ಮನಸು ಹೇಳುವುದೆಲ್ಲ ಗೀಚಿದ್ದರೆ

ಮನಸು ಹೇಳುವುದೆಲ್ಲ
ಗೀಚಿದ್ದರೆ....

ಇಂದೋ, ಮುಂದೋ,
ಎಂದೋ..
ನಗುವಿಗೆ ಸಂತೆಯೊಂದು
ಸಿಗುತ್ತಿತ್ತೋ ಏನೋ..
ಅಳುವಿಗೆ ಕಾರಣಗಳ ಕಂತೆ
ಸಿಗುತ್ತಿತ್ತೋ ಏನೋ..
ಅರ್ಥವಿಲ್ಲದ ಪದಪುಂಜಗಳ
ರಾಶಿ ಇರುತ್ತಿತ್ತೋ ಏನೋ..
ಕೋಪಿಸಲು ವಿಷಯಗಳು
ಎಷ್ಟಿರುತ್ತಿತ್ತೋ ಏನೋ..
ಹೃದಯ ಕರಗುತ್ತಿತ್ತೋ ಏನೋ..
ಅಥವಾ ಕಲ್ಲಾಗುತ್ತಿತ್ತೋ ಏನೋ..
ಭಯಬೀಳಿಸಿದ ಘಟನೆಗಳು 
ಕಾಡುತ್ತಿತ್ತೋ ಏನೋ..
ಧೃತಿಗೆಡದ ನಡೆ
ಚಕಿತಗೊಳಿಸುತ್ತಿತ್ತೋ ಏನೋ..

ಮನಸು ಹೇಳುವುದೆಲ್ಲ 
ಗೀಚಿದ್ದರೆ....
ಮರೆವೆಂಬ ವರವೇ
ಶಾಪವಾಗುತ್ತಿತ್ತೋ ಏನೋ...

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..