ಪೋಸ್ಟ್‌ಗಳು

ಜುಲೈ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

'ಯಕ್ಷಸುಂದರ' ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ

ಇಮೇಜ್
 ' ಯಕ್ಷಸುಂದರ' ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ ಗಂಡುಕಲೆಯೆಂದೇ ಖ್ಯಾತವಾಗಿರುವ ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನ. ಈ ಕ್ಷೇತ್ರದಲ್ಲಿ ಮಿಂಚಿ ಮರೆಯಾದ ತಾರೆಗಳೊಂದಿಗೆ, ಪ್ರಸ್ತುತ ರಂಗವನ್ನಾಳುತ್ತಿರುವ ದಿಗ್ಗಜರು ಹಲವರು. ಅವರಲ್ಲೊಬ್ಬರು ಬಡಗಿನ ಪ್ರಧಾನ ವೇಷಧಾರಿ, 'ಯಕ್ಷಸುಂದರ' ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ. ೧೪/೦೭/೧೯೮೫ರಲ್ಲಿ ಗಂಗಾಧರ ಶೆಟ್ಟಿಗಾರ್, ಸುಲೋಚನ ದಂಪತಿಗಳ ಮಗನಾಗಿ ಉಡುಪಿಯಲ್ಲಿ ಜನಿಸಿದ ಇವರು, ಬೆಳೆದಿದ್ದೆಲ್ಲಾ ಮಂದಾರ್ತಿಯಲ್ಲಿ. ತಂದೆ ವಿದೇಶದಲ್ಲಿದ್ದ ಕಾರಣ, ಪ್ರಾಥಮಿಕ ವಿದ್ಯಾಭ್ಯಾಸಕ್ಕಾಗಿ ತಾಯಿಮನೆ ಮಂದಾರ್ತಿಗೆ ಆಗಮಿಸಿ, ಸೋದರಮಾವನ ಆಸರೆಯಲ್ಲಿ, ತಾಯಿ-ತಮ್ಮ-ತಂಗಿಯೊಂದಿಗೆ ಬಾಡಿಗೆಮನೆಯಲ್ಲಿ ವಾಸಿಸಿದರು. ಬಾಲ್ಯದಲ್ಲಿ, ಅತಿಯಾದ ಶಿಸ್ತಿನ ಮಾವನೆಂದರೆ ಭಯ. ಅವರೆದುರು ನಿಲ್ಲಲೂ ಹೆದರುತ್ತಿದ್ದುದಲ್ಲದೆ, ಎದುರಾದಾಗ ಸೀದಾ ಕೋಣೆಯೊಳಗೆ ಓಡಿ ಅಡಗಿಕೊಳ್ಳುತ್ತಿದ್ದರಂತೆ. ಮಂದಾರ್ತಿಗೆ ಬಂದ ಮೇಲೆ ಈ ಪುಟ್ಟ ಪ್ರಸನ್ನರನ್ನು ಆಕರ್ಷಿಸಿದ್ದು ಅಲ್ಲಿ ನಡೆಯುತ್ತಿದ್ದ ಮಂದಾರ್ತಿ ಮೇಳದ ಯಕ್ಷಗಾನ. ಪ್ರತೀ ದಿನ ತಪ್ಪದೇ ಆಟ ನೋಡಲು ಹೋಗುತ್ತಿದ್ದ ಇವರು, ಅಲ್ಲಿ ಕಣ್ಣಿಮನೆ ಗಣಪತಿ ಭಟ್ಟರಲ್ಲಿ ಹೇಳುತ್ತಿದುದೊಂದೇ, "ಮೇಳಕ್ಕೆ ಸೇರಿಸಿಕೊಳ್ಳಿ, ಹಣ ಕೊಡದಿದ್ದರೂ ಪರವಾಗಿಲ್ಲ" ಎಂದು. ಏಳನೇ ತರಗತಿಯಲ್ಲಿಯೇ ವೇಷ ಹಾಕಲು ಆರಂಭಿಸಿದ್ದ ಇವರಿಗೆ ಮೊದಲ ಗುರು ಮಕ್ಕಳ ಮೇಳ ತಂತ್ರಾಡಿಯ ಹಿರಿಯಣ್ಣ ...