ಮಗುವಿನ ಮುಗ್ಧತೆ

 ಮಗುವಿನ ಮುಗ್ಧತೆ




ಮುಂಗಾರಿನ ಸಮಯದಲಿ
ಮುಸ್ಸಂಜೆ ಹೊತ್ತಲಿ
ಕಿಟಕಿಸರಳಿನ ಹಿಂಬದಿಯಲಿ
ಮಗುವೊಂದು ಹೊರ ಇಣುಕುತಿತ್ತು.

ಕಾರ್ಮೋಡದ ಘರ್ಷಣೆಯಲಿ
ಉದ್ಭವಿಸಿದ ಶಬ್ದದಲಿ
ಕಣ್ಣುಕುಕ್ಕುವ ಬೆಳಕಿನಲಿ
ಕ್ಷಣಕಾಲ ಮಗು ತತ್ತರಿಸಿತ್ತು.

ಅಂಜಿಕೆಯ ನಡುವಿನಲಿ
ಚಿಗುರೊಡೆದ ಆಸೆಯಲಿ
ಮಿಂಚು-ಸಿಡಿಲಿನಾಟದಲಿ
ಆ ಸಿಡಿಲು ತಾನಾಗಬಯಸಿತ್ತು.

ಕಾಲಾಂತಕವದೆಷ್ಟೋ ಜೀವಿಗಳ ಪಾಲಿನಲಿ
ಎಂದರಿಯದ ಮಗುವಿನ ಮುಗ್ಧತೆಯಲಿ
ಆಕರ್ಷಿಸಿದ ಸಿಡಿಲು ತಾನಾಗುವ ಬಯಕೆಯಲಿ
ಮಗುವಿನ ತಿಳಿಹೃದಯ ಪ್ರಕಟವಾಗಿತ್ತು.



ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..