ಪೋಸ್ಟ್‌ಗಳು

ಮೃಗವಲ್ಲ !! ಇವ “ಮಾನವ” !!

  ಮೃಗವಲ್ಲ !! ಇವ “ ಮಾನವ ” !! ಕೇಳುತಿದೆ ಆಕ್ರಂದನ, 'ನೀವಿಲ್ಲದೆ ನಾವಿಲ್ಲ'. ಹಾಂ! ಅದು ಪ್ರಾಣಿಗಳದೆ! ಮಾನವ ಪ್ರಾಣಿ ಅಲ್ಲಿಲ್ಲ. ವಿರಾಮವಿಲ್ಲದ ಕಾರ್ಮಿಕನೀಗ, ಶ್ರಮವಿಲ್ಲ ಆತನಿಗಿಲ್ಲಿ 'ಸಸ್ಯಗಳ ಕೊಲ್ಲುತಿರುವೆ' ಎಂಬ ಹೆಮ್ಮೆಯಲ್ಲಿ! ಆಶ್ರಯ ಕಳಕೊಂಡ ಜೀವಿಗಳೆಷ್ಟೋ! ಪ್ರಾಣ ತೆತ್ತ ಪ್ರಾಣಿಗಳೆಷ್ಟೋ! ಮೂಡದು ಅನುಕಂಪವು ಆತನ ಕಟು ಹೃದಯದಲ್ಲಿ! ಸಾಧ್ಯವಿದು 'ಮಾನವ'ನಿಗೆ, ಕರುಣಾಹೀನನಿಗೆ ಹಣದ ಅಮಲಿನಲಿ, ದುರಾಸೆಯ ಮದವೇರಿ ಸ್ವಾರ್ಥದಿ ಆಕಾಶಕ್ಕೇರಿದೀತನಿಗೆ! ಪ್ರಕೃತಿಯ ಕೆಡಿಸಿ, ಭೂತಾಪ ಏರಿಸಿ ಸೃಷ್ಟಿಯಲಿ ವೃಷ್ಟಿಗಾಗಿ ದುಃಖಿಸುತಿಹ ಶುದ್ಧಪ್ರಾಣವಾಯುವಿಗಾಗಿ ಶೋಕಿಸುತಿಹ ಅತೀ ಬುದ್ಧಿವಂತ ಮೂರ್ಖನು! ಸರ್ವಜ್ಞಳಾಗಿ ಈ ಹುಚ್ಚಾಟ ನೋಡುತಿಹ ಕ್ಷಮಾಧಾರಿ ಧರಿತ್ರಿಯ  ಈ ಮೌನ ಮಾತಾಗದೇ!? ಇನ್ನೂ ಹಿಂಸೆಯ  ಮೌನದಿಂ ಸಹಿಸಿಯಾಳೇ..?!

ಕಳೆದು ಹೋಗಿಹೆ

 ಹೀಗೇಕೆ ಕನಸು ಕಾಡಿದೆ.. ಮನಸಲ್ಲಿ ಮಧುರ ಭಾವ ಮೂಡಿದೆ.. ಮೌನದಲ್ಲೂ ಪಿಸುಮಾತು ಕೇಳಿದೆ.. ಕಹಿಯಲ್ಲೂ ಸಿಹಿ ರುಚಿಯ ತಿಳಿಸಿದೆ.. ನನಗೇನೋ....ಏನೋ....ಆಗಿದೆ...  ಭಾವನೆಗಳ ಪಯಣ ಸಾಗಿದೆ.. ನಿಲ್ಲೆಂದರೂ ನನ್ನ ಮಾತು ಕೇಳದೆ ದಿಕ್ಕು-ದಾರಿ-ಗುರಿಯನ್ನು ತಿಳಿಯದೆ ಕಷ್ಟ ಸುಖದ ಪರಿವೆ ಇಲ್ಲದೆ ನನ್ನಲ್ಲೇ ನಾನು ಕಳೆದು ಹೋಗಿಹೆ...

ಮುಪ್ಪಾದ ಬದುಕು

 "ನಾನು‌ ಹೇಳ್ತಿರೋದನ್ನ ಅರ್ಥ ಮಾಡಿಕೊಳ್ಳಿ ಅಪ್ಪಾ". "ಹಾಂಗಲ್ಲ ಮಗಾ. ಯಾವ್ದೋ ದೇಶಕ್ಕೆ ಹೋಗಿ, ಎಲ್ರಿಂದ‌ ದೂರ ಇದ್ದು ಗಳಿಸೋ ಹಣ ಎಷ್ಟ್ ಸುಖ, ನೆಮ್ದಿ ಕೊಡುತ್ತೆ". "ಅಂದ್ರೇನು ನಿಮ್ಮ ತರಾನೇ ಇದೇ ಹಳ್ಳೀಲಿ ಬಿದ್ದಿರು ಅಂತೀರಾ?" "ಹಳ್ಳಿ ಆದ್ರೇನ್, ಪಟ್ಣ ಆದ್ರೇನ್ ಜೀವ್ನ ಮಾಡುಕೆ. ಅಲ್ದೇ ನಮ್ಗಿರೋದ್ ನೀನೊಬ್ನೆ ಮಗಾ". "ಹಾಂ! ಈಗ ಗೊತ್ತಾಯ್ತು. ಸತ್ಯ ನಿಮ್ಮ ಬಾಯಿಂದಾನೇ ಹೇಗೆ ಹೊರಗೆ ಬಂತು ನೋಡಿ. ಈ ಹಳ್ಳೀಲಿ ಬೇಸಾಯ ಮಾಡ್ಕೊಂಡು, ಕತ್ತೆ ಹಾಗೆ ನಿಮ್ಮ ಚಾಕರಿ ಮಾಡ್ಕೊಂಡು ಬಿದ್ದಿರು ಅಂತಿದೀರ. ಆಗೋದೇ ಇಲ್ಲ. ಇನ್ನು ಇದರ ಬಗ್ಗೆ ಮಾತು ಬೇಡ" ಎಂದು ಅಪ್ಪನ ಕಡೆ ತಿರುಗಿಯೂ ನೋಡದೆ, ಚಾವಡಿಯಿಂದ ಬಿರಬಿರನೆ ಹೊರನಡೆದ ಮಗ ಸಿದ್ದು. ತಂದೆ ವೆಂಕಟಯ್ಯ ಅಸಹಾಯಕತೆಯಿಂದ ತಮ್ಮ ಪತ್ನಿ ಗಿರಿಜಮ್ಮನ  ಕಡೆ ನೋಡಿದರು. ಗಿರಿಜಮ್ಮ ಸೆರಗಿನಲ್ಲಿ ಕಣ್ಣೀರನ್ನು ಒರೆಸಿಕೊಳ್ಳುತ್ತ "ನಮ್ಮ ಹಣೆಬರಹ ಅಷ್ಟೇ. ಅವ್ನು ಏನಾದ್ರೂ ಮಾಡ್ಕೊಳ್ಳಿ. ನೀವೇನೂ ಅನ್ಬೇಡಿ"‌ ಎಂದರು. ಮಗನಿಗೆ ಪ್ರತಿಷ್ಠೆ, ಹಣ, ಹೆಸರೇ ಮುಖ್ಯವಾಗಿತ್ತು. ವಯಸ್ಸಾದ ಹೆತ್ತವರಲ್ಲ. ಮಗ ಸುಖವಾಗಿರಬೇಕು‌ ಎಂದು ಹೆತ್ತವರು ಪಟ್ಟ ಕಷ್ಟ ಹೇಗೆ ತಾನೇ ಅರ್ಥವಾಗಬೇಕು. ಮರುದಿನವೇ ತನ್ನ ಸಾಮಗ್ರಿಗಳನ್ನು ತೆಗೆದುಕೊಂಡು ಹೊರಡಲು ತಯಾರಾದ. "ನನ್ನ ಬಗ್ಗೆ ನಿಮಗೆ ಚಿಂತೆ ಬೇಡ. ನಾನಿನ್ನು ವಾಪಾಸ್ಸಾಗುವುದು ಎಂದೋ ನನಗೇ ...

ಮನದಾಳದ ಮಾತು -೨

ಇಮೇಜ್
 ಕಾದಿರುವ ಕನಸುಗಳ ತಗಾದೆಗೆ ಮಾತೆಲ್ಲ ಮರೆತಂತೆ ನಟಿಸುತಿರುವೆ ಮನಸಿಗೂ ಚಿಂತೆ ಕನಸುಗಳದೇ ಎಲ್ಲವೂ ಮರೀಚಿಕೆಯಾಗುವ ಭಯದಲ್ಲೇ ಅದೇ ಕನಸುಗಳು-ಅದೇ ಕಾರಣಗಳು ಹೊಯ್ದಾಟವಂತೂ ಇದ್ದೇ ಇದೆ ಏನೂ ಮಾಡದೇ ಏನನ್ನೂ ಬದಲಿಸಲಾಗದೆ ಎಲ್ಲವನೂ ಮರೆತಂತೆ ನಟಿಸಲೇಬೇಕಿದೆ...

ನಮನ

ಇಮೇಜ್
  ಚರಾಚರ ವಸ್ತುಗಳ ಸೃಷ್ಟಿಕರ್ತ ಸೃಷ್ಟಿಸಿದ ಜೀವಿಗಳ ಪಾಲಕ ಜಗದ ನಿಯಮಗಳ ನಿಯಾಮಕ ಭೌತ-ಅಭೌತಗಳ ನಿಯಂತ್ರಕ ಪ್ರಾಪಂಚಿಕ ವಸ್ತುಗಳ ಸಂಚಾಲಕ ಪಾಪ ಪುಣ್ಯಗಳ ಪರಿಶೋಧಕ ದುಷ್ಟರ ಸಂಹಾರಕ,  ಶಿಷ್ಟರ ಸಂರಕ್ಷಕ ಭಕ್ತರ ತೊಂದರೆಗಳ ಆಲಿಪ ಹೇ ಅದ್ಭುತ ಶಕ್ತಿಯೇ, ನಿನಗೆ ನನ್ನ ನಮನ...

ಮನದಾಳದ ಮಾತು-೧

ಇಮೇಜ್
ಎಷ್ಟೋ ಮಾತುಗಳು ನೇರವಾಗಿ ಹೇಳಲಾಗದೆ ಅಥವಾ ಸಂದರ್ಭಗಳು ದೊರಕದೆ ಮನಸ್ಸಿನೊಳಗೇ ಉಳಿದುಬಿಡುತ್ತದೆ. ಅಂತಹ ಉಳಿದ, ಹುದುಗಿ ಹೋದ, ಅವಿತ ಮಾತುಗಳೆಲ್ಲಾ ಒಮ್ಮೊಮ್ಮೆ ಹೊರಬರುವುದು ಲೇಖನಿ ಹಿಡಿದಾಗ ಮಾತ್ರ. ಅದೇ ಮನದಾಳದ ಮಾತು.... ಮಾತೇನೋ ಹೊರಬಂದಾಯ್ತು. ಅರಿಯುವ ಪ್ರಯತ್ನ ಮಾಡಬೇಕಷ್ಟೇ... ತಿಳಿಯೊಮ್ಮೆ, ಚಿಂತಿಸು ಮಗದೊಮ್ಮೆ ನೀನೊಬ್ಬರ ಕುರಿತು ಬಡಬಡಿಸುವ ಮೊದಲು.. ಸಾಧ್ಯವಾದಲ್ಲಿ ಸ್ಪಂದಿಸು, ಅಸಾಧ್ಯವಾದಲ್ಲಿ ಮೌನವಹಿಸು ಅವರ ಕಷ್ಟಗಳಿಗೆ ನಿನ್ನದೇ ಆದ ರೂಪ ಕೊಡುವ ಬದಲು.. ನಿನ್ನನುಭವದ ಕಥನಗಳೇ ಆಗಿರಬಹುದು ಆದರೂ, ಅನುಭವದಲಿ ಭಿನ್ನತೆಯಿರಲು ಅನುಭವವ ಅನುಭವಿಸುವವರೇ ಬಲ್ಲರು..

ಮನೋವೃಷ್ಟಿ..

ಇಮೇಜ್
  ಮನೋದಧಿಯಲಿ ಪುಟ್ಟಿ ಆಗಮಿಪ ಮಾರುತವು ಹೊತ್ತೊಯ್ದು ತಂದಿತು ಮುಂಗಾರನು ಇಂಚರದ ಗುಂಗಿನಲಿ ಭಾವಗಳ ಸಿಂಚನವು ಪುಟಿಪುಟಿದು ಏಳುತ ಆರ್ಭಟಿಸಿ ನಿಂದು ಮಿಂಚಿನಂಚಿನಲಿ ಕೆಕ್ಕರಿಸಿ ಕೆಣಕುತಲಿ ಅಪಹಾಸ್ಯದ ಭ್ರಾಂತಿಯೊಳ್ ಗರ್ಜಿಸುತಲಿ ಘರ್ಷಣೆಗೊಂಡು ಗತಿ ವಿಸ್ತರಗೊಂಡು ದುಮ್ಮಾನ ದುಮುಕಿತು ಹನಿಗೂಡಿಕೊಂಡು; ಜೀವನದ ಆಧಾರ ಭಾವಕುಪಹಾರ, ಸರ್ವಸಂಪದಕೆ ಮನೋವೃಷ್ಟಿಯಿಂದುಪಕಾರ..

ನಿನ್ನನೇ ಸ್ಮರಿಸುತ....

ಇಮೇಜ್
ಹೊಸತಾದ ಮೋಹ ನವಿರಾದ ಭಾವ, ಸೋತಿದೆ ಹೃದಯ ನೋಡುತ ನಿನ್ನ... ಕಾರಣ ಏನೋ, ಕಾತುರವೇಕೋ, ಬಯಸಿದೆ ಸನಿಹ ಮನವು ಇದೇಕೋ... ನಿನ್ನೆಗಳ ನೆನಪಿಲ್ಲ ನಾಳೆಗಳ ಭಯವಿಲ್ಲ, ನೀನಿರಲು ಎದುರಲ್ಲಿ ನಗುವಿಗೆ ನೆಪವಿಲ್ಲ... ಕೇಳೋದು ಯಾರೋ ಹೇಳೋದು ಏನೋ, ನಿಂತಲ್ಲೇ ನಿಂತಿದೆ ಮನವು ಇದೇಕೋ.... ದಿನಗಳು ಹೀಗೇಕೆ, ಗುನುಗುವ ಹಾಡಂತೆ, ನಿನ್ನನೇ ಸ್ಮರಿಸುತ, ಕಾಯುತ ಕೂತಂತೆ... ನೀನು ಯಾರೋ ಈ ಭಾವನೆ ಏಕೋ, ಹುಚ್ಚು ಹಿಡಿಸಿದೆ ಮನವು ಇದೇಕೋ...

ವರ್ಕ್ ಫ್ರಮ್ ಹೋಮ್

ಇಮೇಜ್
      'ಹೋ! ನಿಂಗೀಗ ವರ್ಕ್ ಫ್ರಮ್ ಹೋಮ್, ಅಲ್ವಾ! ಹೇಗಾಗುತ್ತೆ' ಕೋರೋನಾ ಶುರುವಾದ ನಂತರದ ಸಾಮಾನ್ಯ ಪ್ರಶ್ನೆ. ನಾನಂತು 'ನಂಗಂತು ಫುಲ್ ಖುಷಿ' ಅನ್ನೋಳು. ಇನ್ನೊಂದು ಸಾಮಾನ್ಯವಾಗಿ ಕೇಳೋ ಮಾತು, 'ಅಯ್ಯೋ, ಈ ವರ್ಕ್ ಫ್ರಮ್ ಹೋಮ್ ಯಾವಾಗ ಮುಗ್ಯುತ್ತೋ' ಅಂತ. ನಾನಂತು ಈ ಕ್ಯಾಟೆಗರಿ ಅಲ್ಲಪ್ಪ. ಯಾಕಲ್ಲ ಅನ್ನೋದಿಕ್ಕೆ ಕಾರಣ ಇದೆ. ಒಂದ್ ಚಿಕ್ಕ ಫ್ಲಾಷ್ಬ್ಯಾಕ್ ಬಿ.ಸಿ ಟೈಮಿಗೆ, ಅಂದ್ರೆ ಬಿಫೋರ್ ಕೊರೋನಾ ಟೈಮಿಗೆ.     ಕರ್ನಾಟಕ ಕರಾವಳಿಯ ಒಂದು ಭಾಗ, ಉಡುಪಿಯ ಸಾಲಿಗ್ರಾಮ ನಮ್ಮೂರು. ಮಲೆನಾಡಿನ ತಪ್ಪಲು ಪ್ರದೇಶ ಸಿದ್ಧಾಪುರದ ಆಜ್ರಿಯಲ್ಲಿ ಅಜ್ಜನಮನೆ. ಹಾಗಾಗಿ ಪ್ರಕೃತಿಯ ಮಡಿಲಿನಲ್ಲಿ ಬೆಳೆದವಳು. ಬೇಸಿಗೆಯ ರಜೆಯಲ್ಲಿ ಬೆಂಗಳೂರಿನ ನೆಂಟರಿಷ್ಟರ ಮನೆಗೆ ಹೋಗಿಬರ್ತಾ ಇದ್ರೂ, ಆಗೆಲ್ಲಾ ಪ್ರವಾಸದ ಖುಷಿ ಬಿಟ್ಟರೆ ಮತ್ತೇನು ತಲೆಕೆಡಿಸುವ ವಿಚಾರಗಳು ಇರಲಿಲ್ಲ. ಓದಿನ ಉದ್ದೇಶವಾಗಿಯೂ ಊರು ಬಿಡುವ ಪ್ರಸಂಗವೂ ಬಂದಿರಲಿಲ್ಲ.         ಬಿ.ಎಸ್ಸಿಯಲ್ಲಿ ವಿಪ್ರೋಗೆ ಕ್ಯಾಂಪಸ್ ಸೆಲೆಕ್ಷನ್ ಆಗಿತ್ತು. ಯಾವುದೋ ಒಂದು ನಿರ್ಧಾರ, ಹುರುಪಿನಲ್ಲಿ ಸೇರಲು ಬಯಸಿದ್ದೆ. ಹಾಗೇ ಕರೆ ಬಂದಾಗ ನಾನು, ಅಪ್ಪ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ವಿ. ನೆಂಟರಿಷ್ಟರ ಮನೆಯಲ್ಲಿ ಉಳಿದು, ಮರುದಿನ ರಿಪೋರ್ಟ್ ಮಾಡಿಕೊಳ್ಳಲು ಎಲಿಕ್ಟ್ರಾನಿಕ್ ಸಿಟಿಗೆ ಕ್ಯಾಬಿನಲ್ಲಿ ಹೊರಟೆವು‌, ಅದೇ ನಮ್ಮಿಬ್ಬರ ಮೊದಲ ಕ್ಯಾಬ್ ಪಯಣ. ...

ಸಣ್ಣ ಕಥೆ-೪

ಇಮೇಜ್
  ಯಾರೊಂದಿಗೂ ಬೆರೆಯದ, ಸದಾ ಸಿಡುಕುತ್ತಿದ್ದ ಅವಳು, ಅವನಿಂದಾಗಿ ಎಲ್ಲರೊಂದಿಗೆ ಬೆರೆತು, ಸಹನಾಮೂರ್ತಿಯಾದಳು. ಕೊನೆಕೊನೆಗೆ ಮಗುವಿನಂತಾಗಿಬಿಟ್ಟಳು. ಅವನ ನಿಸ್ವಾರ್ಥ ಮಮತೆಗೆ, ಕಲ್ಲಿನಂತಿದ್ದ ಅವಳ ಹೃದಯವೂ ಮೆತ್ತಗಾಗಿತ್ತು. ಪ್ರೀತಿಗೆ ಸೋತಿದ್ದಳು, ತಾಳ್ಮೆಗೆ ಕರಗಿದ್ದಳು. ಮೌನದಲ್ಲಿನ ಮಾತನ್ನು ಅರಿತಿದ್ದಳು. ಅವನೊಂದಿಗೆ ಕಲೆತು, ಕಲಿತಿದ್ದಳು. ಎಲ್ಲಿಂದಲೋ ಬಂತೊಂದು ಬಿರುಗಾಳಿ. ಎಲ್ಲವೂ ಬೇರ್ಪಟ್ಟವು. ಬಂಧಕಾಗಿ ಹೋರಾಡಿ, ಅಸ್ತಿತ್ವವನೇ ಕಳೆದುಕೊಂಡವು. ಆಯಸ್ಕಾಂತವೂ ಸೋತಿತ್ತು, ಆಕರ್ಷಿಸುವಲ್ಲಿ.! ಬಂದಿದ್ದ ಆ ಬಿರುಗಾಳಿ, ಮೇಲ್ಪದರದ ಕಲ್ಮಶವನ್ನೆಲ್ಲ ಹೊತ್ತೊಯ್ದು ತಿಳಿ ಮಣ್ಣನ್ನ ಬಿಟ್ಟಿತೋ ಅಥವಾ ಕಶ್ಮಲದಂತೆ ಕಾಣಿಸುವ ರಕ್ಷಾ ಕವಚವನ್ನೇ ಹೊತ್ತೊಯ್ದಿತೋ.....