ಹಾಗೇ ಸುಮ್ಮನೆ - ೧ (ನಗು)

ಎದುರಿನ ನಗುವೊಂದು!
ನಾಲ್ಕು ಗೋಡೆಗಳ ನಡುವೆ
ಅದು ಮಿಳಿತ ಬಗೆ ನೂರೊಂದು!
ಕಂಗಳ ಕೊಳದಿಂದಿಳಿದು,
ನಲುಗೆನ್ನೆಯ ಸವರಿ, ಕೆಂಪಿಟ್ಟು
ತುಟಿಯ ಅಂಚಲಿ ಕುಳಿತು,
ಕುಣಿಯುವ ಪರಿ ಬೇರೊಂದು!
ಮನದ ಕಾರ್ಮುಗಿಲ ಸರಿಸಿ,
ತಿಳಿ ಮನದ ತೆಳು ಮುಗಿಲು
ನಗುವ ಮಳೆಯಾಗಿ
ತಂಪಿರಿಸೋ ಬಗೆ ಮತ್ತೊಂದು!

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು😊🙏..