ಪೋಸ್ಟ್‌ಗಳು

ಆಗಸ್ಟ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅರೆರೆರೆ ಗಿಣಿರಾಮ!

ಇಮೇಜ್
  ಅರೆರೆರೆ ಗಿಣಿರಾಮ! ಅರೆರೆರೆ ಗಿಣಿರಾಮ!... ಇದು ನಮ್ಮ ಮನೆಯ ಪೇರಳೆ ಮರದಲ್ಲಿನ ಕಾಯಿ, ಹಣ್ಣುಗಳನ್ನು ತಿನ್ನಲು ಗಿಳಿಗಳು ಬಂದಾಗಲೆಲ್ಲಾ ನಾನು ಗುನುಗೋ ಹಾಡು. ೩-೪ ಪ್ರಭೇದದ ಗಿಳಿಗಳು ಬರುತ್ತಾವಾದರೂ, ನನ್ನನ್ನು ಆಕರ್ಷಿಸಿದ್ದು ಚಿಟ್ಟು ಗಿಳಿ. ಇದನ್ನು ಚುಟ್ಟು ಗಿಳಿ,‌ ನೇತಾಡುವ ಗಿಳಿ ಎಂದೂ, ಆಂಗ್ಲ ಭಾಷೆಯಲ್ಲಿ ಲೋರಿಕೀಟ್, ವರ್ನಲ್ ಹ್ಯಾಂಗಿಂಗ್ ಪ್ಯಾರಟ್ ಎಂದೂ ಕರೆಯುತ್ತಾರೆ. ಪ್ರತಿಬಾರಿ ಮಳೆಗಾಲದಲ್ಲಿ ತಪ್ಪದೇ ಹಾಜರಾಗುವ ಈ ಗಿಳಿಗಳು, ತಮ್ಮ ಬಣ್ಣ, ಗಾತ್ರ, ವರ್ತನೆಯಿಂದಲೇ ಮನಸೋಲಿಸಬಲ್ಲವು. ಹೆಚ್ಚೆಂದರೆ ೫-೬ ಇಂಚು ಉದ್ದ, ಚಿಕ್ಕ ಬಾಲ, ಸುಂದರ ಕಣ್ಣುಗಳು, ಹಸಿರು ಬಣ್ಣದ ದೇಹ, ಕಿತ್ತಳೆ ಬಣ್ಣದ ಕೊಕ್ಕು, ಕೆಂಬಣ್ಣದ ಹಿಂಭಾಗ ಇವು ಈ ಚಿಟ್ಟು ಗಿಳಿಯ ಸಾಮಾನ್ಯ ಲಕ್ಷಣಗಳು. ಬಾವಲಿಯಂತೆ ತಲೆಕೆಳಗಾಗಿ ಮಲಗುವ, ಕೆಲವೊಮ್ಮೆ ತಲೆಕೆಳಗಾಗಿ ಕುಳಿತುಕೊಳ್ಳುವ ಹಾಗೂ ಆಹಾರ ಸೇವಿಸುವ ಕಾರಣದಿಂದಲೇ ಇವು ಇತರ ಗಿಳಿಗಳಿಗಿಂತ ಭಿನ್ನ ಮತ್ತು ನೇತಾಡುವ ಗಿಳಿ ಎಂದು ಕರೆಯಲ್ಪಡುವುದು. ಚಿಟ್ಟು ಗಿಳಿಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಕಷ್ಟದ ಕೆಲಸವೇ.. ಕಾರಣ, ಇವುಗಳ ಚುರುಕಾದ ಹಾರಾಟ. ಎಲೆಹಸಿರ ಬಣ್ಣದವುಗಳೇ ಆಗಿರುವುದರಿಂದ, ಈ ಗಿಳಿಗಳನ್ನು ಎಲೆಗಳ ಮಧ್ಯೆ ಹುಡುಕುವುದೂ ಒಂತರಹದ ಸೋಜಿಗದಾಟ. ಸಣ್ಣಗೆ ಮಳೆ ಹನಿಯುತ್ತಿರುವಾಗ, ಇವುಗಳು ಕೊಂಬೆಯಿಂದ ಕೊಂಬೆಗೆ ಹಾರಿ, ಆಹಾರ ಹುಡುಕುವ ಬಗೆ, ಆಹಾರ ಸಿಕ್ಕಿದೊಡನೆ ಅತ್ತಿತ್ತ ನೋಡಿಕೊಂಡು ...