ಮಿಯಾಂವ್ ಕತೆ
ಈ ಮನುಷ್ಯ ಎಂಬ ಪ್ರಾಣಿ ಮಾಡುವ ಅನಾಹುತ ಒಂದೋ ಎರಡೋ! ನಾವು ಹುಲಿ, ಚಿರತೆಗಳಂತೆ ಮೊದಲು ಕಾಡು ಪ್ರಾಣಿಗಳೇ. ಈ ಮಾನವ ಅವನ ಖುಷಿಗಾಗಿ , ಅವನಿಗೆ ಆಗುವ ಇಲಿಗಳ ಕಾಟದಿಂದ ಮುಕ್ತನಾಗಲು ನಮ್ಮನ್ನು ಮನೆಯಲ್ಲಿ ಸಾಕಲು ಪ್ರಾರಂಭಿಸಿದ. ನಿಮಗೆ ಗೊತ್ತಿರಬೇಕಲ್ಲ, ಹುಲಿಗೆ ವಿದ್ಯೆ ಕಲಿಸಿದ್ದು ನಮ್ಮ ಪೂರ್ವಜರೇ! ಎಲ್ಲವೂ ಹಳೆಯ ಕಥೆ ಬಿಡಿ.. ನಿಮಗೆ ನಾ ಯಾರೆಂದು ಗೊತ್ತಾಗಿರಬೇಕಲ್ಲ, ಹೌದು ನಿಮ್ಮ ಯೋಚನೆ ಸರಿಯೇ! ನಾನು ಮಿಯಾಂವ್ ಅಂದ್ರೆ ಬೆಕ್ಕು. ನಾನು ನಮ್ಮಮ್ಮನಿಗೆ ಒಬ್ಬನೇ ಮುದ್ದಿನ ಮಗ. ನಮ್ಮನ್ನು ಸಾಕಿದವರ ಅಲ್ಲ ಅಲ್ಲ, ನಮ್ಮ ಸೇವೆ ಮಾಡುವವರ ಮನೆಯಲ್ಲಿ ನನ್ನ ಹಾಗೆ ಇನ್ನೂ ಅನೇಕರಿದ್ದಾರೆ. ನನ್ನ ಅಮ್ಮ, ಅಜ್ಜಿ, ಚಿಕ್ಕಮ್ಮನ ಮಕ್ಕಳು, ಅಕ್ಕ ಹೀಗೆ.. ನಾನೇ ಕೊನೆಯವ, ಸ್ವಲ್ಪ ಮುದ್ದು ಜಾಸ್ತಿಯೇ. ನಮ್ಮನ್ನು ಸಾಕಿದವರು ಮೀನು-ಮಾಂಸ ತಿನ್ನುವವರಲ್ಲ. ಆದರೆ ನಮಗೆ ಅನ್ನ ಸೇರುವುದಿಲ್ಲ. ನಮಗಾಗಿ ಅದೆಲ್ಲಿಂದಲೋ ಒಣ ಆಹಾರ, ಬಿಸ್ಕೇಟ್ ಎಲ್ಲಾ ತರಿಸುತ್ತಾರೆ. ಅದನ್ನೆಲ್ಲ ತಿಂದು, ಹಾಲು ಕುಡಿದು ನನ್ನ ಕುಟುಂಬದವರು ಹಾಯಾಗಿ, ಖುಷಿಯಾಗಿ ಇರುತ್ತಾರೆ. ಆದರೆ ನಾನು ಹಾಗಲ್ಲ! ನನಗೆ ಪೂರ್ವಜರ ಬೇಟೆಯ ವಿಷಯ ಚೆನ್ನಾಗಿ ಗೊತ್ತು. ನಾನೂ ದೊಡ್ಡ ಬೇಟೆಗಾರನಾಗಬೇಕೆಂಬ ಆಸೆ ನನಗೆ! ಆ ಕಾಡಿನಲ್ಲಿರುವ ಹುಲಿ, ಚಿರತೆ, ಸಿಂಹಗಳನ್ನು ಮೀರಿಸುವ ಛಲ ನನಗೆ. ಆದರೆ ಈ ಮನುಷ್ಯರು..! ಎಲ್ಲಿ ಬಿಡುತ್ತಾರೆ., ಸ್ವಾರ್ಥಿಗಳವರು! ಅವರಿಗೆ ಮುದ್ದು ಮಾಡಲು ನಾವೂ...