ಕಂಬ್ಳಿಹುಳದ ಪುರಾಣ
ಕಾಲ್ಪನಿಕ ಅಲ್ಲ.. ' ಅನುಭವ ಕಥನ '.. ಕಂಬ್ಳಿಹುಳದ್ಬಗ್ಗೆ ಗೊತ್ತಿರೋರ್ಗೆ ಮಾತ್ರ...! ನಾನು ಕುಂದಾಪುರದಿಂದ ಹೊರ್ಟು, ಕೋಟದಲ್ಲಿ ಬಸ್ ಇಂದ ಇಳ್ದೆ. ನಾನು, ಅಮ್ಮ, ಚಿಕ್ಕಮ್ಮ, ಅತ್ತೆ ಎಲ್ಲ ಒಟ್ಟಾಗಿ ಫಂಕ್ಷನ್ಗೆ ಹೋಗ್ಬೇಕಾಗಿರೋದ್ರಿಂದ ನಾನು ಕೋಟ ಬಸ್ ಸ್ಟ್ಯಾಂಡ್ ಅಲ್ಲಿ ಕಾಯ್ಬೇಕಾಯ್ತು. ತುಂಬಾ ಬಿಸ್ಲು ಇರೋದ್ರಿಂದ ಬಸ್ ಸ್ಟ್ಯಾಂಡ್ ಅಲ್ಲಿರೋ ಬೆಂಚ್ ಮೇಲೆ ಕೂತ್ಕೊಂಡೆ. ಕೂತ್ಕೊಂಡ್ ಕೂಡ್ಲೇ ಅಲ್ಲೇ ನಿಂತಿರೋ ಒಬ್ರು "ಪುಟ್ಟಿ, ಅಲ್ಲಿ ಕೂತ್ಕೋಬೇಡ, ಕಂಬ್ಳಿ ಹುಳ ಇದೆ" ಅಂತ ಹೇಳಿ ಹೋದ್ರು. 'ಓಹ್! ಹೌದಾ' ಅಂತ ಹೇಳಿ, ಇಲ್ಲೇ ಎಲ್ಲೋ ಇದ್ಯೇನೋ ಅನ್ಕೊಂಡು, ನೋಡ್ಲಿಕ್ಕೂ ಹೋಗ್ದೆ, ಅಲ್ಲಿಂದ ಎದ್ದು ಬಂದು ನಿತ್ಕೊಂಡೆ. ಅಷ್ಟ್ರಲ್ಲೇ ಅಲ್ಲೇ ಇರೋ ಗೂಡಾ ಅಂಗ್ಡಿಯೋರು, "ಪುಟ್ಟ, ಪ್ಯಾಂಟ್ ಮೇಲೆ ಕಂಬ್ಳಿ ಹುಳ ಇದೆ ನೋಡು" ಅಂದ್ರು. ಅವ್ರು ಹೇಳಿದ್ದೇ ತಡ, ಎದ್ನೋ ಬಿದ್ನೋ ಅಂತ ಪ್ಯಾಂಟ್ ಕೊಡ್ಕೋಕೆ ಸ್ಟಾರ್ಟ್ ಮಾಡಿದೆ. ಅಂತೂ ಕಂಬ್ಳಿಹುಳ ಕೆಳಗ್ ಬಿತ್ತು. ಈ ರಗ್ಳೆ ಬೇಡ ಅಂತ ಅಲ್ಲಿಂದಾಚೆ ಬಂದು ಬಿಸ್ಲಲ್ಲಿ ನಿಂತ್ಕೊಂಡೆ. ಬಸ್ ಸ್ಟ್ಯಾಂಡ್ ನೋಡ್ತೀನಿ, ಪುಟ್ ಪುಟ್ಟ ಕಂಬ್ಳಿಹುಳಗಳು. 1-2 ಅಲ್ಲಾ ರೀ.. ಬಸ್ ಸ್ಟ್ಯಾಂಡ್ ತುಂಬಾ! ಚಿಕ್ದಾಗಿ, ಬಿಳಿಯಾಗಿ ಇರೋದ್ರಿಂದ ಕೂಡ್ಲೇ ಕಣ್ಣಿಗೆ ಕಾಣ್ಸೋದು ಇಲ್ಲ! (ಬ್ಲ್ಯಾಕ್ ಕಲರ್ ಪ್ಯಾಂಟ್ ಹಾಕೊಂಡ್ ಬಂದಿದ್ದು ಸಾರ್ಥಕ ಆಯ್ತು ಅನ್ಸಿದ್ದು ಮಾತ್ರ ಸುಳ್ಳ...