ಕೃಷ್ಣ ಕೃಷ್ಣ - ೧
ನನ್ನೊಳಗೆ ನೀನು, ನನ್ನೆಲ್ಲವೂ ನೀನು,
ಈ ಜನುಮದ ಸಾರ, ಸಾಕಾರ ನೀನು
ಗುರಿತೋರು ಗುರುವಾಗು ನಿನ್ನೆಡೆಗೆ ಸೆಳೆದು,
ಬೇರೇನ ಬೇಡೆನು, ನಿನ್ನ ಪ್ರೇಮದ ಹೊರತು!
ಮನಸೊಳಗೆ ಸಿಕ್ಕು ಸುಕ್ಕಾಗಿ ಕೂತಿಹುದು
ಇಹಪರದ ಕೊನೆಯಿರದ ಬೇಗುದಿಗಳು
ನಿನ್ನ ಚರಣಗಳಲಿ ನನ್ನ ಮುಡಿಯಿಟ್ಟು
ಲೀನವಾಗುವವರೆಗೆ ನಿನ್ನೆಡೆ ದಾರಿತೋರು!
ಹೇ ಕೃಷ್ಣಾ...!
👌🏽👍🌹
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿ