ಮೊಬೈಲ್ ತಂದಿಟ್ಟ ಫಜೀತಿ
ನಮ್ಮ ದೈನಂದಿನ ಜೀವನದಲ್ಲಿ ಆಗುವ ಅದೆಷ್ಟೋ ಘಟನೆಗಳು ಅಥವಾ ಸಂದರ್ಭಗಳು ಕೆಲವೊಮ್ಮೆ ಚಿಕ್ಕದೆನಿಸಿದರೂ ಅದರ ಪರಿಣಾಮ ಮಾತ್ರ ದೊಡ್ಡದಾಗಿರತ್ತೆ. ಇತ್ತೀಚೆಗೆ ಮೊಬೈಲ್ ನಮ್ಮ ಜೀವನದ ಅವಿಭಾಜ್ಯ ಅಂಗ ಆಗಿದೆ. ಈ ಲಾಕ್ಡೌನ್ ನಂತರವಂತೂ ಆಟ, ಪಾಠ, ಹೀಗೆ ಎಲ್ಲಾ ಕಾರ್ಯಕ್ಕೂ ಮೊಬೈಲ್ ಬೇಕು. ಮೊಬೈಲ್ ಎಂದ ತಕ್ಷಣ ನೆನಪಾಯ್ತು. ಬಿಟ್ಟೆನೆಂದರೂ ಬಿಡದೀ ಮಾಯೆ ಲೋಕದಲ್ಲಿದೆ ಈ ಮೊಬೈಲ್ನ ಮಾಯೆ ಇದರಿಂದ ಬರುವವು ಕ್ಯಾನ್ಸರ್ನಂತಹ ರೋಗಗಳು ಆದರೂ ಏಕೆ ಮೊಬೈಲ್ನ ಅತಿಯಾದ ಬಯಕೆ? ಸಂದೇಶ ಕಳಿಸಲು ಸಮಯವೊಂದಿಷ್ಟು ಅದರೊಂದಿಗೆ ಹಾಳು ನಮ್ಮ ಆರೋಗ್ಯವಿಷ್ಟು ಅದಕ್ಕೆ ಖರ್ಚು ಹಣವೊಂದಿಷ್ಟು ಆದರೂ ಬೇಸರವಿಲ್ಲ ಇಷ್ಟಿಷ್ಟು..! ಮೊಬೈಲ್ ಬೇಕು ಅನೇಕ ಲಾಭಗಳಿಗೆ ತಲೆಬಾಗಬೇಡಿ ಅದರ ಕೆಡುಕುಗಳಿಗೆ ಮಿತಿಯೆಂಬುದಿರಲಿ ಉಪಯೋಗಕ್ಕೆ ಮಿತಿ ಇರದಿರೆ ಜೀವಕ್ಕೆ ಕುತ್ತೇ!! ಮೊಬೈಲ್ ಬಳಕೆಯ ತರಂಗಗಳಿಗೆ ಪ್ರಾಣವನಿತ್ತವು ಅನೇಕ ಜೀವಿಗಳು ಮೊಬೈಲನ್ನು ನಿಯಂತ್ರಿಸಿ, ಜೀವಿಗಳನ್ನುಳಿಸಿ ಇದೇ ನನ್ನ ಘೋಷಣೆ, ಪ್ರಾರ್ಥನೆ..! ಇದನ್ನು ನಾನೇ ೬-೭ ವರ್ಷಗಳ ಹಿಂದೆ ಬರೆದಿದ್ದು. ಇತ್ತೀಚೆಗೆ ಇದನ್ನ ಓದಿದಾಗೆಲ್ಲಾ ನಮಗಾಗಿಯೇ ಬರೆದಿಟ್ಟಿರುವೆನೇನೋ ಅನ್ನಿಸುತ್ತೆ. ಅಷ್ಟರ ಮಟ್ಟಿಗೆ ಮೊಬೈಲನ್ನು ನಾವು ಅವಲಂಬಿಸಿದ್ದೇವೆ. ಘಟನೆ, ಸಂದರ್ಭ ಅಂತೆಲ್ಲಾ ಹೇಳಿ, ಈಗ ಮೊಬೈಲ್ ಬಗ್ಗೆ ಹೇಳ್ತಿದಾರಲ್ಲಾ, ಅಂತ ಅಂದ್ಕೊಳ್ಬೇಡಿ. ಇದೆಲ್ಲಾ ಯಾಕೆ ಹ...