೆ, ಮುದ ನೀಡುತ್ತಾ ರೋಮಾಂಚನಗೊಳಿಸಿತು! ಬೀಸುತ್ತಿರುವ ತಣ್ಣನೆಯ ಗಾಳಿ ಮೊದಲ ಬಾರಿಗೆ ಕಚಗುಳಿಯಿಟ್ಟಂತಾಯಿತು! ..... ಆತ......, ಮನ್ಮಥನಲ್ಲದಿದ್ದರೂ ಸುಂದರನೇ! ಮುಖದಲ್ಲಿದ್ದ ಮಂದಹಾಸವೇ ಸಾಕಿತ್ತು ಅವನ ಅಂದ ಹೆಚ್ಚಿಸಲು. ‘ಯಾರಿವನು..?!’ ಎಂದು ಯೋಚಿಸುತ್ತಾ , ಕಳೆದು ಹೋಗಿದ್ದ ಕಣ್ಮಣಿ ಎಚ್ಚೆತ್ತುಕೊಳ್ಳುವಾಗಲೇ ಆತ ಮಾಯವಾಗಿದ್ದ.  ‘ ಯಾವುದೋ ಲೋಕದಲ್ಲಿ ವಿಹರಿಸದೇ ಇದ್ದಿದ್ದರೆ, ಅವನು ಯಾವ ಕಡೆ ಹೋದನೆಂದಾದರೂ ತಿಳಿದುಕೊಳ್ಳಬಹುದಿತ್ತು. ಛೇ! ಎಂಥಾ ಕೆಲಸವಾಯ್ತು’ ಎಂದು ತನ್ನನ್ನೇ ಶಪಿಸುತ್ತಾ ಕ್ಲಾಸ್ಗೆ ತೆರಳಿದಳು. ‘ಅಯ್ಯೋ! ಹೇಗಿದ್ದೆ ಕಣ್ಮಣಿ.!! ಹುಡುಗರನ್ನು ಕಣ್ಣೆತ್ತ...

ಅಮ್ಮ...

  ಅಮ್ಮ…… ಸಂಸಾರ ನೌಕೆಯ 'ಹುಟ್ಟು' ಇವಳು.. ಅತ್ಯಮೂಲ್ಯ ಜೀವ ಹುಟ್ಟಿಸಿ, ತನ್ನ ಹುಟ್ಟಿಗೆ ಕಾರಣಳಾದವಳು.. ಕಷ್ಟಗಳ ತೆರೆ ಅಪ್ಪಳಿಸಿದರೂ.., ಹೋರಾಡುವಳು.. ಸಹಿಸಿ ಮುನ್ನಡೆವಳು.. ಅಮ್ಮಾ... ಹೊತ್ತವಳು..ಹೆತ್ತವಳು.. ಮಕ್ಕಳಿಗೆ ಪ್ರೀತಿಯ ಅರ್ಥವೇ ಈಕೆ.. ಮಮತೆಯ ಸ್ವರೂಪ.,ಆರಾಧ್ಯ ದೈವ.. ಗದರುವಳು.., ಬೆದರುವಳು, ಕೊನೆಗೆ , ತನ್ನೊಳಗೆ ಸಂಕಟ ಪಡುವಳು.. ಸುಂಟರಗಾಳಿಗೂ ಹೆದರದ ಅಮ್ಮ ಪರದಾಡುವಳು, ಮಗುವಿನ ಕೂಗಿಗೆ.. ತನ್ನೆಲ್ಲಾ "ಬೇಕು"ಗಳನ್ನು, ಆಸೆಗಳನ್ನು "ಬೇಡ"ವಾಗಿಸಿಕೊಂಡವಳು.. ತನ್ನ ಕನಸನ್ನು ಮಗುವಿನ ಕಣ್ಣಲ್ಲಿ ಕಾಣುವಳು.. ಸಹನಾಮೂರ್ತಿಯೂ ಈಕೆಯೇ.. ತ್ಯಾಗದ ಪ್ರತಿರೂಪವೂ ಈಕೆಯೇ.. ಅವಳೇ... ಅಮ್ಮಾ.. ನನ್ನಮ್ಮಾ.. ಮಕ್ಕಳ ಅಸ್ತಿತ್ವದಲ್ಲಿ ತನ್ನ ಇರುವಿಕೆಯನ್ನು ಕಾಣುವವಳು..

ಮಾಯಾಲೋಕ

  ಮಾಯಾಲೋಕ ಭಾವನೆಗಳಿಗೆ ಅವಮಾನವಿಲ್ಲ.. ಬೇಸರ, ಕೋಪವೂ ಅಲ್ಲಿಲ್ಲ.. ಶಾಂತತೆಯ ಮಡುವಲಿ ತೃಪ್ತ ಸುಪ್ತ ಸಾಗರದಲಿ ಈ ನನ್ನ ಲೋಕವಿತ್ತು.. ಸುಮದ ಘಮದೊಳು ಮಧು ಹೀರುವ ದುಂಬಿಯು ಸಕಲ ಜೀವಿಗಳೂ ಸಂತಸವ ಹೊರಹಾಕುತಿತ್ತು.. ವಂಚಕ, ಲಂಚಕರಿಲ್ಲ.. ಕಾಮಿಗಳು, ಕ್ರೂರಿಗಳಿಲ್ಲ.. ಸುಗುಣ ಮಾನವನೊಳ್ ಸುವಿಚಾರಗಳಷ್ಟೇ ಇತ್ತು.. ತರತಮ ಭಾವವಿಲ್ಲ.. ಸಮಾನತೆಯೇ ಎಲ್ಲಾ.. ಐಕ್ಯತೆ ಹೊಂದಿದ ಜೀವಿಗಳಲಿ ಸಹಬಾಳ್ವೆ ಇತ್ತು.. ಶೋಷಣೆ, ಕಣ್ಣೀರಿಗೆ ಜಾಗವಿಲ್ಲ.. ಬಂಧು ಬಾಂಧವರೇ ಎಲ್ಲಾ.. ಇಹುದೆಲ್ಲಿ ಈ ಲೋಕ ? ಕನಸಿನ ನನ್ನರಮನೆಯಲ್ಲಿ.. ನನ್ನದೇ ಮಾಯಾಲೋಕದಲ್ಲಿ..

ಸಣ್ಣ ಕಥೆ -೫

          ಕಾಲದ ಮಹಿಮೆ ಪ್ರಸಾದ್ ಗೆ ಒಳ್ಳೆಯ ಕಂಪೆನಿಯಲ್ಲಿ ಕೆಲಸ ದೊರೆತಿದ್ದರಿಂದ ತಂದೆ ತಾಯಿಯೊಂದಿಗೆ ಸಂತಸದಿಂದಿದ್ದ. ಪದ್ಮಳನ್ನು ಪ್ರೀತಿಸುತ್ತಿದ್ದ ಪ್ರಸಾದ್ ಮನೆಯವರ ಒಪ್ಪಿಗೆಯಂತೆ ಮದುವೆಯೂ ಆದ, ಮಕ್ಕಳೂ ಆದರು. ಮದುವೆಯಾಗಿ 2-3 ವರ್ಷ ಎಲ್ಲರೂ ಜೊತೆಯಾಗಿದ್ದರೂ, ಪದ್ಮಳಿಗೆ ವಯಸ್ಸಾಗುತ್ತಿದ್ದ ಅತ್ತೆ-ಮಾವ ಮನೆಗೆ ಭಾರವೆನಿಸಿದರು. ಮಾತು ಮಾತಿಗೂ ಗಂಡನೆದರು ಬೈಯತೊಡಗಿದಳು. ಮೊದಮೊದಲು ಪ್ರಸಾದ್ ಪದ್ಮಳನ್ನು ಸಮಾಧಾನಪಡಿಸುತ್ತಿದ್ದರೂ, ನಂತರ ಆಕೆ ಹೇಳುವ ಮಾತೇ ಸರಿಯೆನ್ನಿಸತೊಡಗಿತು. ಇಬ್ಬರನ್ನೂ ವೃದ್ಧಾಶ್ರಮಕ್ಕೆ ಸೇರಿಸಬೇಕೆಂದು ಪ್ರಸಾದ್ ಪದ್ಮ ನಿರ್ಣಯಿಸಿದರು. ಆತನ ತಂದೆ-ತಾಯಿ ಎಷ್ಟೇ ಗೋಗರೆದರೂ, ಅಂಗಲಾಚಿದರೂ ಕೇಳದೆ ಒಂದಿಷ್ಟು ಹಣ ನೀಡಿ ವೃದ್ಧಾಶ್ರಮಕ್ಕೆ ಸೇರಿಸಿಯೇ ಬಿಟ್ಟನು.           ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟವರನ್ನೇ ಮರೆತಿದ್ದ ಪ್ರಸಾದ್ ಗೆ ಈಗ ತನ್ನ ಮಕ್ಕಳು ವೃದ್ಧಾಶ್ರಮಕ್ಕೆ ಸೇರಿಸುವಾಗ, "ನಮಗೆ ಬೇಕಾಗಿರುವುದು ನಿನ್ನ ಶ್ರೀಮಂತಿಕೆಯಾಗಲೀ,‌ ಹಣವಾಗಲೀ ಅಲ್ಲ. ನಿನ್ನ ಪ್ರೀತಿ,‌ ಸಮಯವಷ್ಟೇ" ಎಂದು ಹಿಂದೆ ತಾನು ವೃದ್ಧಾಶ್ರಮಕ್ಕೆ ಸೇರಿಸುವಾಗ ತನ್ನ ತಂದೆ-ತಾಯಿ ಹೇಳಿದ್ದ ಈ ಮಾತುಗಳು ನೆನಪಾಗಿ ಕಣ್ಣ ಹನಿ ಕೆಳಗೆ ಜಾರಿತ್ತು.           ಇದೆಲ್ಲವನ್ನೂ ನೋಡಿ ಕ...