ಬಾಲ್ಯದ ನೆನಪು..
ಬಾಲ್ಯಜೀವನ ಅತಿಸುಂದರ. ಬಾಲ್ಯಜೀವನದ ನೆನಪು ಅತಿ ಮಧುರ. ಅಮ್ಮನು ನೀಡುವ ಕೈತುತ್ತು, ಅಜ್ಜಿಯು ಹೇಳುವ ನೀತಿಕಥೆ, ಅಪ್ಪನು ತೋರುವ ಸಾಗರದಂತಹ ಮಮತೆ, ಕಾಳಜಿ, ಅಜ್ಜನ ಆಕಾಶದೆತ್ತರದ ಪ್ರೀತಿ, ನಮ್ಮ ನಗುವಿನೊಂದಿಗೆ ಮನೆಯವರ ನಗು, ಇವುಗಳೊಂದಿಗೆ ಕಳೆದ ಬಾಲ್ಯ ಅದೆಷ್ಟು ಚೆಂದ?! ಮಾನವನ ಬದುಕಿನ ಅತ್ಯಮೂಲ್ಯ ಕಾಲಘಟ್ಟವೇ ಬಾಲ್ಯಜೀವನ. ಬಾಲ್ಯದಲ್ಲಿ ಅತ್ತು ಅಳಿಸಿದ, ನಕ್ಕು ನಗಿಸಿದ ಪ್ರತಿಯೊಂದು ಕ್ಷಣವೂ ನೆನಪಿನ ಬುತ್ತಿಯ ಪ್ರಮುಖ ಭಾಗವಾಗುತ್ತದೆ. ಬಾಲ್ಯದಲ್ಲಿ ಅಳುವಿನ ಹಿಂದೆಯೂ ನಗುವಿದ್ದರೆ, ನಲಿವಿದ್ದರೆ , ಬೆಳೆಯುತ್ತಾ ಹೋದಂತೆ ಅದು ಬದಲಾಗಿ ನಗುವಿನ ಹಿಂದೆ ನೋವಡಗುತ್ತದೆ. ಒಂದು ಮಾತಿದೆ 'ಬಾಲ್ಯ ಸುಂದರವಾದರೆ, ಅದರ ನೆನಪುಗಳನ್ನು ಮೆಲುಕು ಹಾಕುತ್ತಾ ಕಳೆಯುವ ಮುಪ್ಪು ಸುಂದರವಾಗುತ್ತದೆ' ಎಂದು. ಖಂಡಿತವಾಗಿಯೂ! ಮಗುವನ್ನು ನೋಡಿ ನಗದವರಾರು? ಬಾಲ್ಯವನ್ನೆಣಿಸಿ, ಮತ್ತೆ ಬಾಲ್ಯಕ್ಕೆ ಮರಳಬೇಕು ಎಂದು ಬಯಸದ ಮಾನವರಾರು? ಬಾಲ್ಯದ ನೆನಪನ್ನು ನೆನಪಿಸಿಕೊಂಡು ನಗದವರಾರು? ಮತ್ತೆ ಆ ಕ್ಷಣ ಬಾರದೆಂದು ತಿಳಿದು ಬೇಸರಿಸದೇ ಇರುವವರಾರು? ಬಾಲ್ಯವೇ ಹಾಗೆ..., ಸ್ಮೃತಿಯೇ ಹಾಗೆ.....! ಸುಂದರವಾದ ಪುಷ್ಪಗಳಲ್ಲಿ ಒಂದನ್ನು ಆರಿಸಬೇಕೆಂದರೆ, ನಾವು ಅದರಲ್ಲಿ ಅತಿಸುಂದರ ಪುಷ್ಪವನ್ನರಸಿ ಆರಿಸುತ್ತೇವೆ. ಹಾಗೆಯೇ ಬಾಲ್ಯದ ಸ್ಮೃತಿಗಳ ಬುತ್ತಿ...