ಪೋಸ್ಟ್‌ಗಳು

ಮಾರ್ಚ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಿಯಾಂವ್ ಕತೆ

ಇಮೇಜ್
ಈ ಮನುಷ್ಯ ಎಂಬ ಪ್ರಾಣಿ ಮಾಡುವ ಅನಾಹುತ ಒಂದೋ ಎರಡೋ! ನಾವು ಹುಲಿ, ಚಿರತೆಗಳಂತೆ ಮೊದಲು ಕಾಡು ಪ್ರಾಣಿಗಳೇ. ಈ ಮಾನವ ಅವನ ಖುಷಿಗಾಗಿ , ಅವನಿಗೆ ಆಗುವ ಇಲಿಗಳ ಕಾಟದಿಂದ ಮುಕ್ತನಾಗಲು ನಮ್ಮನ್ನು ಮನೆಯಲ್ಲಿ ಸಾಕಲು ಪ್ರಾರಂಭಿಸಿದ. ನಿಮಗೆ ಗೊತ್ತಿರಬೇಕಲ್ಲ, ಹುಲಿಗೆ ವಿದ್ಯೆ ಕಲಿಸಿದ್ದು ನಮ್ಮ ಪೂರ್ವಜರೇ! ಎಲ್ಲವೂ ಹಳೆಯ ಕಥೆ ಬಿಡಿ.. ನಿಮಗೆ ನಾ ಯಾರೆಂದು ಗೊತ್ತಾಗಿರಬೇಕಲ್ಲ, ಹೌದು ನಿಮ್ಮ ಯೋಚನೆ ಸರಿಯೇ! ನಾನು ಮಿಯಾಂವ್ ಅಂದ್ರೆ ಬೆಕ್ಕು. ನಾನು ನಮ್ಮಮ್ಮನಿಗೆ ಒಬ್ಬನೇ ಮುದ್ದಿನ ಮಗ. ನಮ್ಮನ್ನು ಸಾಕಿದವರ ಅಲ್ಲ ಅಲ್ಲ, ನಮ್ಮ ಸೇವೆ ಮಾಡುವವರ ಮನೆಯಲ್ಲಿ ನನ್ನ ಹಾಗೆ ಇನ್ನೂ ಅನೇಕರಿದ್ದಾರೆ. ನನ್ನ ಅಮ್ಮ, ಅಜ್ಜಿ, ಚಿಕ್ಕಮ್ಮನ ಮಕ್ಕಳು, ಅಕ್ಕ ಹೀಗೆ.. ನಾನೇ ಕೊನೆಯವ, ಸ್ವಲ್ಪ ಮುದ್ದು ಜಾಸ್ತಿಯೇ. ನಮ್ಮನ್ನು ಸಾಕಿದವರು ಮೀನು-ಮಾಂಸ ತಿನ್ನುವವರಲ್ಲ. ಆದರೆ ನಮಗೆ ಅನ್ನ ಸೇರುವುದಿಲ್ಲ. ನಮಗಾಗಿ ಅದೆಲ್ಲಿಂದಲೋ ಒಣ ಆಹಾರ, ಬಿಸ್ಕೇಟ್ ಎಲ್ಲಾ ತರಿಸುತ್ತಾರೆ. ಅದನ್ನೆಲ್ಲ ತಿಂದು, ಹಾಲು ಕುಡಿದು ನನ್ನ ಕುಟುಂಬದವರು ಹಾಯಾಗಿ, ಖುಷಿಯಾಗಿ ಇರುತ್ತಾರೆ. ಆದರೆ ನಾನು ಹಾಗಲ್ಲ! ನನಗೆ ಪೂರ್ವಜರ ಬೇಟೆಯ ವಿಷಯ ಚೆನ್ನಾಗಿ ಗೊತ್ತು. ನಾನೂ ದೊಡ್ಡ ಬೇಟೆಗಾರನಾಗಬೇಕೆಂಬ ಆಸೆ ನನಗೆ! ಆ ಕಾಡಿನಲ್ಲಿರುವ ಹುಲಿ, ಚಿರತೆ, ಸಿಂಹಗಳನ್ನು ಮೀರಿಸುವ ಛಲ ನನಗೆ. ಆದರೆ ಈ ಮನುಷ್ಯರು..! ಎಲ್ಲಿ ಬಿಡುತ್ತಾರೆ., ಸ್ವಾರ್ಥಿಗಳವರು! ಅವರಿಗೆ ಮುದ್ದು ಮಾಡಲು ನಾವೂ...

ಲಕ್ಕಿ- ಮುದ್ದು ಬೆಕ್ಕು

ಇಮೇಜ್
  ಲಕ್ಕಿ- ಮುದ್ದು ಬೆಕ್ಕು ನಮ್ಮ ಮನೆಯಲ್ಲಿ ೫ ಬೆಕ್ಕುಗಳಿದ್ದವು. ಅದರಲ್ಲಿ ನಮ್ಮ ಚುಕ್ಕಿ ಹೊಟ್ಟೆ ಯಾವಾಗ ದೊಡ್ಡದಾಯ್ತೋ ಆಗಿಂದ, ಅವಳು ಹೋದಲ್ಲಿ, ಬಂದಲ್ಲಿ, ನಿಂತಲ್ಲಿ, ಕುಳಿತಲ್ಲಿ ನಾ ಹೇಳುತ್ತಿದ್ದದ್ದು ಒಂದೇ, "ಚುಕ್ಕಿ ಪ್ಲೀಸ್, ಒಂದೇ ಗಂಡು ಮರಿ ಹಾಕು" ಅಂತ. ಅದನ್ನು ಕೇಳಿ ಕೇಳಿ, ಅಸ್ತುದೇವತೆಗಳು ಅಸ್ತು ಅಂದಿದ್ದರೋ, ಅದೇನು ಕಾಕತಾಳೀಯವೋ, ನಮ್ಮ ಚುಕ್ಕಿ ಏಕೈಕ ಸುಪುತ್ರನನ್ನು ಹಡೆದಿದ್ದಳು. ಹುಟ್ಟಿದ ದಿನಾಂಕವೂ ವಿಶೇಷವಾಗಿಯೇ ಇತ್ತು. ಏಂಜೆಲ್ ನಂಬರ್ ಅಂತೀವಲ್ಲ, ಅದರಂತೆ ೪-೪-೨೦೨೪!! ಒಂದೇ ಮಗ ಹುಟ್ಟಿದ್ದಕ್ಕೋ, ಈ‌ ಏಂಜೆಲ್ ನಂಬರ್ ಕಾರಣಕ್ಕೋ , ಹುಡುಕಿ ಹುಡುಕಿ ಕೊನೆಗೆ "ಲಕ್ಕಿ" ಅಂತ ಹೆಸರಿಟ್ವಿ. ಅವನು ಪ್ರೀತಿ ಎಂಬ 'ಲಕ್'ಅನ್ನೇ ಹೊತ್ತು ತಂದಿದ್ದ. ನಮ್ಮ ಮನೆಯಲ್ಲಿ ನಾನು, ಅಕ್ಕ, ಅಮ್ಮ ಬೆಕ್ಕನ್ನು ಮನುಷ್ಯರ ಹಾಗೆ ಪಾಲಿಸಿದರೆ, ಅಪ್ಪ ಮಾತ್ರ ಬೆಕ್ಕನ್ನು ಬೆಕ್ಕಿನ ಹಾಗೇ ನೋಡುವವರು. ಮಾತುಕಥೆ ಏನಿದ್ದರೂ ಎಲ್ಲಾ ದೂರದಲ್ಲೇ! ಬೆಕ್ಕು ಮೈಮೇಲೆ ಕುಳಿತುಕೊಳ್ಳುವುದು/ಮಲಗುವುದು ಇದೆಲ್ಲಾ ಅವರಿಗೆ ಆಗದು. ಆದ್ದರಿಂದ ನಮ್ಮಲ್ಲಿರುವ ಬೆಕ್ಕುಗಳೂ ಅವರ ಬಳಿ ಹೋಗುವುದು ಕಡಿಮೆ. ಆದರೆ ಈ ಲಕ್ಕಿ, ಚಿಕ್ಕ ಮರಿಯಾಗಿದ್ದಾಗಲೇ ಅವರ ಮೈಮೇಲೆ ಹೋಗಿ ಕುಳಿತು ಇತಿಹಾಸವನ್ನೇ ಸೃಷ್ಟಿಸಿದ್ದ! ಅವನು ಮಾತ್ರ ನಮ್ಮ ಬಳಿ ಹೇಗೋ ಅಪ್ಪನ ಬಳಿಯೂ ಹಾಗೇ ವರ್ತಿಸುವುದು. ಅವನಿಗೆ ಆಹಾರ ಬೇಕೆಂದೊಡನೆ ಮನೆಯ ಯಜಮಾನನಾದರ...