ಪೋಸ್ಟ್‌ಗಳು

ಫೆಬ್ರವರಿ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭಾವಜೀವಿಯಾಗು..

ಇಮೇಜ್
ಈ ಸ್ಪರ್ಧಾತ್ಮಕ ಜಗದಲಿ ಹಣ ಮಾಡುವ ಹಟದಲಿ ಕಲ್ಲಾಗಿದೆಯಾ ಹೃದಯ...? ನಿನಗೊದಗಿದ ಸೋಲಿನಲಿ ಪರರ ಜಯದ ಈರ್ಷ್ಯೆಯಲಿ ತುಚ್ಛವಾಗಿದೆಯಾ ಹೃದಯ..? ಒಪ್ಪುವುದಾದರೆ...... ಸ್ಮರಿಸುತಿರು ಸಹಾಯಕರನು ಮರೆಯದಿರು ನಿನ್ನವರನು ಬದಲಾಯಿಸು ಭಾವನೆಗಳನು ಭಾವಜೀವಿಯಾಗು.... ಮೊದಲು ನೀ ಭಾವಜೀವಿಯಾಗು..! ಚಿತ್ರ: ವೈಷ್ಣವಿ ಕೆ 

ಸಮಯದ ಗೊಂಬೆ, ವ್ಯಸನದ ಬಂಧಿ

ಇಮೇಜ್
 ಆಶೆ ಬಲೆಯನು ಬೀಸಿ, ನಿನ್ನ ತನ್ನಡೆಗೆಳೆದು| ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ|| ಮೈಸವರಿ ಕಾಲನೆಡವಿಸಿ, ಗುಟ್ಟಿನಲಿ ನಗುವ| ಮೋಸದಾಟವೊ ದೈವ - ಮಂಕುತಿಮ್ಮ|| ಈ ಕಗ್ಗವನು ಅಂದೆಂದೋ ಓದುವಾಗ ಅರ್ಥವಾಗಲೇ ಇಲ್ಲ, ಈಗ ಅರ್ಥವಾಗುತ್ತಿದೆ, ಅದಕ್ಕೆ ನಿನ್ನ ಜೀವನವೇ ಉದಾಹರಣೆಯಾಗಬೇಕಿತ್ತೇ ಸುನೈನಾ ಎಂದು ನಾನು ಗೊಣಗುತ್ತ ತಯಾರಾಗುತ್ತಿರುವುದ ನೋಡಿ ನನ್ನ ಅಮ್ಮ, "ತಮ್ಮ ಪಯಣ ಎತ್ತ ಕಡೆಗೋ" ಎಂದರು. ಇದು, ಸಾವಿರದೊಂದನೇ ಬಾರಿ, ನಾನು ಹೇಳಿದ್ದು, ನೀನು ಕೇಳಿದ್ದು. ನೀನೆಷ್ಟು ಹೇಳಿದರೂ ಅಷ್ಟೇ ಅಮ್ಮ. ಸುನೈನಾಳನ್ನು ಒಮ್ಮೆ ನೋಡಿ, ಮಾತನಾಡಿ ಬರುತ್ತೇನೆ. ಮಾತನಾಡಿದ ಕೂಡಲೇ ಕೆಟ್ಟುಹೋಗುವುದಿಲ್ಲ ಎಂದೆ. "ನಿನ್ನ ಬಾಯಿಗೆ ಬಾಯಿ ಕೊಡಲಾದೀತೇ! ಏನಾದರೂ ಮಾಡಿಕೋ! ಹುಷಾರು" ಎಂದರು. ಧನ್ಯವಾದಗಳು ಎಂದು ಕೈಮುಗಿದು ನಕ್ಕು, ನನ್ನ ಸ್ಕೂಟಿಯೊಂದಿಗೆ ಹೊರಟೆ. ಆರು ತಿಂಗಳಿನಿಂದ ಸುನೈನಾಳದ್ದೇ ಚಿಂತೆ ನನಗೆ. ಯಾರೂ ಊಹಿಸಿಯೇ ಇರಲಿಲ್ಲ. ಅಂತಹ ಘಟನೆ ನಡೆದು ಹೋಗಿತ್ತು.  ಓಹ್! ನನ್ನ ಪರಿಚಯ ಆಗಿಲ್ಲ ಅಲ್ವಾ ನಿಮಗೆ! ನಾನು ಕ್ಷಮಾ. ವೃತ್ತಿಯಲ್ಲಿ ವಕೀಲೆ. ಸುನೈನಾ ನನ್ನ ಸ್ನೇಹಿತೆ, ನನಗಿಂತ ಎರಡು ವರ್ಷ ಚಿಕ್ಕವಳು ಮತ್ತು ನನ್ನ ಗುರುಗಳ ಮಗಳು. ಅಂದರೆ, ನಾನು ವಕೀಲೆಯಾಗಿ ಕೆಲಸ ಆರಂಭಿಸಿದ್ದೇ ಅವಳ ತಂದೆಯ ಮಾರ್ಗದರ್ಶನದಲ್ಲಿ. ಅವಳ ತಂದೆ ಡಾ|ಸತೀಶ್, ಪ್ರಸಿದ್ಧ ಕ್ರಿಮಿನಲ್ ವಕೀಲರು. ನಾನೀಗ ಹೋಗುತ್ತಿರುವುದು ಅವರ ಮನೆಗೇ. ನನ್ನ ...