ಪೋಸ್ಟ್‌ಗಳು

ನವೆಂಬರ್, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸ್ವರ ಮಾಧುರ್ಯದ “ಚಂದ್ರಕಾಂತ ರಾವ್ ಮೂಡುಬೆಳ್ಳೆ”

ಇಮೇಜ್
  ಸ್ವರ ಮಾಧುರ್ಯದ “ಚಂದ್ರಕಾಂತ ರಾವ್ ಮೂಡುಬೆಳ್ಳೆ” ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನದ ಸಾಂಪ್ರದಾಯಿಕ ಶೈಲಿಯನ್ನು ಉಳಿಸಿಕೊಂಡು, ನಿರಂತರ ಅಧ್ಯಯನದೊಡನೆ ಅಭ್ಯಸಿಸುವ, ಮಿತ-ಮೃದು ಭಾಷಿ, ಸೌಮ್ಯ ಸ್ವಭಾವದ, ನನ್ನ ನೆಚ್ಚಿನ, ಅತ್ಯಂತ ಶಿಸ್ತಿನ ಭಾಗವತರಲ್ಲಿ ಒಬ್ಬರು ಚಂದ್ರಕಾಂತ ರಾವ್ ಮೂಡುಬೆಳ್ಳೆ. 11/06ರಲ್ಲಿ ವೆಂಕಟರಮಣ ರಾವ್ ಮತ್ತು ಮೋಹಿನಿ ವಿ.ರಾವ್ ದಂಪತಿಗಳ ಮಗನಾಗಿ ಜನಿಸಿದರು. ಚಿಕ್ಕವಯಸ್ಸಿನಲ್ಲೇ ಮೂಡಿದ ಯಕ್ಷಗಾನದ ಮೇಲಿನ ಆಸಕ್ತಿಯು ಹಿರಿದಾಗಿ 10-11ನೇ ತರಗತಿಯಲ್ಲಿರುವಾಗ ಪಾತ್ರವನ್ನು ಪೋಷಿಸಿದರು. ಬಿ.ಕಾಂ. ಪದವಿಯೊಂದಿಗೆ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಭಾಗವತಿಕೆ ತರಬೇತಿ ಪಡೆದರು. ಸಂಗೀತದ ಮೇಲಿನ ಅತಿಯಾದ ಒಲವು ಹಾಗೂ ವಿದ್ವಾನ್ ಗಣಪತಿ ಭಟ್ ಮತ್ತು ಧಾರೇಶ್ವರರ ಭಾಗವತಿಕೆಯಿಂದ ಪ್ರೇರಣೆ ಹೊಂದಿ, ಗೋರ್ಪಾಡಿ ವಿಠಲ ಪಾಟೀಲ, ನೀಲಾವರ ಲಕ್ಷ್ಮೀನಾರಾಯಣಯ್ಯ, ದೇವದಾಸ್ ರಾವ್ ಕೂಡ್ಲಿ, ಸತೀಶ್ ಕೆದ್ಲಾಯ ಇವರೆಲ್ಲರಿಂದ ಪಳಗಿ ತಮ್ಮ ಊರಿನಲ್ಲಿ ಮೊದಲ ಭಾಗವತಿಕೆ ಮಾಡಿದರು. ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ, ತಮ್ಮ 37-38ನೇ ವಯಸ್ಸಿನಲ್ಲಿ ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸುವ ಮೂಲಕ ತಮ್ಮ ಬದುಕಿನ ಹಾದಿಯನ್ನೇ ಬದಲಿಸಿದರು. ಇದು ಸಾಂಸಾರಿಕ ಜವಾಬ್ದಾರಿಗಳ ನೊಗವನ್ನು ಹೆಗಲಿಗೇರಿಸಿಕೊಂಡೇ, ತಮ್ಮಿಷ್ಟದ ಹವ್ಯಾಸವನ್ನು ನಂಬಿ ಇಟ್ಟ ದಿಟ್ಟ ಹೆಜ್ಜೆ. ಹಟ್ಟಿಯಂಗಡಿ & ಜಲ...