ನನ್ನೊಲವ ಹಾದಿಯಲಿ ಬೆಳೆದ ಮೊಗ್ಗು ನೀನು।
ನನ್ನೊಡತಿಯಾಗಿ ಅರಳಿದ ಸುಮವಾದೆ ನೀನು॥
ಬೆಂಗಾಡಾದ ಭುವಿಗೆ ಕಾರಂಜಿಯಂತೆ
ಭಾವ ಜಲದಿ ಒಸರು ಹೊಮ್ಮಿಸಿ
ಬರಡು ಮನದಲೂ ಬೀಜ ಬಿತ್ತಿ
ಮೊಳಕೆಯೊಡೆದ ಫಲ ನೀನು॥
ಕಾರ್ಮೋಡದ ಬಾನಿಗೆ ಗಾಳಿಯಂತೆ
ಆಗಮಿಸಿ, ಕತ್ತಲನೆಲ್ಲ ಸರಿಸಿ
ರವಿಯ ಮೂಡಿಸಿ ರಂಗನು ಬಿತ್ತಿದ
ಕಾಮನಬಿಲ್ಲು ನೀನು॥
ಬೆಂದಿದ್ದ ಜೀವಕೆ ಮಳೆಯಂತೆ
ಮನದಿ ಹಸಿರು ಸೃಷ್ಟಿಸಿ
ಆತ್ಮವನು ತಂಪುಗೊಳಿಸಿದ
ಜೊತೆಗಾರ್ತಿ ನೀನು॥
ಕಾರ್ಗತ್ತಲ ದಿನದಿ ಚಂದ್ರನಂತೆ
ಮುಖದಿ ಕಾಂತಿ ಹೊಮ್ಮಿಸಿ
ಬಾಳಿನಲಿ ಭರವಸೆ ಮೂಡಿಸಿದ
ಬೆಳದಿಂಗಳು ನೀನು॥
ಒಂಟಿಯಾದ ನನಗೆ ಸಖಿಯಂತೆ
ಮನದಿ ಚಿತ್ತಾರ ಬಿಡಿಸಿ
ಬದುಕಿನ ಸಂಗಾತಿಯಾದ
ಮನದರಸಿ ನೀನು॥
|
ಅಂದದ ಕವನ
ಪ್ರತ್ಯುತ್ತರಅಳಿಸಿಧನ್ಯವಾದಗಳು 😊🙏
ಅಳಿಸಿಮೊಗ್ಗು ಅರಳಿ ಬೀರಿದ ಸುವಾಸನೆ ಕವಿತೆಯಲ್ಲಿದೆ. ಸುಪರ್
ಪ್ರತ್ಯುತ್ತರಅಳಿಸಿಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ😊
ಅಳಿಸಿ