ಪೋಸ್ಟ್‌ಗಳು

ಜೂನ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮನಸು ಹೇಳುವುದೆಲ್ಲ ಗೀಚಿದ್ದರೆ

ಇಮೇಜ್
ಮನಸು ಹೇಳುವುದೆಲ್ಲ ಗೀಚಿದ್ದರೆ.... ಇಂದೋ, ಮುಂದೋ, ಎಂದೋ.. ನಗುವಿಗೆ ಸಂತೆಯೊಂದು ಸಿಗುತ್ತಿತ್ತೋ ಏನೋ.. ಅಳುವಿಗೆ ಕಾರಣಗಳ ಕಂತೆ ಸಿಗುತ್ತಿತ್ತೋ ಏನೋ.. ಅರ್ಥವಿಲ್ಲದ ಪದಪುಂಜಗಳ ರಾಶಿ ಇರುತ್ತಿತ್ತೋ ಏನೋ.. ಕೋಪಿಸಲು ವಿಷಯಗಳು ಎಷ್ಟಿರುತ್ತಿತ್ತೋ ಏನೋ.. ಹೃದಯ ಕರಗುತ್ತಿತ್ತೋ ಏನೋ.. ಅಥವಾ ಕಲ್ಲಾಗುತ್ತಿತ್ತೋ ಏನೋ.. ಭಯಬೀಳಿಸಿದ ಘಟನೆಗಳು  ಕಾಡುತ್ತಿತ್ತೋ ಏನೋ.. ಧೃತಿಗೆಡದ ನಡೆ ಚಕಿತಗೊಳಿಸುತ್ತಿತ್ತೋ ಏನೋ.. ಮನಸು ಹೇಳುವುದೆಲ್ಲ  ಗೀಚಿದ್ದರೆ.... ಮರೆವೆಂಬ ವರವೇ ಶಾಪವಾಗುತ್ತಿತ್ತೋ ಏನೋ...

ಊರ ಹಬ್ಬ

ಇಮೇಜ್
ಊರ‌ ಹಬ್ಬ  "ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ" ಅನ್ನೋ ಮಾತೇ ಇದೆ.. ಎಲ್ಲರಿಗೂ ಅವರವರ ಊರು ಅಂದ್ರೆ ಪ್ರೀತಿ ಜಾಸ್ತಿನೇ. ಹಾಗೇ ನನಗೂ ಕೂಡ. ನನ್ನೂರು ಸಾಲಿಗ್ರಾಮ. ನನಗೆ ಜನವರಿ ತಿಂಗಳೆಂದರೆ ನೆನಪಾಗುವುದು ಊರ ಹಬ್ಬ. ಒಂದು ತಿಂಗಳ ಮುಂಚೆಯಿಂದಲೇ ಕಾತರ, ಸಂಭ್ರಮ, ಜೊತೆಗೊಂದಿಷ್ಟು ತಯಾರಿ ಶುರುವಾಗತ್ತೆ.  ನಮ್ಮೂರ ಹಬ್ಬವನ್ನು ನಾನು ಯಾವ ವರ್ಷವೂ ಮಿಸ್ ಮಾಡಿದ್ದೇ ಇಲ್ಲ. ಆದ್ರೆ ಕಳೆದ ವರ್ಷ, ಇಂಟರ್ನಲ್ ಎಕ್ಸಾಮ್ನ ಟೈಮ್ ಟೇಬಲ್ ಬಂತು. ನೋಡಿದ್ರೆ ಹಬ್ಬದ ದಿನವೇ ಪರೀಕ್ಷೆ! ಇಂಟರ್ನಲ್ ಎಕ್ಸಾಂ ಆದ್ರೂ ಮಿಸ್ ಮಾಡೋ ಹಾಗಿಲ್ಲ. ವರ್ಷಕ್ಕೊಮ್ಮೆ ಬರೋ ಹಬ್ಬವನ್ನೂ ಮಿಸ್ ಮಾಡೋಕಾಗಲ್ಲ, ಏನಪ್ಪಾ ಮಾಡೋದು ಅಂತ ಯೋಚಿಸ್ತಾ ಇದ್ದೆ. ಎರಡನೇ ಶನಿವಾರ, ಸಂಕ್ರಾಂತಿ ಎಲ್ಲ ಒಟ್ಟಾಗಿ ಬಂದಿರೋದ್ರಿಂದ ಊರಿಗೆ ಹೋಗೋ ಪ್ಲಾನ್ ಹಾಕಿದ್ರು ನಮ್ಮ ಕ್ಲಾಸ್ ಅಲ್ಲಿ ಕೆಲವರು. ಇದೇ ಒಳ್ಳೆ ಸಮಯ ಅಂತ ಕ್ಲಾಸ್ ಲೀಡರ್ ಜೊತೆ ಸೀದಾ ಚೇರ್ ಪರ್ಸನ್ ಚೇಂಬರ್ಗೆ ಹೋದೆ. ಕ್ಲಾಸ್ ಲೀಡರ್ ಕೂರ್ಗ್ ಅವಳಾಗಿದ್ರಿಂದ, ಅವಳು ಮನೆಗೆ ಹೋಗದೆ ತುಂಬಾ ಟೈಮ್ ಆಯ್ತು, ರಜೆ ಇದೆ, ಸಂಕ್ರಾಂತಿ ಅಂತೆಲ್ಲಾ ಹೇಳಿದ್ರೂ , ಮೇಡಂ ಅವರದೇ ಕಾರಣ ಕೊಡ್ತಾ ಇದ್ರು. ಕೊನೆಗೆ ನಾನೂ ಕೂರ್ಗ್ನವಳು, ಮನೆಗೆ ಹೋಗದೆ ತುಂಬಾ ಟೈಮ್ ಆಯ್ತು(ಪ್ರತಿ ವಾರ ಮನೆಗೆ ಬರ್ತಾ ಇದ್ರೂ..😛)ಅಂತೆಲ್ಲಾ ಸುಳ್ಳು ಕಥೆ ಹೇಳಿ, ಅಲ್ಲಿರೋರ್ಗೆಲ್ಲಾ ದಮ್ಮಯ್ಯ ಹಾಕಿ, ಎಲ್ಲಾ ಪ್ರೊಫೆಸರ್ಸ್ ಗಳನ್ನು ಒಪ್ಪಿ...