ಭಾವದಲೆ
ರಭಸದಿ ನುಗ್ಗುವ ಕೋಪ ಸ್ವಪ್ರತಿಷ್ಠೆಯಲಿ, ಕೈಬೀಸಿ ಕರೆಯುತಿದೆ ಅಡಗಿಹ ಮಾತುಗಳನು... ಮುನಿಸಿನಲಿ ಸಿಲುಕಿ ಪರಿತಪಿಸುತಿರೆ, ಮೂಲೆಯಲವಿತಿಹ ಅಶ್ರುಗಳೂ ತೊಯ್ಯುತಿವೆ ಅಕ್ಷಿಗಳನು... ಆವೇಶದಿ ಹೂಡಿದ ಬಾಣಗಳಿಂದ ಖಾಲಿ ಖಾಲಿಯಾಗಿವೆ ತಾಳ್ಮೆಯ ಬತ್ತಳಿಕೆ! ಆವರಿಸಿರುವ ಯೋಚನೆಗಳ ಹತ್ತಿಕ್ಕಲಾಗದೆ ಬೇಲಿ ಕಟ್ಟುತಿರುವೆ ಮನದ ಸೀಮೆಗೆ...