ಅಮ್ಮ...
ಅಮ್ಮ……
ಸಂಸಾರ ನೌಕೆಯ 'ಹುಟ್ಟು' ಇವಳು..
ಅತ್ಯಮೂಲ್ಯ ಜೀವ ಹುಟ್ಟಿಸಿ,
ತನ್ನ ಹುಟ್ಟಿಗೆ ಕಾರಣಳಾದವಳು..
ಕಷ್ಟಗಳ ತೆರೆ ಅಪ್ಪಳಿಸಿದರೂ..,
ಹೋರಾಡುವಳು.. ಸಹಿಸಿ ಮುನ್ನಡೆವಳು..
ಅಮ್ಮಾ... ಹೊತ್ತವಳು..ಹೆತ್ತವಳು..
ಮಕ್ಕಳಿಗೆ ಪ್ರೀತಿಯ ಅರ್ಥವೇ ಈಕೆ..
ಮಮತೆಯ ಸ್ವರೂಪ.,ಆರಾಧ್ಯ ದೈವ..
ಗದರುವಳು.., ಬೆದರುವಳು,
ಕೊನೆಗೆ , ತನ್ನೊಳಗೆ ಸಂಕಟ ಪಡುವಳು..
ಸುಂಟರಗಾಳಿಗೂ ಹೆದರದ ಅಮ್ಮ
ಪರದಾಡುವಳು, ಮಗುವಿನ ಕೂಗಿಗೆ..
ತನ್ನೆಲ್ಲಾ "ಬೇಕು"ಗಳನ್ನು, ಆಸೆಗಳನ್ನು
"ಬೇಡ"ವಾಗಿಸಿಕೊಂಡವಳು..
ತನ್ನ ಕನಸನ್ನು ಮಗುವಿನ ಕಣ್ಣಲ್ಲಿ ಕಾಣುವಳು..
ಸಹನಾಮೂರ್ತಿಯೂ ಈಕೆಯೇ..
ತ್ಯಾಗದ ಪ್ರತಿರೂಪವೂ ಈಕೆಯೇ..
ಅವಳೇ... ಅಮ್ಮಾ.. ನನ್ನಮ್ಮಾ..
ಮಕ್ಕಳ ಅಸ್ತಿತ್ವದಲ್ಲಿ ತನ್ನ
ಇರುವಿಕೆಯನ್ನು ಕಾಣುವವಳು..
ಧನ್ಯವಾದಗಳು ಮಿತ್ರರೇ 🙏 ತಮ್ಮ "ಅಮ್ಮ"ನ ಕುರಿತ ಕವನ ತುಂಬಾ ಚೆನ್ನಾಗಿದೆ!!! ಶುಭವಾಗಲಿ!!!
ಪ್ರತ್ಯುತ್ತರಅಳಿಸಿಧನ್ಯವಾದಗಳು 🙏 ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲಿ..
ಅಳಿಸಿNo coment. Yakandre amma anode tafa kannalli niru barutte. Maklna al de tanna gandannannu nokobeku. Alva. Jai amma.
ಪ್ರತ್ಯುತ್ತರಅಳಿಸಿTada ant madkoli taf antide
ಪ್ರತ್ಯುತ್ತರಅಳಿಸಿ🙏😇
ಅಳಿಸಿ