ಭಾವದಲೆ
ರಭಸದಿ ನುಗ್ಗುವ ಕೋಪ
ಸ್ವಪ್ರತಿಷ್ಠೆಯಲಿ,
ಕೈಬೀಸಿ ಕರೆಯುತಿದೆ
ಅಡಗಿಹ ಮಾತುಗಳನು...
ಮುನಿಸಿನಲಿ ಸಿಲುಕಿ
ಪರಿತಪಿಸುತಿರೆ,
ಮೂಲೆಯಲವಿತಿಹ ಅಶ್ರುಗಳೂ
ತೊಯ್ಯುತಿವೆ ಅಕ್ಷಿಗಳನು...
ಆವೇಶದಿ ಹೂಡಿದ
ಬಾಣಗಳಿಂದ
ಖಾಲಿ ಖಾಲಿಯಾಗಿವೆ
ತಾಳ್ಮೆಯ ಬತ್ತಳಿಕೆ!
ಆವರಿಸಿರುವ ಯೋಚನೆಗಳ
ಹತ್ತಿಕ್ಕಲಾಗದೆ
ಬೇಲಿ ಕಟ್ಟುತಿರುವೆ
ಮನದ ಸೀಮೆಗೆ...
Nanna manasannu bannisidantide🥹.nivu kavanadinda adannu bannisiddiri.Nice effort.
ಪ್ರತ್ಯುತ್ತರಅಳಿಸಿ🙏😇
ಅಳಿಸಿ👍
ಅಳಿಸಿ