ಮಳೆ

 ಮಳೆ 


ಬಸವಳಿದಿಹ ಇಳೆಯೂ

ಸತ್ತಂತಿಹ ಮೊಳೆಯೂ

ಕಾಯುತಿಹರು ಮಳೆಗಾಗಿ

ಮಳೆಯ ಸಂಗಕಾಗಿ..


ಮೋಡಗಳ ಮಿಲನವಾಗಿ

ಗುಡುಗು ಮಿಂಚಿನೊಡಗೂಡಿ

ಆಗಮಿಸಿದ ಮಳೆರಾಯ

ಭುವಿಯ ಭೇಟಿಗಾಗಿ!


ಧರೆ ಮಿಂದು ತಂಪಾಗಲು

ಮೊಗ್ಗರಳಿ ಹಿರಿದಾಗಲು

ಹಸಿರು ಸೀರೆಯುಟ್ಟಳು

ನೀರೆ ಪ್ರಕೃತಿ ಮಾತೆಯು..


ವನಧಿ ತುಂಬಿ ತುಳುಕಲು

ವದನದಿ ನಗು ಮೂಡಿತು.

ಜೀವಿಗಳ ಜೀವ ತುಂಬೋ

ಇಳೆ ಮಳೆಯ ಮಿಲನವಾಯ್ತು..





ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..