ಪೋಸ್ಟ್‌ಗಳು

ಜೂನ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಾಯ್ಕು(ಹೈಕು)ಗಳು

೧.  ಸತ್ಕಾರ್ಯ ಮಾಡಿ ಉಳಿಸೋಣ ಪ್ರಕೃತಿ ಅದೇ ಸುಕೃತಿ ೨. ಸಸ್ಯ ಉಳಿಸಿ ಹಸಿರಿನಲ್ಲಿಹುದು ಜೀವಿಯುಸಿರು ೩. ಆತ್ಮಸಂಯಮ ಮನಶೈತ್ಯವೇ ಗುರಿ ಈ ಯೋಗದಲಿ ೪. ಯೋಗದಲ್ಲಿದೆ ಆರೋಗ್ಯದ ಸೌಭಾಗ್ಯ ರೋಗದ ಅಂತ್ಯ ೫. ಮನೋರೋಗಕೆ ದಿವ್ಯೌಷಧ ಈ ಯೋಗ ಚಿತ್ತ ನಿರೋಗ

ಮಗುವಿನ ಮುಗ್ಧತೆ

ಇಮೇಜ್
  ಮಗುವಿನ ಮುಗ್ಧತೆ ಮುಂಗಾರಿನ ಸಮಯದಲಿ ಮುಸ್ಸಂಜೆ ಹೊತ್ತಲಿ ಕಿಟಕಿಸರಳಿನ ಹಿಂಬದಿಯಲಿ ಮಗುವೊಂದು ಹೊರ ಇಣುಕುತಿತ್ತು. ಕಾರ್ಮೋಡದ ಘರ್ಷಣೆಯಲಿ ಉದ್ಭವಿಸಿದ ಶಬ್ದದಲಿ ಕಣ್ಣುಕುಕ್ಕುವ ಬೆಳಕಿನಲಿ ಕ್ಷಣಕಾಲ ಮಗು ತತ್ತರಿಸಿತ್ತು. ಅಂಜಿಕೆಯ ನಡುವಿನಲಿ ಚಿಗುರೊಡೆದ ಆಸೆಯಲಿ ಮಿಂಚು-ಸಿಡಿಲಿನಾಟದಲಿ ಆ ಸಿಡಿಲು ತಾನಾಗಬಯಸಿತ್ತು. ಕಾಲಾಂತಕವದೆಷ್ಟೋ ಜೀವಿಗಳ ಪಾಲಿನಲಿ ಎಂದರಿಯದ ಮಗುವಿನ ಮುಗ್ಧತೆಯಲಿ ಆಕರ್ಷಿಸಿದ ಸಿಡಿಲು ತಾನಾಗುವ ಬಯಕೆಯಲಿ ಮಗುವಿನ ತಿಳಿಹೃದಯ ಪ್ರಕಟವಾಗಿತ್ತು.