ಯೋಧ
ದೇಶ ಕಾಯೋ ಯೋಧ
ನಮ್ಮ ಹೆಮ್ಮೆಯ ಧೀರ
ಪ್ರಾಣ ತ್ಯಾಗಕೂ ಸಿದ್ಧ
ಈ ನಮ್ಮ ಶೂರ...
ಮಳೆ ಬಿಸಿಲಿಗೆ ಮೈಯೊಡ್ಡಿ
ಹಿಮದಾರ್ಭಟ ಎದುರಿಸಿ
ಸುಖನಿದ್ರೆಗೆ ವಿರಾಮವಿತ್ತ
ಭಾರತಾಂಬೆಯ ವೀರ ಪುತ್ರ..
ಮನೆವಾರ್ತೆಯು ಮನದಲ್ಲೇ..
ಮನೆಯಾಕೆಯ ನೆನಪಲ್ಲೇ..
ವರುಷಕೊಮ್ಮೆ ಮನೆಗೆ ಬರೋ
ಹೆತ್ತವರ ಮುದ್ದಿನ ಮಗ..
ಉಗ್ರರೊಡನೆ ಹೋರಾಡಿ,
ನುಸುಳಿ ಬಂದವರ ಹಿಮ್ಮೆಟ್ಟಿ
ಮೈಯೆಲ್ಲಾ ಕಣ್ಣಾಗಿಸಿ ಕಾಯೋ,
ತಾಯ್ನಾಡಿನ ಹೆಮ್ಮೆಯ ಸುತ..
ನೈಸರ್ಗಿಕ ವಿಪತ್ತಿನಲೂ
ರಕ್ಷಿಸುವ ಹೊಣೆ ಹೊತ್ತು
ಅದೆಷ್ಟೋ ಜೀವ ಉಳಿಸೋ
ಪ್ರಾಣರಕ್ಷಕನೀ ಸೈನಿಕ..
ಯುದ್ಧದಲೂ ಧೈರ್ಯಗೆಡದೆ
ಕೊನೆವರೆಗೂ ಹೋರಾಡಿ
ವೀರ ಮರಣ ಹೊಂದಿದ
ದೇಶದ ಧೀರ ಯೋಧ..
ಪತಿಯ ದೇಹ ಎದುರಿನಲ್ಲಿ..,
ಕಂದಮ್ಮನು ಗರ್ಭದಲ್ಲಿ
ದುಃಖವೋ....., ಹೆಮ್ಮೆಯೋ....,,
ಪತ್ನಿಗೆ ಈತ ಆರಾಧ್ಯ ದೈವ..
ದೇಶದ ಧ್ವಜದೊಳಗೆ
ದೇಹವು ಸುತ್ತಿರಲು..
ಗೌರವದಿ ವಿದಾಯಗೊಂಡ
ತಾಯಿ ಭಾರತಿಯ ವೀರ ಪುತ್ರ..
ಪತಿಯ ದೇಹ ಎದುರಿನಲ್ಲಿ..,
ಪ್ರತ್ಯುತ್ತರಅಳಿಸಿಕಂದಮ್ಮನು ಗರ್ಭದಲ್ಲಿ
ದುಃಖವೋ....., ಹೆಮ್ಮೆಯೋ....,,
ಪತ್ನಿಗೆ ಈತ ಆರಾಧ್ಯ ದೈವ..
ಮನಮುಟ್ಟಿದ ಸಾಲುಗಳು... ವೀರಮರಣ ಹೊಂದಿದ ಸೈನಿಕನ ಪತ್ನಿಯ ಚಿತ್ರಣ ಕಣ್ಣ ಮುಂದೆ ಹಾದು ಹೋದಂತಾಯಿತು
ವಂದನೆಗಳು 🙏..
ಅಳಿಸಿ🙏
ಪ್ರತ್ಯುತ್ತರಅಳಿಸಿ😊
ಅಳಿಸಿ🙏🙏ಸೈನಿಕ ನನ್ನಾವ ❤
ಪ್ರತ್ಯುತ್ತರಅಳಿಸಿ😇
ಅಳಿಸಿ