ಪೋಸ್ಟ್‌ಗಳು

ಅಮ್ಮ...

  ಅಮ್ಮ…… ಸಂಸಾರ ನೌಕೆಯ 'ಹುಟ್ಟು' ಇವಳು.. ಅತ್ಯಮೂಲ್ಯ ಜೀವ ಹುಟ್ಟಿಸಿ, ತನ್ನ ಹುಟ್ಟಿಗೆ ಕಾರಣಳಾದವಳು.. ಕಷ್ಟಗಳ ತೆರೆ ಅಪ್ಪಳಿಸಿದರೂ.., ಹೋರಾಡುವಳು.. ಸಹಿಸಿ ಮುನ್ನಡೆವಳು.. ಅಮ್ಮಾ... ಹೊತ್ತವಳು..ಹೆತ್ತವಳು.. ಮಕ್ಕಳಿಗೆ ಪ್ರೀತಿಯ ಅರ್ಥವೇ ಈಕೆ.. ಮಮತೆಯ ಸ್ವರೂಪ.,ಆರಾಧ್ಯ ದೈವ.. ಗದರುವಳು.., ಬೆದರುವಳು, ಕೊನೆಗೆ , ತನ್ನೊಳಗೆ ಸಂಕಟ ಪಡುವಳು.. ಸುಂಟರಗಾಳಿಗೂ ಹೆದರದ ಅಮ್ಮ ಪರದಾಡುವಳು, ಮಗುವಿನ ಕೂಗಿಗೆ.. ತನ್ನೆಲ್ಲಾ "ಬೇಕು"ಗಳನ್ನು, ಆಸೆಗಳನ್ನು "ಬೇಡ"ವಾಗಿಸಿಕೊಂಡವಳು.. ತನ್ನ ಕನಸನ್ನು ಮಗುವಿನ ಕಣ್ಣಲ್ಲಿ ಕಾಣುವಳು.. ಸಹನಾಮೂರ್ತಿಯೂ ಈಕೆಯೇ.. ತ್ಯಾಗದ ಪ್ರತಿರೂಪವೂ ಈಕೆಯೇ.. ಅವಳೇ... ಅಮ್ಮಾ.. ನನ್ನಮ್ಮಾ.. ಮಕ್ಕಳ ಅಸ್ತಿತ್ವದಲ್ಲಿ ತನ್ನ ಇರುವಿಕೆಯನ್ನು ಕಾಣುವವಳು..

ಮಾಯಾಲೋಕ

  ಮಾಯಾಲೋಕ ಭಾವನೆಗಳಿಗೆ ಅವಮಾನವಿಲ್ಲ.. ಬೇಸರ, ಕೋಪವೂ ಅಲ್ಲಿಲ್ಲ.. ಶಾಂತತೆಯ ಮಡುವಲಿ ತೃಪ್ತ ಸುಪ್ತ ಸಾಗರದಲಿ ಈ ನನ್ನ ಲೋಕವಿತ್ತು.. ಸುಮದ ಘಮದೊಳು ಮಧು ಹೀರುವ ದುಂಬಿಯು ಸಕಲ ಜೀವಿಗಳೂ ಸಂತಸವ ಹೊರಹಾಕುತಿತ್ತು.. ವಂಚಕ, ಲಂಚಕರಿಲ್ಲ.. ಕಾಮಿಗಳು, ಕ್ರೂರಿಗಳಿಲ್ಲ.. ಸುಗುಣ ಮಾನವನೊಳ್ ಸುವಿಚಾರಗಳಷ್ಟೇ ಇತ್ತು.. ತರತಮ ಭಾವವಿಲ್ಲ.. ಸಮಾನತೆಯೇ ಎಲ್ಲಾ.. ಐಕ್ಯತೆ ಹೊಂದಿದ ಜೀವಿಗಳಲಿ ಸಹಬಾಳ್ವೆ ಇತ್ತು.. ಶೋಷಣೆ, ಕಣ್ಣೀರಿಗೆ ಜಾಗವಿಲ್ಲ.. ಬಂಧು ಬಾಂಧವರೇ ಎಲ್ಲಾ.. ಇಹುದೆಲ್ಲಿ ಈ ಲೋಕ ? ಕನಸಿನ ನನ್ನರಮನೆಯಲ್ಲಿ.. ನನ್ನದೇ ಮಾಯಾಲೋಕದಲ್ಲಿ..

ಸಣ್ಣ ಕಥೆ -೫

          ಕಾಲದ ಮಹಿಮೆ ಪ್ರಸಾದ್ ಗೆ ಒಳ್ಳೆಯ ಕಂಪೆನಿಯಲ್ಲಿ ಕೆಲಸ ದೊರೆತಿದ್ದರಿಂದ ತಂದೆ ತಾಯಿಯೊಂದಿಗೆ ಸಂತಸದಿಂದಿದ್ದ. ಪದ್ಮಳನ್ನು ಪ್ರೀತಿಸುತ್ತಿದ್ದ ಪ್ರಸಾದ್ ಮನೆಯವರ ಒಪ್ಪಿಗೆಯಂತೆ ಮದುವೆಯೂ ಆದ, ಮಕ್ಕಳೂ ಆದರು. ಮದುವೆಯಾಗಿ 2-3 ವರ್ಷ ಎಲ್ಲರೂ ಜೊತೆಯಾಗಿದ್ದರೂ, ಪದ್ಮಳಿಗೆ ವಯಸ್ಸಾಗುತ್ತಿದ್ದ ಅತ್ತೆ-ಮಾವ ಮನೆಗೆ ಭಾರವೆನಿಸಿದರು. ಮಾತು ಮಾತಿಗೂ ಗಂಡನೆದರು ಬೈಯತೊಡಗಿದಳು. ಮೊದಮೊದಲು ಪ್ರಸಾದ್ ಪದ್ಮಳನ್ನು ಸಮಾಧಾನಪಡಿಸುತ್ತಿದ್ದರೂ, ನಂತರ ಆಕೆ ಹೇಳುವ ಮಾತೇ ಸರಿಯೆನ್ನಿಸತೊಡಗಿತು. ಇಬ್ಬರನ್ನೂ ವೃದ್ಧಾಶ್ರಮಕ್ಕೆ ಸೇರಿಸಬೇಕೆಂದು ಪ್ರಸಾದ್ ಪದ್ಮ ನಿರ್ಣಯಿಸಿದರು. ಆತನ ತಂದೆ-ತಾಯಿ ಎಷ್ಟೇ ಗೋಗರೆದರೂ, ಅಂಗಲಾಚಿದರೂ ಕೇಳದೆ ಒಂದಿಷ್ಟು ಹಣ ನೀಡಿ ವೃದ್ಧಾಶ್ರಮಕ್ಕೆ ಸೇರಿಸಿಯೇ ಬಿಟ್ಟನು.           ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟವರನ್ನೇ ಮರೆತಿದ್ದ ಪ್ರಸಾದ್ ಗೆ ಈಗ ತನ್ನ ಮಕ್ಕಳು ವೃದ್ಧಾಶ್ರಮಕ್ಕೆ ಸೇರಿಸುವಾಗ, "ನಮಗೆ ಬೇಕಾಗಿರುವುದು ನಿನ್ನ ಶ್ರೀಮಂತಿಕೆಯಾಗಲೀ,‌ ಹಣವಾಗಲೀ ಅಲ್ಲ. ನಿನ್ನ ಪ್ರೀತಿ,‌ ಸಮಯವಷ್ಟೇ" ಎಂದು ಹಿಂದೆ ತಾನು ವೃದ್ಧಾಶ್ರಮಕ್ಕೆ ಸೇರಿಸುವಾಗ ತನ್ನ ತಂದೆ-ತಾಯಿ ಹೇಳಿದ್ದ ಈ ಮಾತುಗಳು ನೆನಪಾಗಿ ಕಣ್ಣ ಹನಿ ಕೆಳಗೆ ಜಾರಿತ್ತು.           ಇದೆಲ್ಲವನ್ನೂ ನೋಡಿ ಕ...

ಸಂಸ್ಕೃತದಲ್ಲಿಹುದು ಸಂಸ್ಕೃತಿ

            ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲೇ ಹರಿದು ಬರುತ್ತದೆ. ಅವುಗಳಲ್ಲೊಂದು ವಿಶ್ವ ಸಂಸ್ಕೃತ ದಿನ. ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಸಂಸ್ಕೃತ ಭಾಷೆಯ ಮಹತ್ವವನ್ನು ಸಾರುವುದು ಇದರ ಉದ್ದೇಶ. ದೇವಭಾಷಾ, ಗೀರ್ವಾಣವಾಣೀ, ಅಮೃತವಾಣೀ, ಸುರಭಾರತೀ ಎಂದೆಲ್ಲಾ ಕರೆಸಿಕೊಳ್ಳುವ ಸಂಸ್ಕೃತ ಎಲ್ಲ ವಿಷಯಗಳ ಮೂಲಾಧಾರ.            ಸರ್ವಸ್ವವನ್ನೂ ತನ್ನಲ್ಲಿ ಇಟ್ಟುಕೊಂಡ ವಿಶ್ವಕೋಶ. ಇದು  ಎಲ್ಲ ಭಾಷೆಗಳ ಜನನಿ. ಸಂಸ್ಕೃತವು ವಿಶಿಷ್ಟವಾದ, ಸುಲಲಿತವಾದ ಭಾಷೆ. ವೇದ-ವೇದಾಂಗ, ಉಪನಿಷತ್, ಪುರಾಣ, ರಾಮಾಯಣ, ಮಹಾಭಾರತ, ಪಂಚತಂತ್ರ ಇವುಗಳಿರುವುದು ಸಂಸ್ಕೃತದಲ್ಲಿ. ಅರ್ಥಶಾಸ್ತ್ರ, ವೇದಗಣಿತ, ನೀತಿಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ನ್ಯಾಯ, ಧರ್ಮ, ರಾಜನೀತಿ, ವ್ಯವಹಾರ, ನಾಟ್ಯ, ಕಲೆ ಇವುಗಳ ತವರೂರು ಸಂಸ್ಕೃತ. ಯಾವುದೇ ವಿಷಯವನ್ನಾಗಲಿ ಆಳವಾಗಿ ತಿಳಿಯಬೇಕೆಂದರೆ ಅದಕ್ಕೆ  ಸಂಸ್ಕೃತ ಬೇಕು.             ‘ಭಾರತದ ಪ್ರತಿಷ್ಠೆ ಎರಡು- ಸಂಸ್ಕೃತ ಮತ್ತು  ಸಂಸ್ಕೃತಿ’. ಸನಾತನ ಸಂಸ್ಕೃತಿಯ ತಾಯಿಬೇರು ಸಂಸ್ಕೃತ. ಪ್ರಾಚೀನ ಕಾಲದಿಂದ ಇಂದಿನವರೆಗೂ ನಮ್ಮ ಭಾರತೀಯ ಸಂಸ್ಕೃತಿ ಅವಿಚ್ಛಿನ್ನವಾಗಿ, ಅವ್ಯಾಹತವಾಗಿ ಹರಿದು ಬರಲು ಕಾರಣ ಸಂಸ್ಕೃತವೇ. ಒಬ್ಬ ವ್ಯಕ್ತಿ ಮಾನಸಿಕವಾಗಿ, ಬೌದ್ಧಿಕವಾಗಿ, ನಿಷ...

ಭಾವದಲೆ

ಇಮೇಜ್
ರಭಸದಿ ನುಗ್ಗುವ ಕೋಪ ಸ್ವಪ್ರತಿಷ್ಠೆಯಲಿ,  ಕೈಬೀಸಿ ಕರೆಯುತಿದೆ ಅಡಗಿಹ ಮಾತುಗಳನು... ಮುನಿಸಿನಲಿ ಸಿಲುಕಿ ಪರಿತಪಿಸುತಿರೆ, ಮೂಲೆಯಲವಿತಿಹ ಅಶ್ರುಗಳೂ ತೊಯ್ಯುತಿವೆ ಅಕ್ಷಿಗಳನು... ಆವೇಶದಿ ಹೂಡಿದ  ಬಾಣಗಳಿಂದ ಖಾಲಿ ಖಾಲಿಯಾಗಿವೆ ತಾಳ್ಮೆಯ ಬತ್ತಳಿಕೆ! ಆವರಿಸಿರುವ ಯೋಚನೆಗಳ ಹತ್ತಿಕ್ಕಲಾಗದೆ ಬೇಲಿ ಕಟ್ಟುತಿರುವೆ ಮನದ ಸೀಮೆಗೆ...

ಅಲೆಮಾರಿಯಾಗುವಾಸೆ..

ಇಮೇಜ್
ಲೋಕವನ್ನೇ ಮರೆತು ಪ್ರಕೃತಿಯಲಿ ಬೆರೆತು ಸಾಗುವಾಸೆ.... ಬಿಡುವಿಲ್ಲದ ಯಾನದಲಿ ಅಂತ್ಯವಿರದ ಪಯಣದಲಿ ಮರೆತು, ಮೈಮರೆತು ನನ್ನ ನಾ ತಿಳಿಯುವಾಸೆ... ಹುಚ್ಚೆದ್ದು ಕುಣಿಯುವಾಸೆ.. ಅಲೆಯುವಾಸೆ... ಅಲೆಮಾರಿಯಾಗುವಾಸೆ....  

ಹಾಯ್ಕು(ಹೈಕು)ಗಳು

೧.  ಸತ್ಕಾರ್ಯ ಮಾಡಿ ಉಳಿಸೋಣ ಪ್ರಕೃತಿ ಅದೇ ಸುಕೃತಿ ೨. ಸಸ್ಯ ಉಳಿಸಿ ಹಸಿರಿನಲ್ಲಿಹುದು ಜೀವಿಯುಸಿರು ೩. ಆತ್ಮಸಂಯಮ ಮನಶೈತ್ಯವೇ ಗುರಿ ಈ ಯೋಗದಲಿ ೪. ಯೋಗದಲ್ಲಿದೆ ಆರೋಗ್ಯದ ಸೌಭಾಗ್ಯ ರೋಗದ ಅಂತ್ಯ ೫. ಮನೋರೋಗಕೆ ದಿವ್ಯೌಷಧ ಈ ಯೋಗ ಚಿತ್ತ ನಿರೋಗ

ಮಗುವಿನ ಮುಗ್ಧತೆ

ಇಮೇಜ್
  ಮಗುವಿನ ಮುಗ್ಧತೆ ಮುಂಗಾರಿನ ಸಮಯದಲಿ ಮುಸ್ಸಂಜೆ ಹೊತ್ತಲಿ ಕಿಟಕಿಸರಳಿನ ಹಿಂಬದಿಯಲಿ ಮಗುವೊಂದು ಹೊರ ಇಣುಕುತಿತ್ತು. ಕಾರ್ಮೋಡದ ಘರ್ಷಣೆಯಲಿ ಉದ್ಭವಿಸಿದ ಶಬ್ದದಲಿ ಕಣ್ಣುಕುಕ್ಕುವ ಬೆಳಕಿನಲಿ ಕ್ಷಣಕಾಲ ಮಗು ತತ್ತರಿಸಿತ್ತು. ಅಂಜಿಕೆಯ ನಡುವಿನಲಿ ಚಿಗುರೊಡೆದ ಆಸೆಯಲಿ ಮಿಂಚು-ಸಿಡಿಲಿನಾಟದಲಿ ಆ ಸಿಡಿಲು ತಾನಾಗಬಯಸಿತ್ತು. ಕಾಲಾಂತಕವದೆಷ್ಟೋ ಜೀವಿಗಳ ಪಾಲಿನಲಿ ಎಂದರಿಯದ ಮಗುವಿನ ಮುಗ್ಧತೆಯಲಿ ಆಕರ್ಷಿಸಿದ ಸಿಡಿಲು ತಾನಾಗುವ ಬಯಕೆಯಲಿ ಮಗುವಿನ ತಿಳಿಹೃದಯ ಪ್ರಕಟವಾಗಿತ್ತು.

ಮನದಾಳದ ಮಾತು-೩

ಇಮೇಜ್
  ಸುಖ-ಸಂತೋಷ ಎಲ್ಲವೂ ನಿನ್ನಲ್ಲೇ... ಬೇಸರ-ದುಃಖ ನೀ ಮರೆಯಾಗುವ ಭಯದಲ್ಲೇ... ಎತ್ತಿಂದೆತ್ತ ಜೀವನ ಸಾಗಿದರೂ, ಮತ್ತೆ ನಿನ್ನ ಬಿಗಿದಪ್ಪಿ,,, ನಿನ್ನ ಮಡಿಲಲಿ ಮಲಗುವ ಮಗುವು ನಾ.....

ಮೃಗವಲ್ಲ !! ಇವ “ಮಾನವ” !!

  ಮೃಗವಲ್ಲ !! ಇವ “ ಮಾನವ ” !! ಕೇಳುತಿದೆ ಆಕ್ರಂದನ, 'ನೀವಿಲ್ಲದೆ ನಾವಿಲ್ಲ'. ಹಾಂ! ಅದು ಪ್ರಾಣಿಗಳದೆ! ಮಾನವ ಪ್ರಾಣಿ ಅಲ್ಲಿಲ್ಲ. ವಿರಾಮವಿಲ್ಲದ ಕಾರ್ಮಿಕನೀಗ, ಶ್ರಮವಿಲ್ಲ ಆತನಿಗಿಲ್ಲಿ 'ಸಸ್ಯಗಳ ಕೊಲ್ಲುತಿರುವೆ' ಎಂಬ ಹೆಮ್ಮೆಯಲ್ಲಿ! ಆಶ್ರಯ ಕಳಕೊಂಡ ಜೀವಿಗಳೆಷ್ಟೋ! ಪ್ರಾಣ ತೆತ್ತ ಪ್ರಾಣಿಗಳೆಷ್ಟೋ! ಮೂಡದು ಅನುಕಂಪವು ಆತನ ಕಟು ಹೃದಯದಲ್ಲಿ! ಸಾಧ್ಯವಿದು 'ಮಾನವ'ನಿಗೆ, ಕರುಣಾಹೀನನಿಗೆ ಹಣದ ಅಮಲಿನಲಿ, ದುರಾಸೆಯ ಮದವೇರಿ ಸ್ವಾರ್ಥದಿ ಆಕಾಶಕ್ಕೇರಿದೀತನಿಗೆ! ಪ್ರಕೃತಿಯ ಕೆಡಿಸಿ, ಭೂತಾಪ ಏರಿಸಿ ಸೃಷ್ಟಿಯಲಿ ವೃಷ್ಟಿಗಾಗಿ ದುಃಖಿಸುತಿಹ ಶುದ್ಧಪ್ರಾಣವಾಯುವಿಗಾಗಿ ಶೋಕಿಸುತಿಹ ಅತೀ ಬುದ್ಧಿವಂತ ಮೂರ್ಖನು! ಸರ್ವಜ್ಞಳಾಗಿ ಈ ಹುಚ್ಚಾಟ ನೋಡುತಿಹ ಕ್ಷಮಾಧಾರಿ ಧರಿತ್ರಿಯ  ಈ ಮೌನ ಮಾತಾಗದೇ!? ಇನ್ನೂ ಹಿಂಸೆಯ  ಮೌನದಿಂ ಸಹಿಸಿಯಾಳೇ..?!