ಪೋಸ್ಟ್‌ಗಳು

ಜೂನ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಣ್ಣ ಕಥೆ-೪

ಇಮೇಜ್
  ಯಾರೊಂದಿಗೂ ಬೆರೆಯದ, ಸದಾ ಸಿಡುಕುತ್ತಿದ್ದ ಅವಳು, ಅವನಿಂದಾಗಿ ಎಲ್ಲರೊಂದಿಗೆ ಬೆರೆತು, ಸಹನಾಮೂರ್ತಿಯಾದಳು. ಕೊನೆಕೊನೆಗೆ ಮಗುವಿನಂತಾಗಿಬಿಟ್ಟಳು. ಅವನ ನಿಸ್ವಾರ್ಥ ಮಮತೆಗೆ, ಕಲ್ಲಿನಂತಿದ್ದ ಅವಳ ಹೃದಯವೂ ಮೆತ್ತಗಾಗಿತ್ತು. ಪ್ರೀತಿಗೆ ಸೋತಿದ್ದಳು, ತಾಳ್ಮೆಗೆ ಕರಗಿದ್ದಳು. ಮೌನದಲ್ಲಿನ ಮಾತನ್ನು ಅರಿತಿದ್ದಳು. ಅವನೊಂದಿಗೆ ಕಲೆತು, ಕಲಿತಿದ್ದಳು. ಎಲ್ಲಿಂದಲೋ ಬಂತೊಂದು ಬಿರುಗಾಳಿ. ಎಲ್ಲವೂ ಬೇರ್ಪಟ್ಟವು. ಬಂಧಕಾಗಿ ಹೋರಾಡಿ, ಅಸ್ತಿತ್ವವನೇ ಕಳೆದುಕೊಂಡವು. ಆಯಸ್ಕಾಂತವೂ ಸೋತಿತ್ತು, ಆಕರ್ಷಿಸುವಲ್ಲಿ.! ಬಂದಿದ್ದ ಆ ಬಿರುಗಾಳಿ, ಮೇಲ್ಪದರದ ಕಲ್ಮಶವನ್ನೆಲ್ಲ ಹೊತ್ತೊಯ್ದು ತಿಳಿ ಮಣ್ಣನ್ನ ಬಿಟ್ಟಿತೋ ಅಥವಾ ಕಶ್ಮಲದಂತೆ ಕಾಣಿಸುವ ರಕ್ಷಾ ಕವಚವನ್ನೇ ಹೊತ್ತೊಯ್ದಿತೋ.....

ಓ ಮನವೇ..

ಇಮೇಜ್
ನಿರೀಕ್ಷಾಪಥದಲಿ ಸೋತು ಸುಣ್ಣಾಗಿ ವೈರಾಗ್ಯದಿಂದ ಜೀಕುತಿರಲು.. ಮಿನುಗುವ ತಾರೆಗಳತ್ತ  ನೋಟ ಹರಿಯಿತು... ನನ್ನ ನೋಟ ತೆರಳಿತು... ಸುತ್ತಮುತ್ತ ಕಡುಗಪ್ಪು; ಇದ್ದಾಗಲೇ ತಾರೆ ಹೊಳಪು ಇನ್ನಷ್ಟು..! ನನ್ನ ದುಃಖಗಳೆಲ್ಲವೂ  ನಾ ಮಿನುಗಲು ನೆಪವಾಗಬಲ್ಲದೇ? ಪ್ರಶ್ನೆಯೇಕೆ ಓ ಮನವೇ.... ನಿನ್ನ ಮಿತಿ ಆಗಸವೇ ! ಉತ್ಥಾನಗೊಳ್ಳುತಿರು.. ಉತ್ತುಂಗವೇರುತಿರು... ಶೋಭಿಸುವೆ ನೀನು; ಆ ತಾರೆಗಳು ನಿಲುಕದಿಹುದೇ..?!

ಪಯಣ

ಇಮೇಜ್
ನನ್ನ ಪಯಣದಿ ಭರವಸೆಯ ಮೂಟೆಯಿತ್ತು... ಸಿಗುವ ಪ್ರೀತಿಯ ಕೂಡಿಡುವ ಕನಸಿತ್ತು.. ಸಾಗರದಲೆಗಳಂತೆ ಖುಷಿ ಚಿಮ್ಮುತ್ತಿತ್ತು.. ಹೊಸ ಪಯಣದ ಅತ್ಯುತ್ಸಾಹವಿತ್ತು.. ಲೆಕ್ಕವಿಡದಷ್ಟು ಪ್ರೀತಿ ಸಿಗುವಂತಿತ್ತು.. ಪ್ರೀತಿ ನನ್ನ ಕೂಗುವ ಭಾಸವಾಗುತ್ತಿತ್ತು.. ಬಾಚಿ ತಬ್ಬಿದೆ, ಕೈ ತುಂಬಾ ಹಿಡಿದೆ.. ನನ್ನ ಭರವಸೆಯ ಮೂಟೆ ತುಂಬಿದೆ.. ಅಯ್ಯೋ... ನನ್ನ ಮೂಟೆಯಲಿ ಪ್ರೀತಿ ಇರಲಿಲ್ಲ.. ಬರಿಯ ಮೋಸದ ಗಾಳಿಯಿತ್ತು.. ಪ್ರೀತಿ-ನಗುವಿನ ಮುಖವಾಡವಿತ್ತು.. ಅದರ ಹಿಂದೆ ಸುಳ್ಳಿನ ಜಾಲವಿತ್ತು.. ಇದು ನನ್ನ ಪಯಣದ ಕಥೆ.. ಸುಂದರ ರೂಪ-ಆಕರ್ಷಣೆ ಇಲ್ಲ.. ಇದು ನನ್ನ ಪಯಣದ ಕಥೆ.. ಅರಿಯಲಾರಿರಿ ನೀವು... ಚಿತ್ರಕೃಪೆ: ವೈಷ್ಣವಿ ಕೆ.