ಕಳೆದು ಹೋಗಿಹೆ

 ಹೀಗೇಕೆ ಕನಸು ಕಾಡಿದೆ..

ಮನಸಲ್ಲಿ ಮಧುರ ಭಾವ ಮೂಡಿದೆ..

ಮೌನದಲ್ಲೂ ಪಿಸುಮಾತು ಕೇಳಿದೆ..

ಕಹಿಯಲ್ಲೂ ಸಿಹಿ ರುಚಿಯ ತಿಳಿಸಿದೆ..

ನನಗೇನೋ....ಏನೋ....ಆಗಿದೆ... 




ಭಾವನೆಗಳ ಪಯಣ ಸಾಗಿದೆ..

ನಿಲ್ಲೆಂದರೂ ನನ್ನ ಮಾತು ಕೇಳದೆ

ದಿಕ್ಕು-ದಾರಿ-ಗುರಿಯನ್ನು ತಿಳಿಯದೆ

ಕಷ್ಟ ಸುಖದ ಪರಿವೆ ಇಲ್ಲದೆ

ನನ್ನಲ್ಲೇ ನಾನು ಕಳೆದು ಹೋಗಿಹೆ...

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..