ಪೋಸ್ಟ್‌ಗಳು

ಡಿಸೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ತಿರುವು(ಅಂತಿಮ ಭಾಗ)

ಇಮೇಜ್
  ತಿರುವು(ಅಂತಿಮ ಭಾಗ) ಕಥೆಯನ್ನು ಮುಂದುವರಿಸುತ್ತಾ.. . ಹಾಗೆಲ್ಲ ಕೈಚೆಲ್ಲಿ ಕುಳಿತುಕೊಳ್ಳುವ ಹುಡುಗಿ ನಾನಲ್ಲ. ಆದರೆ, ಒಮ್ಮೆಗೇ ಬದುಕು ಇಷ್ಟೊಂದು ಸವಾಲುಗಳನ್ನು ಒಡ್ಡಿದರೆ ಎಂತು! ಅದನ್ನು ಸ್ವೀಕರಿಸುವುದೇ ಕಷ್ಟ, ಇನ್ನು ಅದೆಲ್ಲವನ್ನೂ ಎದುರಿಸಿ ನಿಲ್ಲುವುದು ನನ್ನ ಪಾಲಿಗೆ ಅಸಾಧ್ಯ ಎನ್ನಿಸುತ್ತಿತ್ತು‌. ಆದರೆ ನನ್ನ ಜೊತೆಗೆ ಅಪ್ಪ ನಿಂತಿದ್ದಾರೆ ಎಂದುಕೊಂಡು, ನಾನೇ ಒಂದು ನಿರ್ಧಾರಕ್ಕೆ ಬಂದೆ. ಮಿತೇಶನ ಬಳಿಯೇ ಕೇಳಬೇಕೆಂದು‌. ಆದರೆ ಇಷ್ಟು ದಿನ ಮಾತನಾಡಲು ಹಿಂಜರಿಯುತ್ತಿದ್ದವಳು, ಕೋಪಗೊಳ್ಳುತ್ತಿದ್ದವಳು ಒಮ್ಮೆಲೇ ಈ ವಿಷಯ ಕೇಳಿದರೆ, ಅವನು ನಿಜ ಹೇಳಲಾರ ಎಂದುಕೊಂಡೆ. ಜಗಳದ ನಂತರ ಒಂದು ವಾರ ಅವನ ಸುದ್ದಿ ಇರಲಿಲ್ಲ. ಮತ್ತೆ ಕರೆ ಬಂತು, ನನಗೆ ಸತ್ಯ ತಿಳಿದುಕೊಳ್ಳಲೇಬೇಕಿತ್ತು. ಹೊಸದಾಗಿ ಕೋಪವಿಲ್ಲದೇ ಮಾತನಾಡಿದೆ. ಅವನಿಗೆ ತಲೆಕೆಟ್ಟಿತೋ ಏನೋ, ಅಲೆಗಳ ರಭಸದಿಂದ ಕೂಡಿರುತ್ತಿದ್ದ ಮಾತಿನ ಸಾಗರ, ಒಮ್ಮೆಲೇ ಶಾಂತವಾಗಿದ್ದನ್ನು ಕೇಳಿ, ಏನೂ ಮಾತನಾಡದೇ ಕರೆಯನ್ನು ಕೊನೆಗೊಳಿಸಿದ.   ಮತ್ತೆ ಮರುದಿನ ಕರೆ‌ಮಾಡಿ ಏನೇನೋ ಒಟಗುಟ್ಟಿದ, ನಾನು ಅದಕ್ಕೆ ಕೋಪಗೊಂಡು ಕಿರುಚಾಡುವೆ ಎಂದುಕೊಂಡವನಿಗೆ ಮತ್ತೆ ನನ್ನ ಮೆಲುನುಡಿಗಳು ಚಾಟಿ ಬೀಸಿದಂತಿದ್ದವೋ ಏನೋ! ಕೇಳಿಯೇ ಬಿಟ್ಟ ಬದಲಾವಣೆಗೆ ಕಾರಣ ಏನೆಂದು! ಏನಿಲ್ಲ ಎಂದೆ. ಮತ್ತೆ ಮಾತಿಲ್ಲ.  ನಾನು ಎಷ್ಟು ಶಾಂತಳಾದಂತೆ ನಟಿಸುತ್ತಿದ್ದರೂ ಅವನು ಕೊಡುವ ಹಿಂಸೆಗೆ ಕೋಪ ನೆತ್ತಿಗೇರು...

ತಿರುವು(ಭಾಗ-೨)

ಇಮೇಜ್
ತಿರುವು(ಭಾಗ-೨) ಕಥೆಯನ್ನು ಮುಂದುವರಿಸುತ್ತಾ..... ಹೊಸ ಜಾಗ, ಹೊಸ ಊರು, ಹೊಸ ತಿರುವು, ಹೊಸ ಹೆಜ್ಜೆ, ಎಲ್ಲವೂ ಹೊಸತು, ಆದರೆ ಮನಸ್ಸು ಮಾತ್ರ ಹಳೆಯ ಲೋಕದಲ್ಲೇ ಇತ್ತು. ಆದರೆ ಮನೆಯಲ್ಲಿ ನಡೆದ ಅವಾಂತರಗಳ ಹೇಳುವವರಿರಲಿಲ್ಲ‌. ನಾನಾದರೂ ನೆಮ್ಮದಿಯಾಗಿರಲಿ ಎಂದು ಅವರು ಎಲ್ಲಾ ನೋವನ್ನೂ ಮುಚ್ಚಿಡುತ್ತಿದ್ದರು. ಎಲ್ಲವೂ ಹೊಸತಾಗಿ ಸಾಗುತ್ತಿತ್ತು ಎನ್ನುವಾಗಲೇ, ಮಿತೇಶ ಅದು ಹೇಗೋ ನನ್ನ ಫೋನಿನ ನಂಬರನ್ನು ಪಡೆದು, ಕರೆ ಮಾಡಿದ. ಇದೊಂದು ತೊಂದರೆ ತಪ್ಪಿತೆಂದುಕೊಂಡಿದ್ದೆ, ಆದರೆ ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ ಅನ್ನೋ ತರ ಆಗಿತ್ತು ಇವನ ವಿಷಯದಲ್ಲಿ‌. ಊರಿಂದೂರಿಗೆ ಬಂದರೂ ಕಾಟವಂತೂ ತಪ್ಪಿರಲಿಲ್ಲ.  ಏನೇನೋ ಒಟಗುಟ್ಟಿದ, ಯಾವುದೂ ಕಿವಿಯಿಂದ ತಲೆಯನ್ನಂತೂ ತಲುಪಿರಲಿಲ್ಲ. ಒಂದು ಕರೆಗೆ ಸುಮ್ಮನಾದೆ, ಆದರೆ, ಅದು ಯಾವಾಗ ವಿಪರೀತವಾಯಿತೋ, ಆಗ ಅಮ್ಮನಿಗೆ ತಿಳಿಸಿ, ಅವನ ನಂಬರನ್ನು ಬ್ಲಾಕ್ ಮಾಡಿದೆ. ಎರಡು ದಿನದೊಳಗೆ ಮತ್ತೊಂದು ನಂಬರಿನಿಂದ ಕರೆ. ಪ್ರೀತಿ ಪ್ರೇಮ ಎಂದು ಎಷ್ಟೋ ಸಿನಿಮಾ ಶೈಲಿಯ ಮಾತುಗಳನ್ನಾಡಿದ. ಆದರೆ, ನನಗೊಂದು ಹಿಂಸೆಯಾಗಿತ್ತೇ ಹೊರತು ಪ್ರೀತಿ ಎನ್ನಿಸಲಿಲ್ಲ. ಆಶ್ಚರ್ಯ ಅನ್ನಿಸ್ತಾ? ಒಬ್ಬ ಅಷ್ಟು ಹಿಂದೆ ಬಿದ್ದು ಪ್ರೀತಿಸ್ತೀನಿ ಅಂದ್ರೂ, ಮನೇಲಿ ಹೇಳಿದ್ರೂ ಏನೂ ಅನ್ನಿಸದೆ, ಹಿಂಸೆ‌ ಎನ್ನುವ ನಾನೆಂತಾ ಕಲ್ಲು ಎಂತಲಾ? ಖಂಡಿತ ನಾನು ಕಲ್ಲಲ್ಲ. ಆದರೆ, ಒಂದು ಮಾತು ನನ್ನ ಅಭಿಪ್ರಾಯ ಕೇಳದೇ, ಯಾವ ಪರಿಸ್ಥಿತಿಯನ್ನೂ ಅ...