ಮನೋವೃಷ್ಟಿ..
ಮನೋದಧಿಯಲಿ ಪುಟ್ಟಿ ಆಗಮಿಪ ಮಾರುತವು
ಹೊತ್ತೊಯ್ದು ತಂದಿತು ಮುಂಗಾರನು
ಇಂಚರದ ಗುಂಗಿನಲಿ ಭಾವಗಳ ಸಿಂಚನವು
ಪುಟಿಪುಟಿದು ಏಳುತ ಆರ್ಭಟಿಸಿ ನಿಂದು
ಮಿಂಚಿನಂಚಿನಲಿ ಕೆಕ್ಕರಿಸಿ ಕೆಣಕುತಲಿ
ಅಪಹಾಸ್ಯದ ಭ್ರಾಂತಿಯೊಳ್ ಗರ್ಜಿಸುತಲಿ
ಘರ್ಷಣೆಗೊಂಡು ಗತಿ ವಿಸ್ತರಗೊಂಡು
ದುಮ್ಮಾನ ದುಮುಕಿತು ಹನಿಗೂಡಿಕೊಂಡು;
ಜೀವನದ ಆಧಾರ ಭಾವಕುಪಹಾರ,
ಸರ್ವಸಂಪದಕೆ ಮನೋವೃಷ್ಟಿಯಿಂದುಪಕಾರ..
👏👏
ಪ್ರತ್ಯುತ್ತರಅಳಿಸಿ🙏
ಅಳಿಸಿTumba
ಪ್ರತ್ಯುತ್ತರಅಳಿಸಿI
ಪ್ರತ್ಯುತ್ತರಅಳಿಸಿ