ಪೋಸ್ಟ್‌ಗಳು

ಡಿಸೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮನದರಸಿ

ಇಮೇಜ್
    ನನ್ನೊಲವ ಹಾದಿಯಲಿ ಬೆಳೆದ ಮೊಗ್ಗು ನೀನು। ನನ್ನೊಡತಿಯಾಗಿ ಅರಳಿದ ಸುಮವಾದೆ ನೀನು॥ ಬೆಂಗಾಡಾದ ಭುವಿಗೆ ಕಾರಂಜಿಯಂತೆ ಭಾವ ಜಲದಿ ಒಸರು ಹೊಮ್ಮಿಸಿ ಬರಡು ಮನದಲೂ ಬೀಜ ಬಿತ್ತಿ ಮೊಳಕೆಯೊಡೆದ ಫಲ ನೀನು॥ ಕಾರ್ಮೋಡದ ಬಾನಿಗೆ ಗಾಳಿಯಂತೆ ಆಗಮಿಸಿ, ಕತ್ತಲನೆಲ್ಲ ಸರಿಸಿ ರವಿಯ ಮೂಡಿಸಿ ರಂಗನು ಬಿತ್ತಿದ ಕಾಮನಬಿಲ್ಲು ನೀನು॥ ಬೆಂದಿದ್ದ ಜೀವಕೆ ಮಳೆಯಂತೆ ಮನದಿ ಹಸಿರು ಸೃಷ್ಟಿಸಿ ಆತ್ಮವನು ತಂಪುಗೊಳಿಸಿದ ಜೊತೆಗಾರ್ತಿ ನೀನು॥ ಕಾರ್ಗತ್ತಲ ದಿನದಿ ಚಂದ್ರನಂತೆ ಮುಖದಿ ಕಾಂತಿ ಹೊಮ್ಮಿಸಿ ಬಾಳಿನಲಿ ಭರವಸೆ ಮೂಡಿಸಿದ ಬೆಳದಿಂಗಳು ನೀನು॥ ಒಂಟಿಯಾದ ನನಗೆ ಸಖಿಯಂತೆ ಮನದಿ ಚಿತ್ತಾರ ಬಿಡಿಸಿ ಬದುಕಿನ ಸಂಗಾತಿಯಾದ ಮನದರಸಿ ನೀನು॥

ಪ್ರಾಚೀನ ಭಾರತದಲ್ಲಿ ವಿಜ್ಞಾನ

 ವಿಜ್ಞಾನವು ಪ್ರಾಚೀನ ಕಾಲದಿಂದಲೂ ಭಾರತದಲ್ಲಿತ್ತು. ಆದರೆ ನಮ್ಮ ಪೂರ್ವಜರ ಮುಖ್ಯ ಗುರಿಯಾಗಿದ್ದು ಆಧ್ಯಾತ್ಮಿಕತೆ. ಅವರು ಸತ್ಯತೆ ಮತ್ತು ಮಿಥ್ಯತೆಯ ಅಂತರವನ್ನು, ಆಧ್ಯಾತ್ಮಿಕತೆಯನ್ನು ಹುಡುಕಿ ಹೊರಟವರು. ಇವುಗಳ ಹುಡುಕಾಟದಲ್ಲಿ ಅದೆಷ್ಟೋ ವೈಜ್ಞಾನಿಕ ಅಂಶಗಳನ್ನು, ಸಾಧನಗಳನ್ನು, ಅವುಗಳ ವಿಶೇಷತೆಯನ್ನು ಕಂಡುಕೊಂಡರು. ತಮಗನಿಸಿದ್ದನ್ನು, ತಮ್ಮ ಶೋಧನೆಗಳನ್ನು ದಾಖಲಿಸಿದರು ಅಷ್ಟೇ! ಆದರೆ ಎಂದೂ ಅವುಗಳನ್ನು ಪ್ರಚಾರ ಮಾಡಲಿಲ್ಲ. ಅಥವಾ ಅಂದಿನ ಭಾರತೀಯರು ಅವುಗಳನ್ನು ಒಪ್ಪಿರಲಿಲ್ಲವೇನೋ!  ಯಾವಾಗ ಬ್ರಿಟಿಷರು ಭಾರತದ ಮೇಲೆ ಆಕ್ರಮಣ ಮಾಡಿದರೋ, ಭಾರತೀಯರ ಶೋಧನೆಗಳನ್ನೆಲ್ಲಾ ಕದ್ದು, ತಮ್ಮ ಹೆಸರಿನಲ್ಲಿ ಸಂಶೋಧನೆಯ ಬಿರುದನ್ನು ದಾಖಲಿಸಿಕೊಂಡರು. ವಿಜ್ಞಾನದ ವಿವಿಧ ಶಾಖೆಗಳಾದ ಜೀವಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ, ಖಗೋಲಶಾಸ್ತ್ರ, ಗಣಿತ, ತಂತ್ರಜ್ಞಾನ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಪ್ರಾಚೀನ ಭಾರತೀಯರ ಕೊಡುಗೆ ಅಪಾರ. ಇಂದು ನಾವು ಪರಕೀಯರ ಹೆಸರಿನಲ್ಲಿರುವ ಭಾರತೀಯರ ಸಾಧನೆಗಳನ್ನು ಕಾಣುತ್ತೇವೆ. ಅವುಗಳಲ್ಲಿ ಕೆಲವು: ಭಾರದ್ವಾಜ ಮುನಿಗಳು ವೈಮಾನಿಕ ತಂತ್ರಜ್ಞಾನದ ಕುರಿತು ತಮ್ಮ ಕೃತಿಯಲ್ಲಿ ದಾಖಲಿಸಿದ್ದರು. 1895ರಲ್ಲಿ ಶಿವಕರ್ ಬಾಪೂಜಿ ಎನ್ನುವವರು ಮುಂಬೈ ಕಡಲತೀರದಲ್ಲಿ ವಿಮಾನವನ್ನೂ ಹಾರಿಸಿದ್ದರು. 8 ವರ್ಷಗಳ ನಂತರ, ಅಂದರೆ 1903ರಲ್ಲಿ ರೈಟ್ ಸಹೋದರರು ಮೊದಲ ವಿಮಾನ ಹಾರಿಸಿದ್ದು! ದಾಖಲೆ ಉಳಿದದ್ದು ರೈಟ್ ಸಹೋದರರ ಹೆಸರ...

ಇಂದಿನ ಶಿಕ್ಷಣ ವ್ಯವಸ್ಥೆ ನಮ್ಮ ವಾಸ್ತವಿಕ ಜೀವನಕ್ಕೆ ಪೂರಕವೇ?

ಇಂದಿನ ಶಿಕ್ಷಣ ವ್ಯವಸ್ಥೆ ನಮ್ಮ ವಾಸ್ತವಿಕ ಜೀವನಕ್ಕೆ ಪೂರಕವೇ?              " ನಹಿ ಜ್ಞಾನೇನ ಸದೃಶಂ " ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಅಂತೆಯೇ, ಜ್ಞಾನವುಳ್ಳವನೊಡಲು ಭಾನುವಿನ ತೆರನಹುದು ಜ್ಞಾನವಿಲ್ಲದನ ಬರಿಕಾಯ । ಹಾಳೂರ ಸ್ಥಾನದಂತಕ್ಕು ಸರ್ವಜ್ಞ ॥ ಎನ್ನುವಂತೆ, ಈ ಜ್ಞಾನ ದೈನಂದಿನ ಬದುಕಿನಲ್ಲಿ ದೊರೆಯುತ್ತದಾದರೂ ಒಂದು ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಅತ್ಯಗತ್ಯ. ಈ ನಿಟ್ಟಿನಲ್ಲಿ ಆಯಾಯ ಕಾಲದ ಶಿಕ್ಷಣ ಪದ್ಧತಿಗಳನ್ನು ಮೆಲುಕು ಹಾಕಿದಾಗ ಪ್ರಾಚೀನ ಕಾಲದಲ್ಲಿ ಗುರುಕುಲ ಶಿಕ್ಷಣ ಪದ್ಧತಿ ರೂಢಿಯಲ್ಲಿತ್ತು. ಗುರುಕುಲದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಭಿಕ್ಷಾಟನೆಯ ಮೂಲಕ ಉದರ ಪೋಷಣೆ ಮಾಡಿಕೊಳ್ಳುತ್ತಾ ಶಿಕ್ಷಣ ಪಡೆಯುತ್ತಿದ್ದರು. ಬ್ರಿಟಿಷರು ಭಾರತಕ್ಕೆ ಬಂದ ನಂತರ ಆಂಗ್ಲಶಿಕ್ಷಣ ಪದ್ಧತಿ ರೂಢಿಗೆ ಬಂದಿತು. ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಗಾಂಧೀಜಿಯವರು 'ಮೂಲಶಿಕ್ಷಣ ಪದ್ಧತಿ' ಅಂದರೆ, ಸಾಮಾನ್ಯ ಶಿಕ್ಷಣದ ಜೊತೆ ನೂಲುವುದು, ನೇಯುವುದು, ಕುಂಬಾರಿಕೆ, ಬಡಗಿ ಕೆಲಸ ಮುಂತಾದ ಜೀವನಕ್ಕೆ ಪೂರಕವಾಗೋ ವೃತ್ತಿಪರ ಶಿಕ್ಷಣವನ್ನು ಜಾರಿಗೆ ತಂದರು.            " ನಾಸ್ತಿ ವಿದ್ಯಾ ಸಮಂ ಚಕ್ಷುರ್ನಾಸ್ತಿ " ಎನ್ನುವಂತೆ, ವಿದ್ಯೆಯು ಒಂದು ಮಗುವನ್ನು ಸಮರ್ಥ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಆದರೆ ಇಂದು ಶಿಕ್ಷಣ, ಶಿಕ್ಷಣವ...

ಯೋಧ

ದೇಶ ಕಾಯೋ ಯೋಧ ನಮ್ಮ ಹೆಮ್ಮೆಯ ಧೀರ ಪ್ರಾಣ ತ್ಯಾಗಕೂ ಸಿದ್ಧ ಈ ನಮ್ಮ ಶೂರ... ಮಳೆ ಬಿಸಿಲಿಗೆ ಮೈಯೊಡ್ಡಿ  ಹಿಮದಾರ್ಭಟ ಎದುರಿಸಿ ಸುಖನಿದ್ರೆಗೆ ವಿರಾಮವಿತ್ತ ಭಾರತಾಂಬೆಯ ವೀರ ಪುತ್ರ.. ಮನೆವಾರ್ತೆಯು ಮನದಲ್ಲೇ.. ಮನೆಯಾಕೆಯ ನೆನಪಲ್ಲೇ.. ವರುಷಕೊಮ್ಮೆ ಮನೆಗೆ ಬರೋ ಹೆತ್ತವರ ಮುದ್ದಿನ ಮಗ.. ಉಗ್ರರೊಡನೆ ಹೋರಾಡಿ, ನುಸುಳಿ ಬಂದವರ ಹಿಮ್ಮೆಟ್ಟಿ ಮೈಯೆಲ್ಲಾ ಕಣ್ಣಾಗಿಸಿ ಕಾಯೋ, ತಾಯ್ನಾಡಿನ ಹೆಮ್ಮೆಯ ಸುತ.. ನೈಸರ್ಗಿಕ ವಿಪತ್ತಿನಲೂ ರಕ್ಷಿಸುವ ಹೊಣೆ ಹೊತ್ತು ಅದೆಷ್ಟೋ ಜೀವ ಉಳಿಸೋ ಪ್ರಾಣರಕ್ಷಕನೀ ಸೈನಿಕ.. ಯುದ್ಧದಲೂ ಧೈರ್ಯಗೆಡದೆ ಕೊನೆವರೆಗೂ ಹೋರಾಡಿ ವೀರ ಮರಣ ಹೊಂದಿದ ದೇಶದ ಧೀರ ಯೋಧ.. ಪತಿಯ ದೇಹ ಎದುರಿನಲ್ಲಿ.., ಕಂದಮ್ಮನು ಗರ್ಭದಲ್ಲಿ ದುಃಖವೋ....., ಹೆಮ್ಮೆಯೋ....,, ಪತ್ನಿಗೆ ಈತ ಆರಾಧ್ಯ ದೈವ.. ದೇಶದ ಧ್ವಜದೊಳಗೆ ದೇಹವು ಸುತ್ತಿರಲು.. ಗೌರವದಿ ವಿದಾಯಗೊಂಡ ತಾಯಿ ಭಾರತಿಯ ವೀರ ಪುತ್ರ..